CrimeLatestMain PostNational

ಟ್ರಾಲಿ ಬ್ಯಾಗ್‍ಗಳಲ್ಲಿ ಅಡಗಿಸಿಟ್ಟಿದ್ದ 434 ಕೋಟಿ ರೂ. ಮೌಲ್ಯದ ಹೆರಾಯಿನ್ ಪತ್ತೆ

ನವದೆಹಲಿ: ನಗರದ ವಿಮಾನನಿಲ್ದಾಣದಲ್ಲಿ ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ (ಡಿಆರ್‍ಐ) 100ಕ್ಕೂ ಹೆಚ್ಚು ಟ್ರಾಲಿ ಬ್ಯಾಗ್‍ಗಳ ಲೋಹದ ರಾಡ್‍ಗಳಲ್ಲಿ ಬಚ್ಚಿಟ್ಟ 62 ಕೆಜಿಯ ಹೆರಾಯಿನ್ ಅನ್ನು ವಶಪಡಿಸಿಕೊಂಡಿದೆ.

ಭಾರತದಲ್ಲಿ ಕೊರಿಯರ್, ಕಾರ್ಗೋ ಅಥವಾ ಏರ್ ಪ್ಯಾಸೆಂಜರ್ ಮೋಡ್‍ಗಳ ಮೂಲಕ ಇಲ್ಲಿಯವರೆಗೆ ಹೆರಾಯಿನ್ ಅನ್ನು ವಶಪಡಿಸಿಕೊಂಡ ದೊಡ್ಡ ಪ್ರಕರಣಗಳಲ್ಲಿ ಇದೂ ಒಂದು ಎಂದು ಡಿಆರ್‍ಐ ಬಹಿರಂಗಪಡಿಸಿದೆ. ಇದನ್ನೂ ಓದಿ: ಉದ್ಯೋಗ ಸಿಗದಿದ್ದರಿಂದ ಮನನೊಂದು ಎಂಬಿಎ ಪದವೀಧರೆ ಆತ್ಮಹತ್ಯೆ

ಕಪ್ಪು ಮತ್ತು ಬಿಳಿ ಎಂಬ ಹೆಸರಿನ ಕಾರ್ಯಾಚರಣೆಯ ಕೋಡ್‍ನಲ್ಲಿ, ಡಿಆರ್‍ಐ ಮೇ 10 ರಂದು ಉಗಾಂಡಾದ ಎಂಟೆಬ್ಬೆಯಿಂದ ಟ್ರಾಲಿ ಬ್ಯಾಗ್‍ಗಳನ್ನು ಆಮದು ಮಾಡಿದ ಸರಕು ಸಾಗಣೆಯಿಂದ 55 ಕೆಜಿ ಹೆರಾಯಿನ್ ಅನ್ನು ವಶಪಡಿಸಿಕೊಂಡಿದೆ. ದುಬೈ ಮೂಲಕ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಏರ್ ಕಾರ್ಗೋ ಕಾಂಪ್ಲೆಕ್ಸ್‌ಗೆ ರವಾನೆ ಬಂದಿತ್ತು.

ಪಂಜಾಬ್ ಮತ್ತು ಹರಿಯಾಣದಲ್ಲಿ ನಡೆದ ತ್ವರಿತ ಕಾರ್ಯಾಚರಣೆಯಲ್ಲಿ 7 ಕೆಜಿ ಹೆರಾಯಿನ್ ಮತ್ತು 50 ಲಕ್ಷ ರೂ. ವಶಪಡಿಸಿಕೊಂಡಿದೆ. ಮರೆಮಾಚಿಟ್ಟ 62 ಕೆಜಿ ಹೆರಾಯಿನ್‍ನ ಮೌಲ್ಯವು ಅಕ್ರಮ ಮಾರುಕಟ್ಟೆಯಲ್ಲಿ 434 ಕೋಟಿ ರೂ. ಎಂದು ಅಂದಾಜಿಸಲಾಗಿದೆ ಎಂದು ಡಿಆರ್‍ಐ ತಿಳಿಸಿದೆ.

ಆಮದು ಮಾಡಲಾದ ರವಾನೆಯಲ್ಲಿ ಒಟ್ಟು 330 ಟ್ರಾಲಿ ಬ್ಯಾಗ್‍ಗಳಿದ್ದು, ಅದರಲ್ಲಿ ವಶಪಡಿಸಿಕೊಂಡ ಹೆರಾಯಿನ್ ಅನ್ನು 126 ಟ್ರಾಲಿ ಬ್ಯಾಗ್‍ಗಳ ಲೋಹದ ಟ್ಯೂಬ್‍ಗಳಲ್ಲಿ ಬಚ್ಚಿಡಲಾಗಿತ್ತು. ಬಚ್ಚಿಟ್ಟ ಹೆರಾಯಿನ್ ಅನ್ನು ಅಧಿಕಾರಿಗಳೂ ಪತ್ತೆ ಹಚ್ಚುವುದು ಅತ್ಯಂತ ಕಷ್ಟಕರವಾಗಿತ್ತು. ಇದನ್ನೂ ಓದಿ: ಎಮ್ಮೆಗೆ ಡಿಕ್ಕಿ ಹೊಡೆಯುವುದನ್ನ ತಪ್ಪಿಸಲು ಬಸ್ ಪಲ್ಟಿ

ಡಿಆರ್‍ಐ ಅಧಿಕಾರಿಗಳು ರವಾನೆಯ ಆಮದುದಾರನನ್ನು ಬಂಧಿಸಿದ್ದಾರೆ. ಇತರ ಶಂಕಿತರನ್ನೂ ವಿಚಾರಣೆ ನಡೆಸಲಾಗುತ್ತಿದ್ದು, ಹೆಚ್ಚಿನ ತನಿಖೆಗಳು ನಡೆಯುತ್ತಿವೆ. 2021 ರಲ್ಲಿ ಡಿಆರ್‍ಐ ದೇಶಾದ್ಯಂತ 3300 ಕೆಜಿಗಿಂತ ಹೆಚ್ಚು ವಶಪಡಿಸಿಕೊಂಡಿದೆ.

Leave a Reply

Your email address will not be published.

Back to top button