ಕಾರವಾರ: ಕಡಲತೀರಕ್ಕೆ ಬಂದ ಭಾರತೀಯ ಕರಾವಳಿ ಕಾವಲು ಪಡೆಯ ಹೋವರ್‌ಕ್ರಾಫ್ಟ್ (Hovercraft) ನೌಕೆಯು ಆಗಮಿಸಿದ್ದು, ಸ್ಥಳೀಯ ಜನರ ಕುತೂಹಲಕ್ಕೆ ಕಾಣವಾಗಿದೆ.
ಕಾರವಾರದ (Karwar) ಟ್ಯಾಗೋರ್ ಬೀಚ್‌ನಲ್ಲಿ ಲಂಗರು ಹಾಕಿದ ಎರಡು ಹೋವರ್‌ಕ್ರಾಫ್ಟ್ ನೌಕೆಯು ಇಲ್ಲಿ ವಿಶ್ರಾಂತಿ ಪಡೆಯುತ್ತಿದೆ. ನೀರು, ಭೂಮಿ, ಮರಳು, ಕೆಸರಿನ ಮೇಲೆಯೂ ಸರಾಗವಾಗಿ ಚಲಿಸಬಲ್ಲ ಈ ನೌಕೆ ಅಧಿಕ ವೇಗದ ಚಲಿಸುವ ಸಾಮರ್ಥ್ಯ ಹೊಂದಿದೆ. ಇದನ್ನೂ ಓದಿ: ಕರ್ನಾಟಕಕ್ಕೆ ಮತ್ತೆ ಶಾಕ್ – 15 ದಿನ ತಮಿಳುನಾಡಿಗೆ ಹರಿಯಲಿದೆ 3 ಸಾವಿರ ಕ್ಯೂಸೆಕ್
ಸಾಂಪ್ರದಾಯಿಕ ಹಡಗುಗಳಿಗೆ ಕಷ್ಟವಾಗುವಂತಹ ಆಳವಿಲ್ಲದ ಪ್ರದೇಶದಲ್ಲೂ ತೆರಳು ಸಾಮರ್ಥ್ಯದ ಈ ನೌಕೆ ಇದೀಗ ಗೋವಾದಿಂದ ಹೊರಟು ಕಾರವಾರಕ್ಕೆ ಆಗಮಿಸಿದೆ. ಇನ್ನು ಈ ನೌಕೆಗಳ ನಿಲುಗಡೆಗೆ ಭಾರತೀಯ ತಡರಕ್ಷಕ ದಳ ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲ ತೀರ ಭಾಗದಲ್ಲಿ ಸ್ಥಳವನ್ನು ಕೇಳಲಾಗಿತ್ತು. ಇದಕ್ಕೆ ಮೀನುಗಾರರು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದರು.
ಇದೀಗ ಎರಡು ಹೋವರ್‌ಕ್ರಾಫ್ಟ್ ನೌಕೆ ಕಡಲ ತೀರದಲ್ಲಿ ಲಂಗುರು ಹಾಕಿದ್ದು, ಕುತೂಹಲದ ಜೊತೆ ಮೀನುಗಾರರಿಗೂ ಆತಂಕ ತಂದೊಡ್ಡಿದೆ. ಇದನ್ನೂ ಓದಿ: ಗ್ಯಾರಂಟಿ ಯೋಜನೆಗಳ ಫಲಾನುಭವಿಗಳೇ ಬಿಜೆಪಿ ನಾಯಕರು: ಕಾಂಗ್ರೆಸ್ ಟೀಕೆ


