ಹಾಸನ: ನೀನು ದನ ಕಾಯೋನು ಇಓ ಕೆಲಸದಲ್ಲಿ ಇದ್ದೀಯ. ದನಗೆ ಇಂಜೆಕ್ಷನ್ ಕೊಡೋಕೆ ಹೋಗು ಎಂದು ತಾ.ಪಂ ಇಓಗೆ ಏಕವಚನದಲ್ಲೇ ಮಾಜಿ ಸಚಿವ ಎಚ್.ಡಿ.ರೇವಣ್ಣ ತರಾಟೆಗೆ ತೆಗೆದುಕೊಂಡ ಘಟನೆ ಹಾಸನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದಿದೆ.
Advertisement
ಹಾಸನದ ಕೆಂಚಟ್ಟಹಳ್ಳಿ ಬಳಿ ಇರುವ ಹೇಮಗಂಗೋತ್ರಿ ಸ್ನಾತಕೋತ್ತರ ಕೇಂದ್ರದ ಮುಂಭಾಗ ಟ್ರಕ್ ಟರ್ಮಿನಲ್ ನಿರ್ಮಾಣ ಮಾಡಲಾಗುತ್ತಿದೆ. ಇದಕ್ಕೆ ವಿದ್ಯಾರ್ಥಿಗಳು, ಗ್ರಾಮಸ್ಥರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಕಾಮಗಾರಿ ವಿಚಾರವಾಗಿ ಜಿಲ್ಲಾಧಿಕಾರಿ ಕಚೇರಿ ಬಳಿ ಆಗಮಿಸಿ ಜಿಲ್ಲಾಧಿಕಾರಿ ಮತ್ತು ತಾಪಂ ಇಒ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ ಎಚ್.ಡಿ.ರೇವಣ್ಣ, ತಾಪಂ ಇಒ ಕುರಿತು ನೀನು ದನ ಕಾಯೋನು, ಇಓ ಕೆಲಸದಲ್ಲಿ ಇದ್ದೀಯ. ಹೆಣ್ಣುಮಕ್ಕಳನ್ನು ಹೆದರಿಸ್ತೀಯಾ, ದನ ಕಾಯಕೆ ಹೋಗು ಎಂದು ಗದರಿದ್ರು. ಅದಕ್ಕೆ ಇಒ ಕಾಮಗಾರಿ ನಡೆಸಲು ಡಿಸಿ ನಿರ್ದೇಶನ ನೀಡಿದ್ದರು ಹಾಗಾಗಿ ಕಾಮಗಾರಿ ನಡೆಸಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಪ್ರಭು ಚವ್ಹಾಣ್ ಬಳಿ ಸಾಕ್ಷ್ಯ ಕೇಳಲ್ಲ ಯಾಕೆ – ಆರಗಗೆ ಪ್ರಿಯಾಂಕ್ ಖರ್ಗೆ ಸವಾಲು
Advertisement
Advertisement
ಈ ಉತ್ತರ ಕೇಳಿ ಮತ್ತಷ್ಟು ಕೆರಳಿದ ರೇವಣ್ಣ, ಡಿಸಿ ಮನೆಗೆ ನುಗ್ಗು ಅಂತಾನೆ ಹೋಗಿ ನುಗ್ಗು ನೀನು. ಏ ಪಿಎ ಕರೆಯೋ ಅವನ್ಯಾರು? ಡಿಸಿ. ಇವರಿಬ್ಬರು ಸೇರಿಕೊಂಡು ಅದೇನ್ ಮಾಡ್ತರೆ ಮಾಡ್ಲಿ. ಎಷ್ಟು ಹೆಣ ಉರುಳಿಸುತ್ತಾರೆ ಉರುಳಿಸಲಿ. ವರ್ಗಾವಣೆಗೋಸ್ಕರ ಈ ರೀತಿ ಮಾಡ್ತೀರ ಎಂದು ಕಿಡಿಕಾರಿದರು. ಇದನ್ನೂ ಓದಿ: ಭಾರತದ 10, ಪಾಕಿಸ್ತಾನದ 6 ಯೂಟ್ಯೂಬ್ ಚ್ಯಾನೆಲ್‌ಗಳು ಬ್ಯಾನ್
Advertisement
ಈ ವೇಳೆ ಜಿಲ್ಲಾಧಿಕಾರಿ ಆರ್.ಗಿರೀಶ್, ಸ್ವಲ್ಪ ಸಮಾಧಾನವಾಗಿ ಕೇಳಿ ಸರ್ ಎಂದು ರೇವಣ್ಣ ಅವರಿಗೆ ತಿಳಿಸಿದ್ರು. ಆಗ ರೇವಣ್ಣ ಜನ ವಿರೋಧ ಮಾಡುತ್ತಿದ್ದಾರೆ. ಟ್ರಕ್ ಟರ್ಮಿನಲ್ ಕಾಮಗಾರಿ ನಿಲ್ಲಿಸಿ. ಟ್ರಕ್ ಟರ್ಮಿನಲ್‍ಗೆ ಬೇರೆ ಕಡೆ ಜಾಗ ಕೊಡಿ. ಮಿನಿಸ್ಟರ್ ಹೇಳ್ತಾರೆ ಡಿಸಿ ಕಚೇರಿ ಎಂಎಲ್‍ಎಗೆ ಬರೆದು ಕೊಡಿ ಅಂತ, ಬರೆದು ಕೊಡುತ್ತೀರಾ? ಹಾಸನನ ಏನ್ ಎಂಎಲ್‍ಎಗೆ ಬರೆದುಕೊಟ್ಟಿದ್ದಾರ ಎಂದು ಪ್ರಶ್ನಿಸಿದರು. ಈ ವೇಳೆ ರೇವಣ್ಣ ಅವರಲ್ಲಿ ಮನವಿ ಮಾಡಿದ ಜಿಲ್ಲಾಧಿಕಾರಿ ಆರ್.ಗಿರೀಶ್, ನಾಳೆ, ನಾಡಿದ್ದು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಭೆ ಕರೆಯುತ್ತೇನೆ ಎಂದು ತಿಳಿಸಿದರು.