ಮುಂಬೈ: ಪ್ರಸಿದ್ಧ ರ್ಯಾಪರ್, ಗಾಯಕ ಹನಿ ಸಿಂಗ್ (Honey Singh) ವಿರುದ್ಧ ಮಹಾರಾಷ್ಟ್ರ ಸೈಬರ್ ಇಲಾಖೆಯು (Maharashtra Cyber Dept) ಹೊಸ ಸಮನ್ಸ್ ಜಾರಿ ಮಾಡಿದ್ದು, ವಿಚಾರಣೆಗೆ ಹಾಜರಾಗದಿದ್ದರೆ ಲುಕ್ ಔಟ್ (Look Out Notice) ನೋಟಿಸ್ ಹೊರಡಿಸುವ ಎಚ್ಚರಿಕೆ ನೀಡಿದೆ.
ಕನ್ಸರ್ಟ್ ಒಂದರಲ್ಲಿ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾರೆ ಎಂದು ದೂರಿನ ಆಧಾರದ ಇದೀಗ ಸೈಬರ್ ಪೊಲೀಸರು ಸಮನ್ಸ್ ಜಾರಿ ಮಾಡಿದ್ದು, ಅಕ್ಟೋಬರ್ 16ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಇದನ್ನೂ ಓದಿ: ಶಿವಮೊಗ್ಗ | ಆನ್ಲೈನ್ ಹೂಡಿಕೆ ಜಾಹೀರಾತು ನಂಬಿ 1.20 ಕೋಟಿ ಕಳೆದುಕೊಂಡ ಉದ್ಯಮಿ
ಇದಕ್ಕೂ ಮುನ್ನ ಹನಿ ಸಿಂಗ್ ಅವರಿಗೆ ಮೂರು ಬಾರಿ ಸಮನ್ಸ್ ಜಾರಿಮಾಡಲಾಗಿತ್ತಾದರೂ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ. ಹೀಗಾಗಿ ಇದೀಗ ಹೊಸ ಸಮನ್ಸ್ ನೀಡಿದ್ದು, ಒಂದು ವೇಳೆ ಈ ಬಾರಿ ವಿಚಾರಣೆಗೆ ಹಾಜರಾಗದಿದ್ದರೆ ಲುಕ್ ನೋಟಿಸ್ ಹೊರಡಿಸುವುದಾಗಿ ಸೈಬರ್ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಇದಕ್ಕೂ ಮುನ್ನ ಅ.5ಕ್ಕಿಂತ ಮುಂಚೆ ವಿಚಾರಣೆಗೆ ಹಾಜರಾಗುವಂತೆ ಸೈಬರ್ ಅಧಿಕಾರಿಗಳು ಹನಿಸಿಂಗ್ ಅವರಿಗೆ ತಿಳಿಸಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ವಿದೇಶದಲ್ಲಿದ್ದೇನೆ ಎಂದು ತಿಳಿಸಿದ್ದರು.
ಏನಿದು ಪ್ರಕರಣ?
ಗಾಯಕ ಹನಿಸಿಂಗ್ ಅವರು ಕನ್ಸರ್ಟ್ ಒಂದರಲ್ಲಿ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದರು ಎಂದು ದೂರು ನೀಡಲಾಗಿತ್ತು. ಈ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿತ್ತು. ಇದರ ಬೆನ್ನಲ್ಲೇ ಮಹಾರಾಷ್ಟ್ರ ಸೈಬರ್ ಇಲಾಖೆಯು ತನಿಖೆ ಆರಂಭಿಸಿ, ಹನಿಸಿಂಗ್ ಅವರಿಗೆ ವಿಚಾರಣೆಗೆ ಬರುವಂತೆ ನೋಟಿಸ್ ನೀಡಿತ್ತು. ಆರೋಪಗಳ ಮೇಲಿನ ತನಿಖೆ ಮುಂದುವರಿದಿದ್ದು, ತನಿಖೆ ಪೂರ್ಣಗೊಂಡ ಬಳಿಕ ಸತ್ಯಾಂಶ ಹೊರಬರಲಿದೆ. ಇದನ್ನೂ ಓದಿ: ಈ ಬಾರಿ ಅಂಬಾರಿ ಹೊರಲಿದ್ದಾನೆ ಪ್ರಶಾಂತ

