ಗಾಂಧಿನಗರ: ಹಿಡಿಯಲು ಬಂದ ಚಿರತೆಯಿಂದ ನಾಯಿಯೊಂದು ಬೊಗಳಿ ತಪ್ಪಿಸಿಕೊಂಡು ಹೋಗಿರುವ ಘಟನೆ ಗುಜರಾತ್ನ ಅಮ್ರೆಲಿಯಲ್ಲಿ ನಡೆದಿದೆ.
ಮನೆಯ ಹೊರಗೆ ಬಾಗಿಲು ಬಳಿ ಮಲಗಿರುವ ನಾಯಿಯನ್ನು ಚಿರತೆ ಮೆಲ್ಲನೆ ಬಂದು ಹಿಡಿಯಲು ಬರುತ್ತದೆ. ಈ ವೇಳೆ ಚಿರತೆ ಕತ್ತಿಗೆ ಬಾಯಿ ಹಾಕಿದ ತಕ್ಷಣ ಎಚ್ಚರಗೊಂಡ ನಾಯಿ ಜೋರಾಗಿ ಬೊಗಳಿ ಬಿಡಿಸಿಕೊಂಡು ಓಡಿ ಹೋಗಿದೆ. ಈ ಎಲ್ಲ ದೃಶ್ಯಗಳು ಮನೆಯ ಮುಂಭಾಗದಲ್ಲಿ ಅಳವಡಿಸಿರುವ ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದೆ.
Advertisement
https://www.instagram.com/p/B3j9sZBnjUt/?utm_source=ig_embed&utm_campaign=dlfix
Advertisement
ಈ ವಿಡಿಯೋದಲ್ಲಿ ನಾಯಿ ಜೋರಾಗಿ ಬೊಗಳಿದ ಕಾರಣ ಸ್ವಲ್ಪ ಕಕ್ಕಾಬಿಕ್ಕಿಯಾದ ಚಿರತೆ ನಾಯಿಯನ್ನು ಬಿಟ್ಟು ಬಿಡುತ್ತದೆ. ಆಗ ನಾಯಿ ಓಡಿ ಹೋಗುತ್ತದೆ. ಆದರೆ ತನ್ನ ಭೇಟೆಯನ್ನು ಬಿಟ್ಟು ಕೊಡದ ಚಿರತೆ ನಾಯಿಯನ್ನು ಬೆನ್ನಟ್ಟುತ್ತದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, 80 ಸಾವಿರಕ್ಕೂ ಹೆಚ್ಚಿನ ಜನರು ವೀಕ್ಷಣೆ ಮಾಡಿದ್ದಾರೆ.
Advertisement
ಈ ವಿಡಿಯೋದಲ್ಲಿ ನಾಯಿ ಓಡಿ ಹೋಗಿದೆ. ಆದರೆ ಅದನ್ನು ಅಟ್ಟಿಸಿಕೊಂಡು ಹೋದ ಚಿರತೆ ಅದನ್ನು ಬಿಟ್ಟಿದೆಯಾ ಎಂಬ ಪ್ರಶ್ನೆ ಕಾಡುತ್ತಿದ್ದು, ಈ ಬಗ್ಗೆ ಕೆಲವರು ಕಮೆಂಟ್ ಮಾಡಿದ್ದು, ನಾಯಿ ಜೋಪಾನವಾಗಿ ಇದ್ದರೆ ಸಾಕು ಎಂದು ಕೇಳಿಕೊಂಡಿದ್ದಾರೆ.