ನವದೆಹಲಿ: ಸ್ವಾತಂತ್ರ್ಯ ದಿನಾಚರಣೆಯ(Independence Day) ಸಂಭ್ರಮದ ಹಿನ್ನೆಲೆಯಲ್ಲಿ ದೇಶಾದ್ಯಂತ ಹರ್ ಘರ್ ತಿರಂಗಾ 2026 (Har Ghar Tiranga 2026) ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಈ ಅಭಿಯಾನವನ್ನು ಉದ್ಘಾಟಿಸಿದ್ದು ಆಗಸ್ಟ್ 9 ರಿಂದ ಆಗಸ್ಟ್ 17ರವರೆಗೆ ಈ ರಾಷ್ಟ್ರವ್ಯಾಪಿ ಅಭಿಯಾನ ನಡೆಯಲಿದೆ.

2026ರ ‘ಹರ್ ಘರ್ ತಿರಂಗಾ’ ವಿಶೇಷತೆ ಏನು?
ಈ ಬಾರಿಯ ಅಭಿಯಾನವು ಅತ್ಯಂತ ವಿಶೇಷತೆಯಿಂದ ಕೂಡಿದೆ. ಭಾರತದ ರಾಷ್ಟ್ರಗೀತೆ ವಂದೇ ಮಾತರಂಗೆ(Certificate) 150 ವರ್ಷಗಳು ತುಂಬುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿಯ ಹರ್ ಘರ್ ತಿರಂಗಾ ಅಭಿಯಾನವನ್ನು ವಂದೇ ಮಾತರಂ ಗೀತೆಗೆ ಮುಡಿಪಾಗಿಡಲಾಗಿದೆ. ದೇಶದ ಪ್ರಜೆಗಳು ವಂದೇ ಮಾತರಂ ಗೀತೆಯನ್ನು ಸರಿಯಾಗಿ ಹಾಡುವುದನ್ನು ಕಲಿಯಲು ಮತ್ತು ಸಾಮೂಹಿಕವಾಗಿ ಗಾಯನ ಮಾಡಲು ಪ್ರೋತ್ಸಾಹಿಸಲಾಗುತ್ತಿದೆ.
ಇದರ ಜೊತೆಗೆ, ಜಾಗತಿಕ ಮಟ್ಟದಲ್ಲಿ ಭಾರತೀಯ ರಾಯಭಾರ ಕಚೇರಿಗಳು ಮತ್ತು ಅನಿವಾಸಿ ಭಾರತೀಯರನ್ನು ಒಳಗೊಂಡ ಸೂರ್ಯಪಥ್ ತಿರಂಗಾ (SURYAPATH TIRANGA) ಎಂಬ ಸಾಂಕೇತಿಕ ಜಾಗತಿಕ ರಿಲೇಯನ್ನು ಕೂಡ ಆಯೋಜಿಸಲಾಗಿದೆ.
ನೋಂದಣಿ ಮತ್ತು ಧ್ವಜಾರೋಹಣ ಮಾಡುವುದು ಹೇಗೆ?
ಹರ್ ಘರ್ ತಿರಂಗಾ (Har Ghar Tiranga) ಅಧಿಕೃತ ಪೋರ್ಟಲ್‌ಗೆ www.harghartiranga.com ಭೇಟಿ ನೀಡಿ.
ಮುಖಪುಟದಲ್ಲಿರುವ ‘Hoist Flag’ (ಧ್ವಜಾರೋಹಣ) ಲಿಂಕ್ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಹೆಸರು, ಮೊಬೈಲ್ ಸಂಖ್ಯೆ, ದೇಶ ಮತ್ತು ರಾಜ್ಯದ ವಿವರಗಳನ್ನು ನಮೂದಿಸಿ.
ಸೂಚನೆಗಳನ್ನು ಅನುಸರಿಸಿ ನಿಮ್ಮ ಭಾಗವಹಿಸುವಿಕೆಯನ್ನು ನೋಂದಾಯಿಸಿ.
Our Tricolour is our pride and a constant source of inspiration to always give our best for the nation.
Let us participate enthusiastically in the #HarGharTiranga movement and renew our collective resolve to contribute towards building a Viksit Bharat. Glad that this year’s… https://t.co/XH8Z1JI6my
— Narendra Modi (@narendramodi) August 9, 2026
ತಿರಂಗಾ ಜೊತೆ ಸೆಲ್ಫಿ ಅಪ್‌ಲೋಡ್ ಮಾಡುವುದು ಹೇಗೆ?
1. ಪೋರ್ಟಲ್‌ನಲ್ಲಿರುವ ‘Upload a Selfie’ ಆಯ್ಕೆಯನ್ನು ಕ್ಲಿಕ್ ಮಾಡಿ.
2. ನಿಮ್ಮ ವೈಯಕ್ತಿಕ ವಿವರಗಳನ್ನು ನಮೂದಿಸಿ.
3. ರಾಷ್ಟ್ರಧ್ವಜದೊಂದಿಗೆ ನೀವು ತೆಗೆದುಕೊಂಡಿರುವ ಸೆಲ್ಫಿ ಫೋಟೋವನ್ನು ಅಪ್‌ಲೋಡ್ ಮಾಡಿ ‘Submit’ ನೀಡಿ.
ಸರ್ಟಿಫಿಕೇಟ್ ಡೌನ್‌ಲೋಡ್ ಮಾಡುವುದು ಹೇಗೆ?
ನೋಂದಣಿ ಹಾಗೂ ಸೆಲ್ಫಿ ಅಪ್‌ಲೋಡ್ ಪ್ರಕ್ರಿಯೆ ಪೂರ್ಣಗೊಂಡ ನಂತರ, ಸಿಸ್ಟಮ್ ನಿಮ್ಮ ಹೆಸರಿನಲ್ಲಿ ‘Har Ghar Tiranga Certificate’ ಅನ್ನು ಜನರೇಟ್ ಮಾಡುತ್ತದೆ. ಅದನ್ನು ನೀವು ನೇರವಾಗಿ ಡೌನ್‌ಲೋಡ್ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬಹುದು.
5 ಹಂತಗಳಲ್ಲಿ ವಂದೇ ಮಾತರಂ ಕಲಿಯಿರಿ!
ಈ ಬಾರಿಯ ಜಾಲತಾಣದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ವಂದೇ ಮಾತರಂ ಕಲಿಯಲು 5 ಹಂತಗಳ ಟ್ಯುಟೋರಿಯಲ್ ನೀಡಲಾಗಿದೆ:
ಹಂತ 1: ಆಲಿಸುವುದು
ಹಂತ 2: ಹಿನ್ನೆಲೆ ವಿವರಣೆ
ಹಂತ 3: ಸಾಲು-ಸಾಲಾಗಿ ಕಲಿಯುವುದು
ಹಂತ 4: ಗಾಯಕ ವೃಂದ ಮತ್ತು ಏಕವ್ಯಕ್ತಿ ಗಾಯನ
ಹಂತ 5: ಕೆರಾಕೆ (Karaoke)
ಆಗಸ್ಟ್ 14ರಂದು ವಿಭಜನೆಯ ಭೀಕರತೆಯ ಸ್ಮರಣಾರ್ಥ ದಿನ (Partition Horrors Remembrance Day) ಅಂಗವಾಗಿ ವಿವಿಧ ಕಾರ್ಯಕ್ರಮಗಳು, ಸಾಕ್ಷ್ಯಚಿತ್ರ ಪ್ರದರ್ಶನ ಹಾಗೂ ಮೌನ ಮೆರವಣಿಗೆಗಳನ್ನು ಕೂಡ ಆಯೋಜಿಸಲಾಗಿದೆ.
