LatestMain PostNationalSmartphonesTech

ಭಾರತದ 10, ಪಾಕಿಸ್ತಾನದ 6 ಯೂಟ್ಯೂಬ್ ಚ್ಯಾನೆಲ್‌ಗಳು ಬ್ಯಾನ್

ನವದೆಹಲಿ: ಭಾರತ ದೇಶದ ಬಗ್ಗೆ ಸುಳ್ಳು ಸುದ್ದಿಗಳನ್ನು ಪ್ರಚಾರ ಮಾಡುತ್ತಿದ್ದ 16 ಯೂಟ್ಯೂಬ್ ಚ್ಯಾನೆಲ್‌ಗಳನ್ನು ಸೋಮವಾರ ಬ್ಯಾನ್ ಮಾಡಿದೆ. ಭಾರತ ಬ್ಯಾನ್ ಮಾಡಿರುವ 16 ಯೂಟ್ಯೂಬ್ ಚ್ಯಾನೆಲ್‌ಗಳ ಪೈಕಿ 10 ಭಾರತದ ಹಾಗೂ 6 ಪಾಕಿಸ್ತಾನದ ಚ್ಯಾನೆಲ್‌ಗಳು ಸೇರಿವೆ.

ಈ ತಿಂಗಳ ಪ್ರಾರಂಭದಲ್ಲಿ ಮಾಹಿತಿ ಹಾಗೂ ಪ್ರಸಾರ ಇಲಾಖೆ 22 ಯೂಟ್ಯೂಬ್ ಚ್ಯಾನೆಲ್‌ಗಳನ್ನು ಬ್ಯಾನ್ ಮಾಡಿತ್ತು. ಅವುಗಳಲ್ಲಿ 18 ಭಾರತೀಯ ಹಾಗೂ 4 ಪಾಕಿಸ್ತಾನದ ಚಾನೆಲ್‌ಗಳು ಸೇರಿದ್ದವು. ಇವುಗಳು ಸುಳ್ಳು ಮಾಹಿತಿಗಳನ್ನು ಪ್ರಸಾರ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಬ್ಯಾನ್ ಮಾಡಲಾಗಿದೆ. ಇದನ್ನೂ ಓದಿ: ಗುಜರಾತ್‌ನಿಂದ ಕರ್ನಾಟಕಕ್ಕೆ 3 ಶತಕೋಟಿ ಡಾಲರ್‌ ಹೂಡಿಕೆಯ ಚಿಪ್‌ ಘಟಕ ಶಿಫ್ಟ್‌?

ಯೂಟ್ಯೂಬ್ ಚ್ಯಾನೆಲ್‌ಗಳ ನಿಷೇಧದ ಬಗ್ಗೆ ಪತ್ರಿಕಾ ಮಾಹಿತಿ ಬ್ಯೂರೋ(ಪಿಬಿಐ), ರಾಷ್ಟ್ರೀಯ ಭದ್ರತೆ, ಭಾರತದ ವಿದೇಶಿ ಸಂಬಂಧಗಳು, ದೇಶದ ಕೋಮು ಸೌಹಾರ್ದತೆ ಹಾಗೂ ಸಾರ್ವಜನಿಕ ಸುವ್ಯವಸ್ಥೆಗೆ ಸಂಬಂಧಿಸಿದ ವಿಷಯಗಳ ಕುರಿತು ಸುಳ್ಳು ಸುದ್ದಿಗಳನ್ನು ಹರಡಲು ಈ ಚ್ಯಾನೆಲ್‌ಗಳನ್ನು ಬಳಸಲಾಗಿತ್ತು ಎಂದಿದೆ. ಇದನ್ನೂ ಓದಿ: ಒಟ್ಟು 64 ಕೇಸ್ – ಸಕ್ರಿಯ ಪ್ರಕರಣಗಳ ಸಂಖ್ಯೆ 1,671ಕ್ಕೆ ಏರಿಕೆ

ಬ್ಯಾನ್ ಆಗಿರುವ ಭಾರತೀಯ ಮೂಲದ ಯೂಟ್ಯೂಬ್ ಚ್ಯಾನೆಲ್‌ಗಳು ಭಯೋತ್ಪಾದನೆ, ಧಾರ್ಮಿಕ ಸಮುದಾಯಗಳ ನಡುವೆ ದ್ವೇಷ, ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುವ ಕೆಲಸಕ್ಕೆ ಕೈ ಹಾಕಿದೆ. ಪರಿಶೀಲಿಸಲಾದ ಕೆಲವು ಸುದ್ದಿಗಳು ಸಮಾಜದ ವಿವಿಧ ವರ್ಗಗಳನ್ನು ಭಯಭೀತಗೊಳಿಸುವ ಸಾಮರ್ಥ್ಯ ಹೊಂದಿವೆ ಎಂದು ಕೇಂದ್ರ ತಿಳಿಸಿದೆ.

ಪಾಕಿಸ್ತಾನ ಮೂಲದ ಯೂಟ್ಯೂಬ್ ಚಾನೆಲ್‌ಗಳು ಉಕ್ರೇನ್‌ನಲ್ಲಿನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಭಾರತೀಯ ಸೇನೆ, ಜಮ್ಮು ಮತ್ತು ಕಾಶ್ಮೀರ, ಭಾರತದ ವಿದೇಶಿ ಸಂಬಂಧಗಳ ಬಗ್ಗೆ ನಕಲಿ ಸುದ್ದಿಗಳನ್ನು ಪೋಸ್ಟ್ ಮಾಡುತ್ತಿರುವುದು ಕಂಡುಬಂದಿದೆ. ಈ ಚಾನೆಲ್‌ಗಳು ಹರಡುತ್ತಿದ್ದ ವಿಷಯಗಳು ಸಂಪೂರ್ಣವಾಗಿ ಸುಳ್ಳು ಹಾಗೂ ಸೂಕ್ಷ್ಮವಾಗಿದೆ. ರಾಷ್ಟ್ರದ ಭದ್ರತೆ, ಸಾರ್ವಭೌಮತ್ವ, ಸಮಗ್ರತೆ ಹಾಗೂ ವಿದೇಶಗಳೊಂದಿಗಿನ ಭಾರತದ ಸ್ನೇಹ ಸಂಬಂಧಗಳನ್ನು ಘಾಸಿಗೊಳಿಸುವ ಪ್ರಯತ್ನವಾಗಿದೆ ಎಂದು ತಿಳಿಸಿದೆ.

Leave a Reply

Your email address will not be published.

Back to top button