ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗೆ ದಿನಾ ಬೆಳಗಾದರೆ ಅತ್ಯಾಚಾರದಂತಹ ಸುದ್ದಿಗಳನ್ನು ಕೇಳುತ್ತಿದ್ದೇವೆ. ಅದೇ ರೀತಿ ಇದೀಗ ಮತ್ತೊಂದು ಇಂತದ್ದೇ ಆರೋಪವೊಂದು ಕ್ಯಾಬ್ ಚಾಲಕನ ವಿರುದ್ಧ ಕೇಳಿಬಂದಿದೆ.
ಹೌದು. ಕ್ಯಾಬ್ ಚಾಲಕ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಯುವತಿಯೊಬ್ಬಳು ಗಂಭೀರ ಆರೋಪ ಮಾಡಿದ್ದಾಳೆ. ಈ ಘಟನೆ ಹೆಚ್ ಎಸ್ ಆರ್ ಲೇಔಟ್ನ ಮುರುಗೇಶ್ ಪಾಳ್ಯದಲ್ಲಿ ನಡೆದಿದೆ.
ಆರೋಪ ಮಾಡಿರುವ ಯುವತಿ ಜೀವನ್ ಭೀಮಾನಗರದಲ್ಲಿ ಕೆಲಸ ಮಾಡುತ್ತಿದ್ದಾಳೆ. ನಿನ್ನೆ ರಾತ್ರಿ ಪಾರ್ಟಿ ಮುಗಿಸಿಕೊಂಡು ಮನೆಗೆ ತೆರಳಲು ಈಕೆ ಕ್ಯಾಬ್ ಬುಕ್ ಮಾಡಿದ್ದಳಂತೆ. ಹೀಗೆ ಕ್ಯಾಬ್ ಬಂದು ಯುವತಿ ಮುಂದೆ ಬಂದು ನಿಂತಿದ್ದು, ಆಕೆಯ ಕ್ಯಾಬ್ ಏರಿದ್ದಾಳೆ. ನಂತರ ಆಕೆ ಚಾಲಕನ ವಿರುದ್ಧ ಅತ್ಯಾಚಾರದ ಆರೋಪ ಮಾಡಿದ್ದಾಳೆ. ಇದನ್ನೂ ಓದಿ: ಸೆಸ್ ಸಂಸ್ಥೆಯಲ್ಲಿರುವವರೆಲ್ಲ RSSನವರು: ಸಿದ್ದರಾಮಯ್ಯ
ಇತ್ತ ಕ್ಯಾಬ್ ಚಾಲಕ ಈ ಬಗ್ಗೆ ಪ್ರತಿಕ್ರಿಯಿಸಿ, ಯುವತಿ ಕುಡಿದ ಮತ್ತಿನಲ್ಲಿದ್ದಳು. ಅರೆಪ್ರೆಜ್ಞೆ ಅವಸ್ಥೆಯಲ್ಲಿದ್ದ ಯುವತಿ, ಮನೆ ಜಾಗ ಬಂದರೂ ಇಳಿಯಲಿಲ್ಲ. ಹೀಗಾಗಿ ಆಕೆಯನ್ನು ಇಳಿಸಲು ಹೋದೆ. ಆಗ ಆಕೆ ನನ್ನ ಮೇಲೆ ಅತ್ಯಾಚಾರದ ಆರೋಪ ಮಾಡಿದ್ದಾಳೆ ಎಂದು ತಿಳಿಸಿದ್ದಾರೆ. ಸದ್ಯ ಘಟನೆ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ಇದನ್ನೂ ಓದಿ: ಮಸೀದಿಗಳಿಗಾಗಿ ಕೆಡವಿದ ದೇವಸ್ಥಾನಗಳ ಮರು ನಿರ್ಮಾಣ: ಸಂಗೀತ್ ಸೋಮ್