ಚಿಕ್ಕೋಡಿ: ಬೆಳಗಾವಿ (Belagavi) ಜಿಲ್ಲೆಯ ಹುಕ್ಕೇರಿ (Hukkeri) ತಾಲೂಕಿನ ರಾಜಾ ಲಖಮಗೌಡ ಹಿಡಕಲ್ ಜಲಾಶಯ (Hidkal Dam) ಸಂಪೂರ್ಣ ಭರ್ತಿಯಾಗಿದ್ದು, ಜಿಲ್ಲೆಯ ರೈತರಲ್ಲಿ ಸಂತಸ ಮೂಡಿಸಿದೆ.

51 ಟಿಎಂಸಿ ಸಾಮರ್ಥ್ಯದ ಹಿಡಕಲ್ ಜಲಾಶಯಕ್ಕೆ 8,523 ಕ್ಯೂಸೆಕ್ ನೀರು ಒಳಹರಿವು ಇದ್ದು, 4,655 ಕ್ಯೂಸೆಕ್ ನೀರು ಹೊರಹರಿವಿದೆ. ಸದ್ಯ ನೀರಾವರಿ ಯೋಜನೆಗಳ ಕಾಲುವೆಗಳ ಮೂಲಕ ನೀರನ್ನು ಹೊರಹರಿಸಲಾಗುತ್ತಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ತಂದೆ-ಮಗ ಅನುಮಾನಾಸ್ಪದ ಸಾವು: ಪತ್ನಿ ವಶಕ್ಕೆ, ಕೊಲೆ ಶಂಕೆ
ಜಲಾಶಯದ ನೀರಿನ ಮಟ್ಟ ನಿರಂತರವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆ ಇಂದು ಮಧ್ಯಾಹ್ನ ಜಲಾಶಯದಿಂದ ಹೆಚ್ಚುವರಿ ನೀರು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಇದನ್ನೂ ಓದಿ: ಫ್ಲೈವುಡ್ ಗೋಡೌನ್ ನಲ್ಲಿ ಆಕಸ್ಮಿಕ ಬೆಂಕಿ – ಲಕ್ಷಾಂತರ ರೂಪಾಯಿ ಮೌಲ್ಯದ ಯಂತ್ರೋಪಕರಣ ಸುಟ್ಟು ಭಸ್ಮ
ಹಿಡಕಲ್ ಜಲಾಶಯ ಭರ್ತಿಯಾಗಿರುವುದು ಬೆಳಗಾವಿ ಮಾತ್ರವಲ್ಲದೆ ಬಾಗಲಕೋಟೆ ಜಿಲ್ಲೆಯ ರೈತರಿಗೂ ನೆಮ್ಮದಿ ತಂದಿದೆ. ಜಲಾಶಯದ ನೀರು ನೀರಾವರಿ ಯೋಜನೆಗಳಿಗೆ ಪ್ರಮುಖ ಆಧಾರವಾಗಿರುವುದರಿಂದ, ಜಲಾಶಯ ಭರ್ತಿಯಾಗಿರುವುದು ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿದೆ. ಇದನ್ನೂ ಓದಿ: BJPಗೆ ಶೆಹಜಾದ್ ಪೂನಾವಾಲಾ ದಿಢೀರ್ ರಾಜೀನಾಮೆ
