Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಹೆಚ್‌ಡಿಕೆ ಒಂದು ದಿನವೂ ರಾಷ್ಟ್ರಧ್ವಜ, ಕನ್ನಡ ಧ್ವಜಕ್ಕೆ ಗೌರವ ಕೊಟ್ಟಿಲ್ಲ: ಕುಮಾರಸ್ವಾಮಿ ವಿರುದ್ಧ ಡಿಕೆಶಿ ಕೆಂಡ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Dakshina Kannada | ಹೆಚ್‌ಡಿಕೆ ಒಂದು ದಿನವೂ ರಾಷ್ಟ್ರಧ್ವಜ, ಕನ್ನಡ ಧ್ವಜಕ್ಕೆ ಗೌರವ ಕೊಟ್ಟಿಲ್ಲ: ಕುಮಾರಸ್ವಾಮಿ ವಿರುದ್ಧ ಡಿಕೆಶಿ ಕೆಂಡ

Dakshina Kannada

ಹೆಚ್‌ಡಿಕೆ ಒಂದು ದಿನವೂ ರಾಷ್ಟ್ರಧ್ವಜ, ಕನ್ನಡ ಧ್ವಜಕ್ಕೆ ಗೌರವ ಕೊಟ್ಟಿಲ್ಲ: ಕುಮಾರಸ್ವಾಮಿ ವಿರುದ್ಧ ಡಿಕೆಶಿ ಕೆಂಡ

Public TV
Last updated: November 2, 2024 12:00 pm
Public TV
Share
3 Min Read
DK Shivakumar
SHARE

– ಮುಂದಿನ 5 ವರ್ಷ ಯಾವ ಯೋಜನೆಯನ್ನೂ ನಿಲ್ಲಿಸಲ್ಲ
– ರೈತರ ಜಮೀನು ಬಿಟ್ಟು ಕೊಡೋ ಪ್ರಶ್ನೆಯೇ ಇಲ್ಲ

ಮಂಗಳೂರು: ಮಿಸ್ಟರ್ ಕುಮಾರಸ್ವಾಮಿ, ನಿಮ್ಮ ಅವಧಿಯಲ್ಲಿ ರಾಷ್ಟ್ರಧ್ವಜ ಹಾರಿಸೋಕೆ ಒಂದು ದಿನವೂ  ರಾಮನಗರಕ್ಕೆ (Ramanagara) ಹೋಗಿಲ್ಲ. ಚನ್ನಪಟ್ಟಣಕ್ಕೂ (Channapatna) ಹೋಗಿಲ್ಲ. ಕನ್ನಡ ಬಾವುಟ ಹಾರಿಸಲು ಸಂವಿಧಾನದ ವ್ಯವಸ್ಥೆಯಲ್ಲಿ ನಿನ್ನನ್ನು ರಾಮನಗರ, ಚನ್ನಪಟ್ಟಣದ ಜನ ಆಯ್ಕೆ ಮಾಡಿ ಕಳುಹಿಸಿಕೊಟ್ಟಿದ್ದರು. ಒಂದು ದಿನವೂ ಹೋಗಿ ನೀನು ರಾಷ್ಟ್ರಧ್ವಜಕ್ಕೆ ಗೌರವ ಕೊಟ್ಟಿಲ್ಲ, ಕನ್ನಡ ಧ್ವಜಕ್ಕೂ ಗೌರವ ಕೊಟ್ಟಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಏಕವಚನದಲ್ಲಿ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ವಿರುದ್ಧ ಕಿಡಿಕಾರಿದರು.

ಈ ಕುರಿತು ಮಂಗಳೂರು ವಿಮಾನ ನಿಲ್ದಾಣದಲ್ಲಿ (Mangaluru Airport) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇವರ ಅಳು ಎಲ್ಲಾ ಬರೋದೇ ಎಲೆಕ್ಷನ್ ಟೈಮ್‌ನಲ್ಲಿ. ಯಾವುದಾದರೂ ಒಂದು ಗುರುತಿಸುವ ಕೆಲಸ ಚನ್ನಪಟ್ಟಣಕ್ಕೆ ಮಾಡಿರೋದನ್ನ ತೋರಿಸು. ಕೆರೆ ಮಾಡಿದ್ದು ಯೋಗೇಶ್ವರ್, ದುಡ್ಡು ಕೊಟ್ಟಿದ್ದು ನಾನು. ನೀನು ಮುಖ್ಯಮಂತ್ರಿ ಆಗಿದ್ದಾಗಲೇ ಮಾಡಿಲ್ಲ. ಎಂಎಲ್‌ಎ ಆಗಿದ್ದಾಗ ಬಿಜೆಪಿ ಜೊತೆಗೆ ಸಂಪರ್ಕ ಇತ್ತು. ಗುರುತು ಮಾಡೋ ಕೆಲಸ ಮಾಡಬೇಕಿತ್ತಲ್ಲ. ಸುಮ್ಮನೆ ವೋಟಿಗೋಸ್ಕರ ಬಂದು ಮಾತನಾಡೋದಲ್ಲ. ಅಭ್ಯರ್ಥಿಗೆ ಲಾಸ್ ಏನೂ ಆಗಿಲ್ಲ, ಅಭ್ಯರ್ಥಿಗೂ ಚನ್ನಪಟ್ಟಣಕ್ಕೂ ಸಂಬಂಧ ಇಲ್ಲ. ಅವರು ಸೋತಿದ್ದು ಮಂಡ್ಯ ಹಾಗೂ ರಾಮನಗರದಲ್ಲಿ. ನೀನು, ನಿನ್ನ ಧರ್ಮಪತ್ನಿ ಇದ್ದರೂ ಇಲ್ಲಿಗೆ ನೀನು ಏನು ಕೊಟ್ಟೆ? ಚನ್ನಪಟ್ಟಣಕ್ಕೆ ನೀನು ಏನು ಕೊಟ್ಟೆ ಎಂದು ಹೇಳಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಮೋದಿ ರೈತರ ಆದಾಯ ದ್ವಿಗುಣ ಮಾಡ್ತೀವಿ ಅಂದಿದ್ದರಲ್ಲ, ಮಾಡಿದ್ದಾರಾ? – ಪರಮೇಶ್ವರ್ ಪ್ರಶ್ನೆ

ಯೋಗೇಶ್ವರ್ ಪಕ್ಷಾಂತರಿ ಒಪ್ಪುತ್ತೇನೆ. ಕಾಂಗ್ರೆಸ್, ಬಿಜೆಪಿ ಎಲ್ಲಾ ಕಡೆನೂ ಹೋದರು. ಎನ್‌ಡಿಎ ಸರಿ ಇಲ್ಲ, ಕುಮಾರಸ್ವಾಮಿ ಸರಿ ಇಲ್ಲ ಎಂದು ಎಂಎಲ್‌ಸಿ ಸ್ಥಾನ ಬಿಟ್ಟು ನಮ್ಮ ಜೊತೆ ಬಂದಿದ್ದಾರೆ. ಅವರು ಟಿಕೆಟ್ ಕೊಡುತ್ತೇನೆ ಅಂತ ಹೇಳಿದ್ರೋ ಬಿಡ್ತೀನಿ ಅಂದ್ರೋ ನನಗೆ ಗೊತ್ತಿಲ್ಲ. ನಾನಿವತ್ತು ಚನ್ನಪಟ್ಟಣ ತಾಲೂಕಿಗೆ ವಿದ್ಯಾವಂತ, ಬುದ್ದಿವಂತನ ಆಯ್ಕೆ ಮಾಡಿ ನಮ್ಮ ಸರ್ಕಾರ ನಿಮ್ಮ ಮನೆ ಬಾಗಿಲಿಗೆ ಬಂದಿದೆ. ನಿಮ್ಮ ಸೇವೆ ಮಾಡುತ್ತೇವೆ. ನೂರಾರು ಕೋಟಿ ರೂ. ಕೆಲಸ ಆಗಲೇ ಶುರು ಮಾಡಿದ್ದೇವೆ. ಸಾವಿರಾರು ಜನ ಬಡವರು ಬಂದು ಅರ್ಜಿ ಕೊಟ್ಟಿದ್ದಾರೆ, ಅವರಿಗೆ ಸ್ಪಂದಿಸುತ್ತೇವೆ. ಜನತಾದಳಕ್ಕೆ ಯಾವುದೇ ಭವಿಷ್ಯ ಇಲ್ಲ, ಭವಿಷ್ಯ ಇರೋ ನಾವು ಗ್ಯಾರಂಟಿಗಳನ್ನು ಕೊಡುತ್ತಿದ್ದೇವೆ. ನಮ್ಮ ಗ್ಯಾರಂಟಿ ಇಡೀ ದೇಶಕ್ಕೆ ಮಾದರಿಯಾಗಿದೆ ಎಂದರು. ಇದನ್ನೂ ಓದಿ: ಜನರ ಸಮಸ್ಯೆ ಕಂಡಾಗ ಮಾತೃ ಹೃದಯ ಇದ್ದವರಿಗೆ ಕಣ್ಣೀರು ಬರುತ್ತೆ, ಕಟುಕರಿಗಲ್ಲ: ಹೆಚ್‌ಡಿಕೆ

ಮೋದಿ ಎಲೆಕ್ಷನ್‌ಗೋಸ್ಕರ ಏನು ಬೇಕಾದರೂ ಮಾಡಲಿ. ವಿದ್ಯಾವಂತರು, ಬುದ್ದಿವಂತರು ಇದ್ದಾರೆ, ಮತ ಹಾಕಿ ಜನ ಗೆಲ್ಲಿಸುತ್ತಾರೆ. ನಾವು ಬಸ್‌ನಲ್ಲಿ ಟಿಕೆಟ್ ತೆಗೆದುಕೊಳ್ಳುತ್ತೇವೆ ಎಂದು ಕೆಲವರು ಹೇಳಿದರು. ಅದನ್ನು ನಾನು ಚರ್ಚೆ ಮಾಡೋಣ ಅಂತ ಅಷ್ಟೇ ಹೇಳಿದ್ದೆ. ಮಂಗಳೂರಿನಲ್ಲೇ ರಾಹುಲ್ ಗಾಂಧಿ ಶಕ್ತಿ ಯೋಜನೆ ಘೋಷಣೆ ಮಾಡಿದ್ದು. ಯಾವ ಯೋಜನೆಯನ್ನೂ ನಾವು ಮುಂದಿನ ಐದು ವರ್ಷ ನಿಲ್ಲಿಸಲ್ಲ. ಇವತ್ತು ವೃದ್ಧಾಪ್ಯ ವೇತನ, ವಿಧವಾ ವೇತನ ಎಲ್ಲವನ್ನೂ ಕೊಡುತ್ತಿದ್ದೇವೆ. ಯಾವುದಾದರೂ ಒಂದು ಕಾರ್ಯಕ್ರಮ ಬಿಜೆಪಿ ಅಧಿಕಾರ ಇದ್ದಾಗಲೂ ನಿಲ್ಲಿಸಲು ಆಗಿಲ್ಲ. ನಮ್ಮದು ಬದುಕಿನ ಬಗ್ಗೆ ಕೊಡೋ ಕಾರ್ಯಕ್ರಮ, ಬಿಜೆಪಿಯದ್ದು ಭಾವನೆ ಬಗ್ಗೆ ಕೊಡೋ ಕಾರ್ಯಕ್ರಮ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ನಡು ರಸ್ತೆಯಲ್ಲಿ ಪಟಾಕಿ – ಪುಂಡರಿಂದ ವಾಹನಗಳಿಗೆ ಕಿರಿಕ್‌

ಮೋದಿಯವರಿಗೆ ಗ್ಯಾರಂಟಿ ಯೋಜನೆ ನೋಡಿ ಹೀಗಾಗಿದೆ. ನಮ್ಮ ಯೋಜನೆಯನ್ನು ಬಿಜೆಪಿ ಆಡಳಿತದಲ್ಲೂ ತರುತ್ತಿದ್ದಾರೆ. ಮಧ್ಯಪ್ರದೇಶ, ಹರಿಯಾಣ, ಮಹಾರಾಷ್ಟ್ರದಲ್ಲೂ ಆರಂಭ ಮಾಡಿದ್ದಾರೆ. ನಮ್ಮನ್ನು ಕಾಪಿ ಮಾಡೋದು ಮೋದಿಯವರಿಗೆ ಮುಜುಗರ ಆಗುತ್ತಿದೆ. ನಮ್ಮ ಆರ್ಥಿಕ ಬಲ ದೇಶದ ಆರ್ಥಿಕ ಬಲಕ್ಕಿಂತಲೂ ಗಟ್ಟಿಯಾಗಿದೆ. ಯತ್ನಾಳ್ ಒಬ್ಬ ಮೆಂಟಲ್ ಗಿರಾಕಿ, ಅವರ ಬಗ್ಗೆ ಮಾತನಾಡಲ್ಲ. ವಕ್ಫ್ ನೊಟೀಸ್ ಕೊಟ್ಟಿದ್ದು ಬಿಜೆಪಿ ಸರ್ಕಾರ.ನಾವು ರೈತರ ಜಮೀನು ಬಿಟ್ಟು ಕೊಡೋ ಪ್ರಶ್ನೆಯೇ ಇಲ್ಲ. ಅಧಿಕಾರಿ ತಪ್ಪು ಮಾಡಿದ್ದರೆ ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಪಟಾಕಿ ಸಿಡಿತದಿಂದ ಜನರ ಕಣ್ಣಿಗೆ ಕುತ್ತು – ಮಿಂಟೋ ಆಸ್ಪತ್ರೆಯಲ್ಲಿ 29 ಮಂದಿಗೆ ಚಿಕಿತ್ಸೆ

TAGGED:bjpcongressdakshina kannadaGUARANTEE SCHEMEhd kumaraswamyMangalurunarendra modiಕಾಂಗ್ರೆಸ್ಗ್ಯಾರಂಟಿ ಯೋಜನೆದಕ್ಷಿಣ ಕನ್ನಡನರೇಂದ್ರ ಮೋದಿಬಿಜೆಪಿಮಂಗಳೂರುಹೆಚ್‍ಡಿ ಕುಮಾರಸ್ವಾಮಿ
Share This Article
Facebook Whatsapp Whatsapp Telegram

Cinema news

Ramayana
`ರಾಮಾಯಣ’ ಟೀಸರ್ ರಿಲೀಸ್ – ಮರ್ಯಾದಾ ಪುರುಷೋತ್ತಮನ ಗೆಟಪ್‌ನಲ್ಲಿ ಕಂಗೊಳಿಸಿದ ರಣಬೀರ್
Bollywood Cinema Latest Top Stories
Malayalam director Ranjith
ನಟಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ – ಮಲಯಾಳಂ ನಿರ್ದೇಶಕ ರಂಜಿತ್ ಅರೆಸ್ಟ್
Cinema Latest Main Post National South cinema
vijay thalapathy
ನಟ ವಿಜಯ್‌ ವಿರುದ್ಧ ಪ್ರಕರಣ ದಾಖಲು
Cinema Latest South cinema Top Stories
Delhi Rain
ದೆಹಲಿ-ಎನ್‌ಸಿಆರ್‌ನ ಹಲವೆಡೆ ಭಾರೀ ಮಳೆ – ಯೆಲ್ಲೋ ಅಲರ್ಟ್ ಜಾರಿ
Cinema Latest National Top Stories

You Might Also Like

Supreme Court 1
Court

ಜಡ್ಜ್‌ಗಳ ಮೇಲೆ ಪೂರ್ವಯೋಜಿತ ದಾಳಿ – ಪಶ್ಚಿಮ ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ: ಸುಪ್ರೀಂ ಕೆಂಡಾಮಂಡಲ

Public TV
By Public TV
1 minute ago
karnataka High Court
Bengaluru City

ಹಿಂದಿಗೆ ಅಂಕಗಳ ಬದಲಿಗೆ ಗ್ರೇಡ್ – ಸರ್ಕಾರದ ನಿರ್ಧಾರ ಪ್ರಶ್ನಿಸಿ ಹೈಕೋರ್ಟ್‌ಗೆ PIL

Public TV
By Public TV
49 minutes ago
pvc pipe
Latest

ಕೈಗಾರಿಕೆಗಳಿಗೆ ರಿಲೀಫ್‌ – 40 ಪೆಟ್ರೋಕೆಮಿಕಲ್ ಉತ್ಪನ್ನಗಳ ಮೇಲಿನ ಕಸ್ಟಮ್ಸ್ ಸುಂಕ ಮನ್ನಾ

Public TV
By Public TV
2 hours ago
Yatnal
Districts

ನಾನು ಸಿಎಂ ಆಗಿ ಮೊದಲ ಕ್ಯಾಬಿನೆಟ್‌ನಲ್ಲೇ ಮುಸ್ಲಿಮರನ್ನು ಅಲ್ಪಸಂಖ್ಯಾತ ಪಟ್ಟಿಯಿಂದ ಹೊರಹಾಕ್ತೇನೆ – ಯತ್ನಾಳ್

Public TV
By Public TV
2 hours ago
IPL 2026 DC vs LSG Sanjiv Goenka–Rishabh Pant exchange goes viral after lucknow loss sparks fresh IPL storm
Cricket

ಅಂದು ರಾಹುಲ್‌, ಇಂದು ಪಂತ್ – ಸೋಲಿನ ಬೆನ್ನಲ್ಲೇ ಗೋಯೆಂಕಾ ಭಾರೀ ಚರ್ಚೆ

Public TV
By Public TV
2 hours ago
Hassan Innova Car Overturn
Districts

ನಿಯಂತ್ರಣ ತಪ್ಪಿ ಅಡಿಕೆ ತೋಟಕ್ಕೆ ಬಿದ್ದ ಇನ್ನೋವಾ ಕಾರು – ಚಾಲಕನಿಗೆ ಗಂಭೀರ ಗಾಯ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?