ನವದೆಹಲಿ: ಯುಪಿಐ ಪಾವತಿ ಮಾಡುವವರಿಗೆ ಮತ್ತು ವ್ಯಾಪಾರಿಗಳಿಗೆ ದೊಡ್ಡ ರಿಲೀಫ್ ಸಿಕ್ಕಿದೆ. ಯುಪಿಐ (UPI) ವಹಿವಾಟುಗಳ ಮೇಲೆ ಮರ್ಚೆಂಟ್ ಡಿಸ್ಕೌಂಟ್ ರೇಟ್ (MDR) ಶುಲ್ಕವನ್ನು ಜಾರಿ ಮಾಡುವ ಯಾವುದೇ ಯೋಜನೆ ಸಧ್ಯಕ್ಕಿಲ್ಲ ಎಂದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಸ್ಪಷ್ಟಪಡಿಸಿದೆ.
ದೀಪಾವಳಿ ಹಬ್ಬ ಮುಗಿದ ಬೆನ್ನಲ್ಲೇ ಯುಪಿಐ ಪಾವತಿಗಳ ಮೇಲೆ ಶುಲ್ಕ ವಿಧಿಸುವ ಕುರಿತು NPCI ಚರ್ಚಿಸಿತ್ತು. ಮೊದಲು ಎನ್ಪಿಸಿಐ ಈ ಹೊಸ ಶುಲ್ಕದ ನಿಯಮವನ್ನು ಹಬ್ಬಕ್ಕೂ ಮೊದಲೇ ಜಾರಿಗೆ ತರಲು ಪ್ಲ್ಯಾನ್ ಮಾಡಿತ್ತು. ಆದರೆ, ದೀಪಾವಳಿ ಹಬ್ಬದ ವ್ಯಾಪಾರ-ವಹಿವಾಟಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಈ ನಿರ್ಧಾರವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿತ್ತು.ಇದನ್ನೂ ಓದಿ: ದೀಪಾವಳಿ ಸಂಭ್ರಮದಲ್ಲಿ ವಿಷಗಾಳಿ – ದೇಹದ ಪ್ರಮುಖ ಭಾಗಗಳಿಗೆ ಮಾರಕವಾಗುತ್ತೆ ಈ ಅದೃಶ್ಯ ವಾಯು!
ಈಗ ಹಬ್ಬ ಮುಗಿದಿರುವುದರಿಂದ, ಹೊಸ ಶುಲ್ಕ ಯಾವಾಗಿನಿಂದ ಶುರುವಾಗುತ್ತದೆ ಎಂಬ ಕುತೂಹಲ ಎಲ್ಲರಿಗೂ ಇದೆ. ಆದರೆ, ಎನ್ಪಿಸಿಐ ಇದುವರೆಗೂ ಶುಲ್ಕ ಜಾರಿಯಾಗುವ ಅಧಿಕೃತ ದಿನಾಂಕವನ್ನು ಪ್ರಕಟಿಸಿಲ್ಲ. ಈ ಕುರಿತು ಸದ್ಯಕ್ಕೆ MDR ವಿಧಿಸುವ ಕುರಿತು ಯಾವುದೇ ಯೋಜನೆ ಇಲ್ಲ ಎಂದು NPCI ತಿಳಿಸಿದೆ.ಇದನ್ನೂ ಓದಿ: ದಾಖಲೆ ಬರೆದ ಹಾಸನಾಂಬ ಜಾತ್ರಾ ಮಹೋತ್ಸವ – 29.55 ಕೋಟಿ ರೂ. ಆದಾಯ ಸಂಗ್ರಹ
