ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ (Amitshah) ಅವರ ಹಿರಿಯ ಸಹೋದರಿ ರಾಜೇಶ್ವರಿಬೆನ್ ಶಾ (Rajeshwariben Shah) ಇಂದು ನಿಧನರಾಗಿದ್ದಾರೆ.
ರಾಜೇಶ್ವರಿಬೆನ್ ಅವರಿಗೆ ಸುಮಾರು 60 ವರ್ಷ ವಯಸ್ಸಾಗಿತ್ತು. ಕೆಲದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಮುಂಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ.
Advertisement
ಸಹೋದರಿಯ ನಿಧನದ ಹಿನ್ನೆಲೆಯಲ್ಲಿ ಹೇಗ ಸಚಿವರು ಇಂದು ಗುಜರಾತ್ನಲ್ಲಿ (Gujrat) ನಡೆಯಬೇಕಿದ್ದ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದಾರೆ. ಕೆಲ ದಿನಗಳಿಂದ ರಾಜೇಶ್ವರಿಬೆನ್ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಹೀಗಾಗಿ ಅವರು ಮುಂಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಮುಂಜಾನೆ ಅವರು ಕೊನೆಯುಸಿರೆಳೆದರು ಎಂದು ಬಿಜೆಪಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
Advertisement
Advertisement
ಸಹೋದರಿಯ ರಾಜೇಶ್ವರಿಬೆನ್ ಪಾರ್ಥಿವ ಶರೀರವನ್ನು ಇಂದು ಬೆಳಗ್ಗೆ ಅಹಮದಾಬಾದ್ನಲ್ಲಿರುವ ಅವರ ನಿವಾಸಕ್ಕೆ ತರಲಾಗಿತ್ತು. ನಂತರ ಥಾಲ್ತೇಜ್ ಚಿತಾಗಾರದಲ್ಲಿ ಅವರ ಅಂತಿಮ ಸಂಸ್ಕಾರ ನಡೆದಿದೆ. ಇದನ್ನೂ ಓದಿ: 60 ವರ್ಷಗಳಿಂದ ಮಾಡಿದ ಅನ್ಯಾಯಕ್ಕೆ ಕಾಂಗ್ರೆಸ್ಸಿಗರು ಈಗ ನ್ಯಾಯ ಕೇಳಲು ಹೊರಟಿದ್ದಾರೆ: ಮುನಿಸ್ವಾಮಿ ವ್ಯಂಗ್ಯ
Advertisement
ಅಹಮದಾಬಾದ್ಗೆ ಬಂದಿದ್ದರು ಗೃಹ ಸಚಿವ: ಅಮಿತ್ ಶಾ ಗಾಂಧಿನಗರ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಹೀಗಾಗಿ ಬಿಜೆಪಿ ಬೆಂಬಲಿಗರೊಂದಿಗೆ ಮಕರ ಸಂಕ್ರಾಂತಿಯನ್ನು ಆಚರಿಸಲು ಅವರು ಭಾನುವಾರದಿಂದ ಅಹಮದಾಬಾದ್ನಲ್ಲಿದ್ದರು. ಇಂದು ಬನಸ್ಕಾಂತ ಮತ್ತು ಗಾಂಧಿನಗರ ಜಿಲ್ಲೆಗಳಲ್ಲಿ ಎರಡು ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕಿತ್ತು. ಬನಸ್ಕಾಂತದ ದೇವದರ್ ಗ್ರಾಮದ ಬನಸ್ ಡೈರಿ ಉದ್ಘಾಟನೆ ಮಾಡಬೇಕಿತ್ತು. ಬಳಿಕ ಮಧ್ಯಾಹ್ನ ಅವರು ಗಾಂಧಿನಗರದ ರಾಷ್ಟ್ರೀಯ ರಕ್ಷಣಾ ವಿಶ್ವವಿದ್ಯಾಲಯದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸುವವರಿದ್ದರು. ಈ ಎರಡೂ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದಾರೆ.
ಉತ್ತರಾಯಣ ಹಬ್ಬದ ನಿಮಿತ್ತ ಗೃಹ ಸಚಿವ ಶಾ ಭಾನುವಾರ ಭಗವಾನ್ ಜಗನ್ನಾಥ ದೇವಸ್ಥಾನಕ್ಕೆ ಆಗಮಿಸಿದ್ದರು. ಅಲ್ಲಿ ಕುಟುಂಬ ಸದಸ್ಯರೊಂದಿಗೆ ಪೂಜೆ ಸಲ್ಲಿಸಿದರು. ಇದಾದ ಬಳಿಕ ವೇಜಲಪುರದಲ್ಲೂ ಗಾಳಿಪಟ ಹಾರಿಸಿದರು. ಸೋಮವಾರ ಅಹಮದಾಬಾದ್ ಮತ್ತು ಗಾಂಧಿನಗರದ ಉತ್ತರಾಯಣ ಆಚರಣೆಯಲ್ಲಿ ಭಾಗವಹಿಸುವ ಯೋಜನೆ ಇತ್ತು.