ಒಂದು ಕಡೆ ಲಾಕ್‍ಡೌನ್. ಮತ್ತೊಂಡೆ ಬಿಸಿಲಿನ ತಾಪಮಾನ ದಿನೇ ದಿನೇ ಹೆಚ್ಚಾಗುತ್ತಿದೆ. ಹೀಗಾಗಿ ಹೊರಗೆ ಹೋಗಿ ತಂಪಾದ ಪಾನೀಯ ಕುಡಿಯೋಣ ಅಂದರೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಮನೆಯಲ್ಲಿ ತಂಪು ಪಾನೀಯ ಮಾಡಿಕೊಂಡು ಕುಡಿಯಬಹುದು. ನಿಮಗಾಗಿ ಇಲ್ಲಿದೆ ಆರೋಗ್ಯಕರವಾದ ಅಕ್ಕಿ ಗಂಜಿ ಮಾಡುವ ವಿಧಾನ..
ಬೇಕಾಗುವ ಸಾಮಾಗ್ರಿಗಳು
1. ಅಕ್ಕಿ – ಒಂದು ಕಪ್
2. ಹಸಿ ತೆಂಗಿನಕಾಯಿ ತುರಿ – 2 ಚಮಚ
3. ಜೀರಿಗೆ – 1/2 ಚಮಚ
3. ಹಸಿ ಮೆಣಸಿನಕಾಯಿ – ಒಂದು (ಸಣ್ಣಗೆ ಕತ್ತರಿಸಬೇಕು)
4. ತುಪ್ಪ- 1 ಟೀ ಸ್ಪೂನ್
5. ಉಪ್ಪು- ರುಚಿಗೆ ತಕ್ಕಷ್ಟು
Advertisement
Advertisement
ಮಾಡುವ ವಿಧಾನ
* ಮೊದಲಿಗೆ ಅಕ್ಕಿಯನ್ನು ಚೆನ್ನಾಗಿ ತೊಳೆದುಕೊಳ್ಳಿ.
* ಈಗ ಅಕ್ಕಿಯನ್ನು ಕುಕ್ಕರ್ ನಲ್ಲಿ ಹಾಕಿಕೊಳ್ಳಿ. ಅಕ್ಕಿ ತೆಗೆದುಕೊಂಡ ಕಪ್‍ನಿಂದಲೇ 7-8 ಕಪ್ ನೀರು ಹಾಕಿ. (ಗಂಜಿ ತೆಳುವಾಗಿದ್ರೆ ಚೆನ್ನಾಗಿರುತ್ತೆ. ಹಾಗಾಗಿ ಹೆಚ್ಚು ನೀರು ಹಾಕಿಕೊಳ್ಳಿ).
* ನೀರು ಹಾಕಿದ ಬಳಿಕ ಹಸಿ ತೆಂಗಿನ ತುರಿ, ಜೀರಿಗೆ, ತುಪ್ಪ, ಕತ್ತರಿಸಿದ ಹಸಿ ಮೆಣಸಿನಕಾಯಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಳ್ಳಿ.
* ಈಗ ಕುಕ್ಕರ್ ಮುಚ್ಚಳ ಮುಚ್ಚಿ ನಾಲ್ಕರಿಂದ ಐದು ವಿಶಲ್ ಹೊಡಿಸಿದರೆ ನಿಮ್ಮ ಅಕ್ಕಿ ಗಂಜಿ ರೆಡಿ.
* ಗಂಜಿ ತಣ್ಣಗಾದ ಮೇಲೆ ಬೇಕಾದಲ್ಲಿ ಮಜ್ಜಿಗೆ, ಈರುಳ್ಳಿ, ಕೊತ್ತಂಬರಿ ಸೊಪ್ಪು ಹಾಕಿಕೊಂಡು ಕುಡಿಯಬಹುದು.