ಲಾಕ್‍ಡೌನ್‍ನಿಂದ ಮನೆಯಲ್ಲಿಯೇ ಇರಬೇಕಾದ ಅನಿವಾರ್ಯತೆ ಇದೆ. ಇದರಿಂದ ಕೆಲವರು ಪ್ರತಿದಿನ ಮಾಡುತ್ತಿದ್ದ ಜಿಮ್, ವರ್ಕೌಟ್ ಎಲ್ಲವೂ ಬಂದ್ ಆಗಿದೆ. ಹೀಗಾಗಿ ಅವರಿಗೆ ಮನೆಯಲ್ಲಿಯೇ ಇದ್ದು ತೂಕ ಹೆಚ್ಚಾಗುತ್ತಿದೆ ಎಂಬ ಭಯವಿರುತ್ತದೆ. ಶುಂಠಿ ಜ್ಯೂಸ್ ಕುಡಿದ ದೇಹದ ತೂಕ ಹೆಚ್ಚಾಗುವುದನ್ನು ಕಡಿಮೆ ಮಾಡಿಕೊಳ್ಳಬಹುದು. ಸಿಂಪಲ್ ಆಗಿ ಶುಂಠಿ ಜ್ಯೂಸ್ ಮಾಡುವ ವಿಧಾನ ನಿಮಗಾಗಿ.
ಬೇಕಾಗುವ ಸಾಮಗ್ರಿಗಳು
1. ಶುಂಠಿ – ಅರ್ಧ ಇಂಚು
2. ನೀರು – ಒಂದು ಗ್ಲಾಸ್
3. ಜೇನು ತುಪ್ಪ – ಅರ್ಧ ಚಮಚ
4. ನಿಂಬೆಹಣ್ಣು – ಎರಡು ಹನಿ
Advertisement
Advertisement
ಬೇಕಾಗುವ ಸಾಮಾಗ್ರಿಗಳು
* ಒಂದು ಪಾತ್ರೆಯನ್ನು ಸ್ಟೌವ್ ಮೇಲಿಟ್ಟುಕೊಂಡು ಒಂದು ಗ್ಲಾಸ್ ನೀರು ಹಾಕಿಕೊಳ್ಳಿ. ಇದಕ್ಕೆ ಅರ್ಧ ಇಂಚು ಶುಂಠಿ ಮಿಕ್ಸ್ ಮಾಡಿಕೊಳ್ಳಿ.
* ನೀರು ಮತ್ತು ಶುಂಠಿ 10 ನಿಮಿಷ ಕುದಿಸಿದ ನಂತರ ಸೋಸಿಕೊಳ್ಳಿ.
* ಜ್ಯೂಸ್ ತಣ್ಣಗಾದ ಮೇಲೆ ಎರಡು ಹನಿ ನಿಂಬೆರಸ ಮತ್ತು ಜೇನುತುಪ್ಪ ಸೇರಿಸಿದ್ರೆ ಶುಂಠಿ ಜ್ಯೂಸ್ ರೆಡಿ.
Advertisement
ಇದನ್ನು ಪ್ರತಿನಿತ್ಯ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನಿಯಮಿತವಾಗಿ ಕುಡಿಯುವದರಿಂದ ನಿಮ್ಮ ದೇಹದಲ್ಲಿ ಕೊಬ್ಬು ಸಂಗ್ರಹಣೆ ಕಡಿಮೆ ಆಗೋದನ್ನು ತಡೆಯುತ್ತದೆ. ಈ ಜ್ಯೂಸ್ ಸೇವನೆ ಜೊತೆ ಡಯಟ್ ಪಾಲಿಸಿದರೆ ಆರೋಗ್ಯಕ್ಕೆ ಒಳ್ಳೆಯದು.