ಚಿಕ್ಕಮಗಳೂರು: ಕಸವನ್ನು ಡಂಬಿಂಗ್ ಯಾರ್ಡ್ಗೆ ಡಂಪ್ ಮಾಡುವಾಗ ಕಸದ ಸಮೇತ ಕಸದ ಆಟೋ ಕೂಡ ಡಂಪಿಂಗ್ ಯಾರ್ಡ್ನೊಳಗೆ ಬಿದ್ದರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ನಡೆದಿದೆ.
ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಮತ್ತಿಗಟ್ಟೆ ಮಾರ್ಗದಲ್ಲಿ ಬಣಕಲ್ ಗ್ರಾಮ ಪಂಚಾಯತ್ ಡಂಪಿಂಗ್ ಯಾರ್ಡ್ ನಿರ್ಮಿಸಿದೆ. ಗ್ರಾಮದ ಕಸವನ್ನು ಡಂಪಿಂಗ್ ಯಾರ್ಡ್ಗೆ ಡಂಪ್ ಮಾಡುವ ವೇಳೆ ಕಸದ ಆಟೋ ಕೂಡ ಡಂಪಿಂಗ್ ಯಾರ್ಡ್ ಒಳಕ್ಕೆ ಬಿದ್ದಿದ್ದು, ಕಸ ವಿಲೇವಾರಿ ಘಟಕದ ಬಳಿ ಸೂಕ್ತವಾದ ರಸ್ತೆ ಇಲ್ಲ. ಮಳೆ ಬಂದು ಸಾಕಷ್ಟು ಕೆಸರು ತುಂಬಿತ್ತು. ಹಾಗಾಗಿ, ಕಸದ ಜೊತೆ ಕಸದ ಆಟೋ ಕೂಡ ಡಂಪಿಂಗ್ ಯಾರ್ಡ್ನೊಳಗೆ ಬಿದ್ದಿದೆ. ಇದನ್ನೂ ಓದಿ: ಫಾಝಿಲ್ ಹತ್ಯೆ ಪ್ರಕರಣ- ಪರಾರಿಯಾಗುವ ರಸ್ತೆ ಮಾರ್ಗ ಬದಲಿಸಲು ಹೇಳಿರುವ ರೌಡಿ ಸುಹಾಸ್
ಬಳಿಕ ಜೆಸಿಬಿಯನ್ನು ಕರೆಸಿ ಸುಮಾರು 12 ಅಡಿ ಆಳದ ಗುಂಡಿಯೊಳಕ್ಕೆ ಬಿದ್ದಿದ್ದ ಆಟೋವನ್ನು ಮೇಲೆ ಎತ್ತಿದ್ದಾರೆ. ಕಸದ ಆಟೋ ಜೊತೆ ಆಟೋ ಡ್ರೈವರ್ ಕೂಡ ಗುಂಡಿಯೊಳಗೆ ಬಿದ್ದಿದ್ದಾನೆ. ಆದರೆ, ಆತನಿಗೆ ಏನೂ ಆಗಿಲ್ಲ. ಸಣ್ಣ-ಪುಟ್ಟ ಗಾಯಗಳಾಗಿವೆ. ಆಟೋ ಗುಂಡಿಯೊಳಕ್ಕೆ ಬಿದ್ದ ಕೂಡಲೇ ಚಾಲಕ ಮೇಲೆ ಎದ್ದು ಬಂದಿದ್ದಾನೆ. ಇದನ್ನೂ ಓದಿ: ಕಳ್ಳ ಸಿಕ್ಕಿಲ್ಲವೆಂದು ಪತ್ನಿಗೆ ಥರ್ಡ್ ಡಿಗ್ರಿ ಚಿತ್ರಹಿಂಸೆ – ಪೊಲೀಸ್ ಅಮಾನತು
Live Tv
[brid partner=56869869 player=32851 video=960834 autoplay=true]