ಮೆಕ್ಸಿಕೊ ಸಿಟಿ: ಮಧ್ಯ ಮೆಕ್ಸಿಕನ್ (Mexico) ರಾಜ್ಯವಾಗಿರುವ ಅಗ್ವಾಸ್ಕಾಲಿಯೆಂಟೆಸ್ನ ಭದ್ರತಾ ಮುಖ್ಯಸ್ಥ ಸೇರಿದಂತೆ ಒಟ್ಟು ಐವರು ವಿಮಾನ ಪತನದ (Helicopter crash) ವೇಳೆ ಸಾವನ್ನಪ್ಪಿರುವ ಘಟನೆ ಗುರುವಾರ ನಡೆದಿದೆ.
ಹೆಲಿಕಾಪ್ಟರ್ ನೆಲಕ್ಕೆ ಅಪ್ಪಳಿಸುತ್ತಿರುವ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿವೆ. ಹೆಲಿಕಾಪ್ಟರ್ನಲ್ಲಿ ಒಟ್ಟು ಐವರು ಪ್ರಯಾಣಿಸುತ್ತಿದ್ದು, ಹೆಲಿಕಾಪ್ಟರ್ ನಿಯಂತ್ರಣಕ್ಕೆ ಸಿಗದೆ ನೆಲಕ್ಕೆ ಅಪ್ಪಳಿಸಿರುವುದು ವೀಡಿಯೋದಲ್ಲಿ ಕಂಡುಬಂದಿದೆ. ಇದನ್ನೂ ಓದಿ: ಇತಿಹಾಸ ನಿರ್ಮಿಸಿದ ಭಾರತ – ಮೊದಲ ಖಾಸಗಿ ನಿರ್ಮಿತ ರಾಕೆಟ್ ಉಡಾಯಿಸಿದ ಇಸ್ರೋ
ಹೆಲಿಕಾಪ್ಟರ್ನಲ್ಲಿ ಸಾರ್ವಜನಿಕ ಭದ್ರತಾ ಸಚಿವ ಪೊರ್ಫಿರಿಯೋ ಜೇವಿಯರ್ ಸ್ಯಾಂಚೆಜ್ ಮೆಂಡೋಜಾ ಸೇರಿದಂತೆ ಐವರು ಪ್ರಯಾಣಿಸುತ್ತಿದ್ದರು. ಸದ್ಯ ಹೆಲಿಕಾಪ್ಟರ್ ಖಾಲಿ ಪ್ರದೇಶಕ್ಕೆ ಅಪ್ಪಳಿಸಿದ್ದರಿಂದ ಹೆಚ್ಚಿನ ಸಾವು ನೋವುಗಳಾಗಿಲ್ಲ. ಆದರೆ ಹೆಲಿಕಾಪ್ಟರ್ನಲ್ಲಿದ್ದ ಐವರು ಕೂಡಾ ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಮತ ಹಾಕದಿದ್ದರೆ 2024ರ ಚುನಾವಣೆಯೇ ನನ್ನ ಕೊನೆಯ ಎಲೆಕ್ಷನ್: ಚಂದ್ರಬಾಬು ನಾಯ್ಡು