ಬೆಂಗಳೂರು: ಸಮ್ಮಿಶ್ರ ಸರ್ಕಾರದ ಬಜೆಟ್ ನಲ್ಲಿ ಉತ್ತರ ಕರ್ನಾಟಕ ಜನರಿಗೆ ಅನ್ಯಾಯವಾಗಿದೆ ಎಂದು ಕಿಡಿಕಾರಿದ್ದ ಶಾಸಕ ನಡಹಳ್ಳಿ ಹೇಳಿಕೆಗೆ ಸಿಎಂ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಈ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಿಎಂ, ನಡಹಳ್ಳಿ ಗೆ ಬೇರೆ ಕೆಲಸ ಇಲ್ಲ ಅದ್ದರಿಂದ ಮಾತನಾಡುತ್ತಾರೆ. ಅವರಿಗೆ ಉತ್ತರ ಕರ್ನಾಟದ ಬಗ್ಗೆ ಕಮಿಟ್ಮೆಂಟ್ ಇದ್ದರೆ ತಾನೇ ಎಂದು ಪ್ರಶ್ನಿಸಿ, ಬೇಕ್ ಬೇಕಾದಂಗೆ ಪಕ್ಷಾಂತರ ಮಾಡಿಕೊಂಡು ಓಡಾಡವವರು. ಉತ್ತರ ಕರ್ನಾಟಕ್ಕೆ ಅನ್ಯಾಯವಾಗಿದೆ ಎಂದು ಒಂದು ಉದಾಹರಣೆ ನೀಡಲಿ ಎಂದು ಬಹಿರಂಗ ಸವಾಲು ನೀಡಿದರು.
Advertisement
Advertisement
ಇದೇ ವೇಳೆ ಉತ್ತರ ಕರ್ನಾಟಕಕ್ಕೆ ಅನ್ಯಾಯ ಎಂಬ ಎಚ್.ಕೆ.ಪಾಟೀಲ್ ಪತ್ರ ವಿಚಾರವಾಗಿ ಪ್ರತಿಕ್ರಿಯೆ ನೀಡಿ, 5 ಕಾರ್ಖಾನೆಗಳನ್ನು ಉತ್ತರ ಕರ್ನಾಟಕಕ್ಕೆ ಕೊಡುತ್ತಿದ್ದೇವೆ. ಅಲ್ಲದೇ ಗದಗ್ ಜಿಲ್ಲೆ ಒಂದಕ್ಕೇ 1,500ಕೋಟಿ ರೂ. ಕುಡಿಯುವ ನೀರಿಗೆ ನೀಡಿದ್ದೇವೆ ಎಂದು ವಿವರಿಸಿದರು.
Advertisement
ಬಹಿರಂಗ ಚರ್ಚೆಗೆ ಸಿದ್ಧ: ಬಜೆಟ್ ನಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಅನ್ಯಾಯದ ವಿಚಾರ ಈ ವಿಚಾರವಾಗಿ ಬಹಿರಂಗ ಚರ್ಚೆಗೆ ಸಿದ್ದನಿದ್ದೇನೆ. ಹೆಚ್.ಕೆ.ಪಾಟೀಲ್ ಸಂಬಂಧಪಟ್ಟ ಪತ್ರ ನನಗೆ ತಲುಪಿಲ್ಲ. ಬಜೆಟ್ ರಾಮನಗರ, ಮಂಡ್ಯ, ಹಾಸನಕ್ಕೆ ಸೀಮಿತ ಅಲ್ಲ. ಕಳೆದ 10 ವರ್ಷಗಳಿಂದ ಈ ಭಾಗಗಳಿಗೆ ಸಿಕ್ಕ ಅನುದಾನದ ಲೆಕ್ಕದಲ್ಲಿ ಈ ಬಜೆಟ್ ನಲ್ಲಿ ಸರಿಸುಮಾರು 200 ಕೋಟಿ ರೂ. ಕೊಟ್ಟಿರಬಹುದು. ಸದನದಲ್ಲಿ ಈ ಕುರಿತು ಚರ್ಚೆಗೆ ಸಿದ್ಧ ಎಂದು ಹೇಳಿದರು.