ಬೆಂಗಳೂರು: ಚಂದನವನದಲ್ಲಿ ಇನ್ನೊಂದು ಚಂದದ ಪ್ರೇಮಕಥೆ ನಿಮ್ಮ ಮುಂದೆ ಬರಲು ಸಿದ್ಧವಾಗಿದೆ. ಯುವ ಪ್ರೇಮಿಗಳ ಅಂತರಾಳದ ಗುಸು ಗುಸು ಪ್ರೀತಿಯನ್ನು ಕನ್ನಡ ಪ್ರೇಕ್ಷಕರಿಗೆ ಉಣಬಡಿಸಲು `ರಾಜಹಂಸ’ ಚಿತ್ರತಂಡ ಬರ್ತಿದೆ.
ಧಾರಾವಾಹಿ ಮೂಲಕ ಕನ್ನಡಿಗರ ಮನೆ ಮಾತಾಗಿರುವ ಪುಟ್ಟ ಗೌರಿ (ರಜಿನಿ ರಾಘವನ್) ಮೊದಲ ಬಾರಿಗೆ ಬೆಳ್ಳಿ ಪರದೆಯಲ್ಲಿ ಮಿಂಚಲಿದ್ದಾರೆ. ಇನ್ನೂ ಸಿನಿಮಾದಲ್ಲಿ ರಜಿನಿ (ಹಂಸಾಕ್ಷಿ)ಗೆ ಜೊತೆಯಾಗಿ ಗೌರಿಶಿಕರ್ ನಾಯಕರಾಗಿ ಬಣ್ಣ ಹಚ್ಚಿದ್ದಾರೆ. ಚಿತ್ರದಲ್ಲಿ ಶ್ರೀಧರ್, ಬಿ.ಸಿ.ಪಾಟೀಲ್, ಯಮುನಾ, ತಬಲಾ ನಾಣಿ, ವಿಜಯ್ ಚಂಡೂರ್, ಬುಲೆಟ್ ಪ್ರಕಾಶ್ ಸೇರಿದಂತೆ 70ಕ್ಕೂ ಹೆಚ್ಚು ಕಲಾವಿದರು ನಟಿಸಿದ್ದಾರೆ. ನಾಯಕನ ತಂದೆಯಾಗಿ ನಟ ಶ್ರೀಧರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ.
Advertisement
Advertisement
ಸಿನಿಮಾದಲ್ಲಿ ಒಟ್ಟು 6 ಹಾಡುಗಳಿವೆ. ಈಗಾಗಲೇ ಹಾಡುಗಳು ಎಲ್ಲರ ಮನದಲ್ಲಿ ಗುನುಗುಟ್ಟುತ್ತಿವೆ. ಬಾರಮ್ಮ ಬಾರಮ್ಮ ಭಾರತಿ, ಮುಲಾ ಮುಲಾ ಸೇರಿದಂತೆ ಎಲ್ಲ ಹಾಡುಗಳು ಸಿನಿರಸಿಕರ ಮನ ಸೆಳೆಯುತ್ತಿದ್ದು, ಯುಟ್ಯೂಬ್ ನಲ್ಲಿ ಟ್ರೆಂಡ್ ಸೃಷ್ಟಿ ಮಾಡಿವೆ. ರಘು ದೀಕ್ಷಿತ್ ಹಾಡಿರುವ ಹಾಡನ್ನು ಉತ್ತರ ಭಾರತದ ಒಟ್ಟು 8 ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಇನ್ನೂ ಬಾರಮ್ಮ ಬಾರಮ್ಮ ಹಾಡು RAP STAR ಚಂದನ್ ಶೆಟ್ಟಿ ಧ್ವನಿಯಲ್ಲಿ ಮೂಡಿಬಂದಿದೆ.
Advertisement
30 ದಿನ ಬೆಂಗಳೂರಿನಲ್ಲಿ, 30 ದಿನ ತೀರ್ಥಹಳ್ಳಿಯಲ್ಲಿ ಸೇರಿದಂತೆ ಮೈಸೂರಿನಲ್ಲಿ ಸಿನಿಮಾದ ಚಿತ್ರೀಕರಣ ನಡೆದಿದೆ. ಜನಮನ ಸಿನಿಮಾಸ್ ಚಿತ್ರದ ನಿರ್ಮಾಣ ಜವಬ್ದಾರಿಯನ್ನು ಹೊತ್ತುಕೊಂಡಿದೆ. ನಿರ್ದೇಶಕ ಜಡೇಶ್ ಕುಮಾರ್ ಹಂಪಿ ಅವರು ಕಥೆ, ಚಿತ್ರಕಥೆ ಸೇರಿದಂತೆ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸಾಹಿತ್ಯ, ಸಂಭಾಷಣೆ-ಧನಂಜಯ್ ದಿಡಗ, ಛಾಯಗ್ರಹಣ ಅರೂರ್ ಸುಧಾಕರ್ ಸೇರಿದಂತೆ ವಿವಿಧ ತಂತ್ರಜ್ಞರು ಸಿನಿಮಾಗೆ ಕೆಲಸ ಮಾಡಿದ್ದಾರೆ.
Advertisement
ಸಿನಿಮಾದ ಹಕ್ಕುಗಳನ್ನು ಈಗಾಗಲೇ ಮಾರ್ಸ್ ಡಿಸ್ಟ್ರಿಬ್ಯೂಟರ್ಸ್ ನ ಸುರೇಶ್ ಖರೀದಿಸಿದ್ದಾರೆ. ಒಟ್ಟಿನಲ್ಲಿ ಸುಂದರ ರೋಮ್ಯಾಂಟಿಕ್, ಆ್ಯಕ್ಷನ್ ಸ್ಟೋರಿಯನ್ನ ರಾಜಹಂಸ ಒಳಗೊಂಡಿದೆ.