ರಾಜ್ಯದಲ್ಲಿ ಸದ್ಯ ಹಿಂಗಾರು ಮಳೆಯ ಪ್ರಭಾವ ಕಡಿಮೆಯಾಗಿದ್ದು, ನವೆಂಬರ್ 13ರಂದು ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯುವ ಸಾಧ್ಯತೆಯಿದೆ. ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ ಇಲ್ಲ. ಕೊಡಗು, ಹಾಸನ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿಯೂ ಒಣಹವೆ ಇರಲಿದೆ. ನವೆಂಬರ್ 14ರವರೆಗೆ ರಾಜ್ಯದಲ್ಲಿ ಒಣಹವೆ ಮುಂದುವರಿಯುವ ಸಾಧ್ಯತೆಯಿದೆ. ನವೆಂಬರ್ 15 ಮತ್ತು 16ರಂದು ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
ಬೆಂಗಳೂರಿನಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಮಳೆಯ ಸಾಧ್ಯತೆ ಕಡಿಮೆಯಿದೆ. ಗರಿಷ್ಠ 29 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 29-19
ಮಂಗಳೂರು: 33-24
ಶಿವಮೊಗ್ಗ: 33-17
ಬೆಳಗಾವಿ: 31-14
ಮೈಸೂರು: 30-19
ಮಂಡ್ಯ: 30-19
ಮಡಿಕೇರಿ: 27-17
ರಾಮನಗರ: 30-19
ಹಾಸನ: 29-18
ಚಾಮರಾಜನಗರ: 29-19
ಚಿಕ್ಕಬಳ್ಳಾಪುರ: 29-18
ಕೋಲಾರ: 29-18
ತುಮಕೂರು: 30-19
ಉಡುಪಿ: 32-24
ಕಾರವಾರ: 32-23
ಚಿಕ್ಕಮಗಳೂರು: 28-18
ದಾವಣಗೆರೆ: 31-20
ಹುಬ್ಬಳ್ಳಿ: 32-16
ಚಿತ್ರದುರ್ಗ: 30-19
ಹಾವೇರಿ: 31-19
ಬಳ್ಳಾರಿ: 32-21
ಗದಗ: 32-19
ಕೊಪ್ಪಳ: 32-20
ರಾಯಚೂರು: 33-21
ಯಾದಗಿರಿ: 33-19
ವಿಜಯಪುರ: 32-18
ಕಲಬುರಗಿ: 33-18
ಬಾಗಲಕೋಟೆ: 32-18






