Bengaluru CityDistrictsKarnatakaLatestMain Post

ಪ್ರಭು ಚವ್ಹಾಣ್ ಬಳಿ ಸಾಕ್ಷ್ಯ ಕೇಳಲ್ಲ ಯಾಕೆ – ಆರಗಗೆ ಪ್ರಿಯಾಂಕ್‌ ಖರ್ಗೆ ಸವಾಲು

ಬೆಂಗಳೂರು: ಸಿಐಡಿ ವಿಚಾರಣೆಗೆ ಹಾಜರಾಗದ್ದಕ್ಕೆ ತನ್ನನ್ನು ಪಲಾಯನವಾದಿ ಎಂದಿದ್ದ ಆರಗ ಜ್ಞಾನೇಂದ್ರ ಅವರಿಗೆ ಶಾಸಕ ಪ್ರಿಯಾಂಕ್‌ ಖರ್ಗೆ ಬಿಜೆಪಿಯ ಸಚಿವ ಮತ್ತು ಶಾಸಕರ ಪತ್ರವನ್ನು ಬಿಡುಗಡೆ ಮಾಡಿ ಸವಾಲು ಎಸೆದಿದ್ದಾರೆ.

ಸಚಿವ ಪ್ರಭು ಚವ್ಹಾಣ್ ಫೆ.2 ರಂದು ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಪತ್ರ ಬರೆದರೆ, ಪರಿಷತ್ ಸದಸ್ಯ ಸಂಕನೂರು ಮಾರ್ಚ್‌ 15 ರಂದು ಪಿಎಸ್‌ಐ ಪರೀಕ್ಷೆಯಲ್ಲಿ ಅಕ್ರಮ ನಡೆದ ಬಗ್ಗೆ ತನಿಖೆ ನಡೆಸಬೇಕು ಎಂದು ಕೋರಿ ಪತ್ರ ಬರೆದಿದ್ದರು. ಇದನ್ನೂ ಓದಿ: ತನಿಖೆಗೆ ಸಹಕರಿಸದ ಪ್ರಿಯಾಂಕ್‌ ಖರ್ಗೆಯಿಂದ ಪಲಾಯನವಾದ: ಆರಗ ಜ್ಞಾನೇಂದ್ರ ಕಿಡಿ

ಈ ನಾಯಕರು ಬರೆದ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಪ್ರಿಯಾಂಕ್‌ ಖರ್ಗೆ, ಪಿಎಸ್‌ಐ ಅಕ್ರಮದ ಬಗ್ಗೆ ಅವರ ಸಂಪುಟ ಸಹೋದ್ಯೋಗಿ, ಪರಿಷತ್ ಸದಸ್ಯ ಸಂಕನೂರು ಫೆಬ್ರವರಿ, ಮಾರ್ಚ್ ನಲ್ಲಿಯೇ ಪತ್ರ ಬರೆದಿದ್ದಾರೆ. ನನ್ನನ್ನ ಸಾಕ್ಷಿ ಕೇಳುವ ಗೃಹ ಸಚಿವರು ಅವರ ಬಳಿ ಸಾಕ್ಷಿ ಕೇಳುವುದಿಲ್ಲವೇ? ಆಗಲೇ ಏಕೆ ಅಕ್ರಮದ ಬಗ್ಗೆ ತನಿಖೆಗೆ ಕೊಡಲಿಲ್ಲ ಎಂದು ಪ್ರಶ್ನಿಸಿ ಅರಗಗೆ ತಿರುಗೇಟು ನೀಡಿದ್ದಾರೆ.

Leave a Reply

Your email address will not be published.

Back to top button