ಬೆಂಗಳೂರು: ರಾಜ್ಯದ ಮಹತ್ವಾಕಾಂಕ್ಷಿ ಬೇಡ್ತಿ-ವರದಾ (ಹಿರೇವಡ್ಡಟ್ಟಿ) ನದಿ ಜೋಡಣೆ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯು ಕೃಷ್ಣಾ ಭಾಗ್ಯ ಜಲ ನಿಗಮದ ಕೇಂದ್ರ ಕಚೇರಿಯಲ್ಲಿ, ಮಾನ್ಯ ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ (N Chaluvarayaswamy) ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಇನ್ನು ಈ ಸಭೆಯಲ್ಲಿ ಕೇಂದ್ರ ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳು, ರಾಜ್ಯ ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿಗಳು ಹಾಗೂ KNNL, VJNL, CNNL, KBJNL ನಿಗಮಗಳ ಎಲ್ಲಾ ವ್ಯವಸ್ಥಾಪಕ ನಿರ್ದೇಶಕರು, ಸಚಿವರ ಆಪ್ತ ಕಾರ್ಯದರ್ಶಿಗಳು ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಇದನ್ನೂ ಓದಿ: ಮೋದಿ ಒಬ್ಬ ‘Tough Manʼ – ಕ್ವಾಡ್ ಸಭೆಯಲ್ಲಿ ಟ್ರಂಪ್ ಬಣ್ಣನೆ
ಯೋಜನೆಯ ವಿಸ್ತೃತ ವಿವರ:
*ಬೃಹತ್ ಮೊತ್ತದ ಯೋಜನೆ: ರಾಷ್ಟ್ರೀಯ ಜಲ ಅಭಿವೃದ್ಧಿ ಏಜೆನ್ಸಿ – NWDA ಸಿದ್ಧಪಡಿಸುತ್ತಿರುವ ಈ ವಿಸ್ತೃತ ನದಿ ಜೋಡಣೆ ಯೋಜನೆಗೆ ಬರೋಬ್ಬರಿ 9,652.73 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.
‘ಬೇಡ್ತಿ-ವರದಾ ನದಿ ಜೋಡಣೆ ಯೋಜನೆ’ಯ ಪ್ರಗತಿ ಪರಿಶೀಲನಾ ಸಭೆಯನ್ನು ಇಂದು ಬೆಂಗಳೂರಿನ ಕೆಬಿಜೆಎನ್ಎಲ್ ಕೇಂದ್ರ ಕಚೇರಿಯಲ್ಲಿ ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳೊಂದಿಗೆ ನಡೆಸಲಾಯಿತು.
ಅಂದಾಜು ₹9,652.73 ಕೋಟಿ ವೆಚ್ಚದ ಈ ಯೋಜನೆಯಿಂದ ಉತ್ತರ ಕನ್ನಡ, ಧಾರವಾಡ, ಗದಗ, ಹಾವೇರಿ ಮತ್ತು ಕೊಪ್ಪಳ ಜಿಲ್ಲೆಗಳ 70,053 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಹಾಗೂ 20.21 ಲಕ್ಷ ಜನರಿಗೆ ಕುಡಿಯುವ ನೀರಿನ ಸೌಲಭ್ಯ ದೊರೆಯಲಿದೆ. ಅರಣ್ಯ ಇಲಾಖೆಯ ಅನುಮತಿಗಳನ್ನು ಶೀಘ್ರವಾಗಿ ಪಡೆದು, ನಿಗದಿತ ಕಾಲಮಿತಿಯೊಳಗೆ ವಿಸ್ತೃತ ಯೋಜನಾ ವರದಿಯನ್ನು (DPR) ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
— N Chaluvarayaswamy (@NChaluvarayaS) November 17, 2026
ನೀರಿನ ಸದ್ಬಳಕೆ: ಪಶ್ಚಿಮಕ್ಕೆ ಹರಿಯುವ ಬೇಡ್ತಿ ನದಿಯ 524 Mm3 (ಸುಮಾರು 18.5 ಖಿಒಅ) ಹೆಚ್ಚುವರಿ ನೀರನ್ನ ಮುಂಗಾರು ಹಂಗಾಮಿನಲ್ಲಿ ಪೈಪ್ಲೈನ್ ಮತ್ತು ಲಿಫ್ಟ್ ಮೂಲಕ ತುಂಗಭದ್ರಾ ಉಪ-ಕಣಿವೆಗೆ ತಿರುಗಿಸಲಾಗುತ್ತದೆ. ಇದನ್ನೂ ಓದಿ: ಆನೆಗಳ ಸ್ಥಳಾಂತರಕ್ಕೆ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಕಳವಳ; ಚಿಕ್ಕಮಗಳೂರು ಜನರಲ್ಲಿ ಆತಂಕ
ಹಂಚಿಕೆ ವಿವರ: ಲಭ್ಯವಾಗುವ ನೀರಿನಲ್ಲಿ 77 Mm3 ಕುಡಿಯುವ ಉದ್ದೇಶಕ್ಕೆ, 131 ಒm3 ಕೈಗಾರಿಕೆಗಳಿಗೆ ಹಾಗೂ 316 ಒm3 ನೀರನ್ನ ಕೃಷಿ ಮತ್ತು ನೀರಾವರಿಗೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ.
ಕೃಷಿ ಹಾಗೂ ಜನತೆಗೆ ಲಾಭ: ಈ ಯೋಜನೆಯಿಂದ ಒಟ್ಟು 70,053 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರೆಯಲಿದ್ದು, ಸುಮಾರು 20.21 ಲಕ್ಷ ಜನರಿಗೆ ನೇರ ಪ್ರಯೋಜನವಾಗಲಿದೆ.ಇದನ್ನೂ ಓದಿ: ಬಾಕ್ಸಾಫೀಸ್ನಲ್ಲಿ ‘ರಾಮಾಯಣ’ ಹೊಸ ಇತಿಹಾಸ: 12 ದಿನಕ್ಕೆ ‘RRR’ ದಾಖಲೆ ಉಡೀಸ್
ಫಲಾನುಭವಿ ಜಿಲ್ಲೆಗಳು: ಉತ್ತರ ಕನ್ನಡ, ಧಾರವಾಡ, ಗದಗ, ಹಾವೇರಿ ಮತ್ತು ಕೊಪ್ಪಳ ಜಿಲ್ಲೆಗಳ ನೀರಿನ ಬವಣೆ ಈ ಯೋಜನೆಯಿಂದ ನೀಗಲಿದೆ.
ಗೋದಾವರಿ-ಕಾವೇರಿ ಜೋಡಣೆ ಲಾಭ: ಬೇಡ್ತಿ-ವರದಾ ಯೋಜನೆಯನ್ನ ಗೋದಾವರಿ-ಕಾವೇರಿ ನದಿ ಜೋಡಣೆ ಯೋಜನೆಯೊಂದಿಗೆ ಸಂಯೋಜಿಸಲಾಗಿದ್ದು, ಪರ್ಯಾಯ ವ್ಯವಸ್ಥೆಯಡಿ ಆಲಮಟ್ಟಿ ಜಲಾಶಯದ ಮೂಲಕ ಕರ್ನಾಟಕಕ್ಕೆ ಹೆಚ್ಚುವರಿಯಾಗಿ 15.89 TMC ನೀರು ಲಭ್ಯವಾಗಲಿದೆ.ಇದನ್ನೂ ಓದಿ: ಮಂಜ-ಮಂಜಿ ನಡುವೆ ನಾಮಿನೇಷನ್ ಬಿರುಕು: ಗಾನವಿ ಸ್ನೇಹ ಮಾಡಿದವ್ರ ಬೆನ್ನಿಗೆ ಚೂರಿ ಪಕ್ಕನಾ?
ಸ್ಥಳ ಗುರುತಿಸುವಿಕೆಗೆ ಮತ್ತು ಅರಣ್ಯ ಇಲಾಖೆ ಅನುಮತಿಗಳನ್ನ ತ್ವರಿತವಾಗಿ ಮುಗಿಸಲು ಸಚಿವರ ಸೂಚನೆ:
ಯೋಜನೆಯ ಮಾರ್ಗಮಧ್ಯೆ ಹಾವೇರಿ ಜಿಲ್ಲೆಯಲ್ಲಿ ನೀರಿನ ಶೇಖರಣಾ ಘಟಕ ನಿರ್ಮಿಸಲು ಸೂಕ್ತ ಸ್ಥಳವನ್ನ ಕೂಡಲೇ ಗುರುತಿಸುವಂತೆ ಹಾಗೂ ನೀರಾವರಿ ಅಚ್ಚುಕಟ್ಟು ಪ್ರದೇಶವನ್ನ ತ್ವರಿತವಾಗಿ ನಿಗದಿಪಡಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು. ಯೋಜನೆಯ ಸಮೀಕ್ಷೆ ಮತ್ತು ತನಿಖಾ ಕಾರ್ಯಗಳಿಗಾಗಿ ಅರಣ್ಯ ಇಲಾಖೆಯಿಂದ ಅಗತ್ಯವಿರುವ ಅನುಮತಿಗಳನ್ನ ಆದ್ಯತೆಯ ಮೇರೆಗೆ ಶೀಘ್ರವಾಗಿ ಪಡೆದುಕೊಳ್ಳಲು ಸಮನ್ವಯತೆಯಿಂದ ಕೆಲಸ ಮಾಡುವಂತೆಯು ಸಹ ಸಚಿವರು ಸಲಹೆ ನೀಡಿದರು.
ಡಿಪಿಆರ್ ತ್ವರಿತಗೊಳಿಸಲು ಕಟ್ಟುನಿಟ್ಟು ಸೂಚನೆ;
ಟೊಪೊಗ್ರಾಫಿಕಲ್ ಮತ್ತು ಜಿಯೋಲಾಜಿಕಲ್ ಸಮೀಕ್ಷೆಗಳು ಸಹ ಪ್ರಗತಿಯಲ್ಲಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳು ಜಂಟಿಯಾಗಿ ಕಾರ್ಯನಿರ್ವಹಿಸಿ ವಿಸ್ತೃತ ಯೋಜನಾ ವರದಿಯನ್ನ (ಆPಖ) ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದು ಹೇಳಿದರು.ಇದನ್ನೂ ಓದಿ: ದೆಹಲಿ ಅಂಗಳದಲ್ಲಿ ಜಮೀರ್ ಫುಲ್ ಆ್ಯಕ್ಟಿವ್; ಪುಸ್ತಕ ನೀಡುವ ನೆಪದಲ್ಲಿ ಹೈಕಮಾಂಡ್ ವರಿಷ್ಠರ ಭೇಟಿ

