ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ತಾವು ಯಾಕೆ ಮೊಬೈಲ್ (Mobile) ಉಪಯೋಗ ಮಾಡೊಲ್ಲ ಅನ್ನೋ ವಿಷಯವನ್ನು ಬಹಿರಂಗ ಪಡಿಸಿದ್ದಾರೆ.
ಕ್ಷೇಮವನದಲ್ಲಿ ನಡೆದ ನೂತನ ಶಾಸಕರ ತರಬೇತಿ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಭಾಗವಹಿಸಿದ್ರು. ತಮ್ಮ ರಾಜಕೀಯ ಜೀವನದ ಕ್ಷಣಗಳನ್ನ ಮೆಲುಕು ಹಾಕಿದ್ರು. ಈ ವೇಳೆ ಹುಮ್ನಾಬಾದ್ ಶಾಸಕರು ನೀವು ಯಾಕೆ ಮೊಬೈಲ್ ಉಪಯೋಗ ಮಾಡೋದಿಲ್ಲ ಅಂತ ಪ್ರಶ್ನೆ ಮಾಡಿದರು.
ಇದಕ್ಕೆ ಉತ್ತರ ನೀಡಿದ ಸಿಎಂ, ಮೊಬೈಲ್ ಬಂದಾಗ 6 ತಿಂಗಳು ಮೊಬೈಲ್ ಫೋನ್ ಇಟ್ಟುಕೊಂಡಿದ್ದೆ. ಜನರು ಮಧ್ಯರಾತ್ರಿ ಕರೆ ಮಾಡುತ್ತಿದ್ದರು. ಕುಡಿದು ಕೆಲವರು ರಾತ್ರಿ ಕಾಲ್ ಮಾಡುತ್ತಿದ್ದರು. ಹೀಗಾಗಿ ಮೊಬೈಲ್ ಎಸೆದು ಬಿಟ್ಟೆ ಅಂತ ಮೊಬೈಲ್ ಕಥೆ ಹೇಳಿದರು.
ಈಗ ನಮ್ ಪಿಎಗಳ ನಂಬರ್ ಕೊಡ್ತೀನಿ. ಅವಶ್ಯಕತೆ ಇದ್ದಾಗ ಪಿಎಗಳ ಮೊಬೈಲ್ ನಿಂದ ಕಾಲ್ ಮಾಡ್ತೀನಿ ಅಂತ ಮೊಬೈಲ್ ಉಪಯೋಗ ಮಾಡದ ಸ್ಟೋರಿ ತಿಳಿಸಿದರು. ಇದನ್ನೂ ಓದಿ: ಪೊಲೀಸರು ನನ್ನನ್ನ ಒದ್ದು ಒಳಗೆ ಹಾಕಿದ್ರು – ಇಂಟರೆಸ್ಟಿಂಗ್ ಸಂಗತಿ ಹಂಚಿಕೊಂಡ ಸಿಎಂ
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]