ಹೋಂಡಾ ಕಂಪನಿಯು ತನ್ನ ಎಂಟ್ರಿ-ಲೆವೆಲ್ ಕ್ರೂಸರ್ ಬೈಕ್ Rebel 300 ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದರ ಆರಂಭಿಕ ಬೆಲೆ 2.22 ಲಕ್ಷ ರೂ. (ಎಕ್ಸ್‌ಶೋರೂಂ) ಆಗಿದೆ. ಇನ್ನೂ E-Clutch (ಇ-ಕ್ಲಚ್) ತಂತ್ರಜ್ಞಾನ ಹೊಂದಿರುವ ಆವೃತ್ತಿಯ ಬೆಲೆ 2.62 ಲಕ್ಷ ರೂ. (ಎಕ್ಸ್‌ಶೋರೂಂ) ನಷ್ಟಿದೆ.
Honda Rebel 300 ಬೈಕ್ ಬಾಬರ್ ಶೈಲಿಯ ಆಕರ್ಷಕ ವಿನ್ಯಾಸವನ್ನು ಹೊಂದಿದೆ. ಟಿಯರ್‌ಡ್ರಾಪ್ ಆಕಾರದ ಪೆಟ್ರೋಲ್ ಟ್ಯಾಂಕ್, ಕಡಿಮೆ ಎತ್ತರದ ಸೀಟ್ ಹಾಗೂ ಕಾಂಪ್ಯಾಕ್ಟ್ ಬಾಡಿ ವಿನ್ಯಾಸ ಬೈಕ್‌ಗೆ ವಿಶಿಷ್ಟ ಲುಕ್ ನೀಡುತ್ತವೆ. ಮುಂಭಾಗದಲ್ಲಿ ಸರ್ಕ್ಯುಲರ್ LED ಹೆಡ್‌ಲ್ಯಾಂಪ್ ಅಳವಡಿಸಲಾಗಿದೆ.

ಬೈಕ್‌ನಲ್ಲಿ ಸಿಂಗಲ್-ಪಾಡ್ ಇನ್‌ಸ್ಟ್ರುಮೆಂಟ್ ಕನ್ಸೋಲ್ ನೀಡಲಾಗಿದ್ದು, ಇದರಲ್ಲಿ Honda RoadSync ಕನೆಕ್ಟಿವಿಟಿ ಮತ್ತು ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಸೌಲಭ್ಯಗಳು ಲಭ್ಯವಿವೆ.
286cc ಎಂಜಿನ್
ಹೊಂಡಾ ರೆಬೆಲ್ 300 ಬೈಕ್ 286cc, ಲಿಕ್ವಿಡ್-ಕೂಲ್ಡ್, ಸಿಂಗಲ್-ಸಿಲಿಂಡರ್ ಎಂಜಿನ್ ಒಳಗೊಂಡಿದೆ. ಈ ಎಂಜಿನ್ 29.5 ಬಿಹೆಚ್‌ಪಿ ಗರಿಷ್ಠ ಪವರ್ ಮತ್ತು 27.5 ಎನ್‌ಎಂ ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ. ಎಂಜಿನ್ 6-ಸ್ಪೀಡ್ ಗೇರ್‌ಬಾಕ್ಸ್ ಒಳಗೊಂಡಿದೆ.

ಇದರ E-Clutch (ಇ-ಕ್ಲಚ್) ಆವೃತ್ತಿಯು, ರೈಡರ್ ಕ್ಲಚ್ ಲಿವರ್ ಅನ್ನು ಬಳಸದೇ ಗೇರ್‌ಗಳನ್ನ ಬದಲಾಯಿಸಬಹುದಾಗಿದೆ. ಇದರಿಂದ ನಗರ ಸಂಚಾರ ಸೇರಿದಂತೆ ವಿವಿಧ ಪರಿಸ್ಥಿತಿಗಳಲ್ಲಿ ರೈಡಿಂಗ್ ಮತ್ತಷ್ಟು ಸುಲಭವಾಗಲಿದೆ.
ಸಸ್ಪೆನ್ಷನ್ ಮತ್ತು ಬ್ರೇಕಿಂಗ್
ರೆಬೆಲ್ 300 ಬೈಕ್‌ನ ಸಸ್ಪೆನ್ಷನ್ ಸೆಟಪ್‌ನಲ್ಲಿ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಹಿಂಭಾಗದಲ್ಲಿ ಟ್ವಿನ್ ಶಾಕ್ ಅಬ್ಸಾರ್ಬರ್‌ಗಳು ನೀಡಲಾಗಿದೆ. ಬ್ರೇಕಿಂಗ್ ವಿಭಾಗದಲ್ಲಿ ಮುಂಭಾಗ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್‌ಗಳನ್ನ ಅಳವಡಿಸಲಾಗಿದ್ದು, ಸುರಕ್ಷತೆಗಾಗಿ ಡ್ಯುಯಲ್-ಚಾನೆಲ್ ABS ಸಹ ನೀಡಲಾಗಿದೆ.

ಒಟ್ಟಾರೆ, ಕ್ಲಾಸಿಕ್ ಬಾಬರ್ ವಿನ್ಯಾಸ, 286cc ಎಂಜಿನ್, ಆಧುನಿಕ ಕನೆಕ್ಟಿವಿಟಿ ಫೀಚರ್‌ಗಳು ಮತ್ತು ಇ-ಕ್ಲಚ್ ತಂತ್ರಜ್ಞಾನದೊಂದಿಗೆ Honda Rebel 300 ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಕ್ರೂಸರ್ ಆಯ್ಕೆಯಾಗಿ ಗಮನ ಸೆಳೆಯುತ್ತಿದೆ.
