ಲಕ್ನೋ: ಯುಪಿಯ ಹಮೀರ್‌ಪುರದಲ್ಲಿ ಮಹಿಳೆಯೊಬ್ಬರಿಗೆ ಥರ್ಡ್ ಡಿಗ್ರಿ ಚಿತ್ರಹಿಂಸೆ ನೀಡಿದ ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.
ಹಮೀರ್‌ಪುರ ಜಿಲ್ಲೆಯ ಪೊಲೀಸ್ ಇನ್ಸ್‌ಪೆಕ್ಟರ್ ಕಳ್ಳತನ ಮಾಡಿದ ಆರೋಪಿಯನ್ನು ಹಿಡಿಯಲು ಆತನ ಮನೆಗೆ ಹೋಗಿದ್ದಾನೆ. ಆದರೆ ಕಳ್ಳ ಮನೆಯಲ್ಲಿ ಇಲ್ಲದಿರುವುದನ್ನು ನೋಡಿ ಅವನ ಹೆಂಡತಿಯನ್ನು ಬಂಧಿಸಿ ಪೊಲೀಸ್ ಠಾಣೆಗೆ ಕರೆತಂದಿದ್ದಾನೆ. ಅಷ್ಟೇ ಅಲ್ಲದೇ ಅವಳಿಗೆ ಥರ್ಡ್ ಡಿಗ್ರಿ ಟಾರ್ಚುರೆ ನೀಡಿದ್ದಾನೆ. ಇದನ್ನೂ ಓದಿ: ಈತನ ಹೊಟ್ಟೆಯಲ್ಲಿತ್ತು 1 ರೂಪಾಯಿಯ 63 ನಾಣ್ಯಗಳು – ಎಕ್ಸ್‌ರೇ ನೋಡಿ ವೈದ್ಯರೂ ಶಾಕ್
Advertisement
Advertisement
ಮೂರು ದಿನಗಳ ಕಾಲ ಆಕೆಯನ್ನು ಪೊಲೀಸ್ ಠಾಣೆಯಲ್ಲಿ ಇರಿಸಿಕೊಂಡಿದ್ದನು. ಇನ್ಸ್‌ಪೆಕ್ಟರ್ ಮಹಿಳೆಗೆ ಅಮಾನುಷವಾಗಿ ಥಳಿಸಿದ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಲ್ಲದೇ ಇನ್ಸ್‌ಪೆಕ್ಟರ್ ಕಳ್ಳನ ಮನೆಯನ್ನು ಧ್ವಂಸ ಮಾಡಿದ ಆರೋಪವೂ ಕೇಳಿಬಂದಿತ್ತು. ಈ ಹಿನ್ನೆಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಇಲಾಖೆಯು, ಅಧಿಕಾರಿಯನ್ನು ಅಮಾನತುಗೊಳಿಸಿದೆ.
Advertisement
Advertisement
ಸಂತ್ರಸ್ತೆ ಮಂಜುಲ್ ಈ ಕುರಿತು ಮಾತನಾಡಿದ್ದು, ಅಧಿಕಾರಿ ನಮ್ಮ ಮನೆಗೆ ನುಗ್ಗಿ ನನ್ನನ್ನು ಅಮಾನುಷವಾಗಿ ಥಳಿಸಲು ಆರಂಭಿಸಿದನು. ಅಲ್ಲದೇ ಅವನು ನನ್ನನ್ನು ಠಾಣೆಗೆ ಕರೆದೊಯ್ದು ಲಾಕ್ ಅಪ್‍ನಲ್ಲಿ ಬಂಧಿಸಿದ. ಮೂರು ದಿನಗಳ ಕಾಲ ನನಗೆ ಚಿತ್ರಹಿಂಸೆ ನೀಡಿದ ಎಂದು ಆರೋಪಿಸಿದ್ದಾಳೆ. ಇದನ್ನೂ ಓದಿ: ಜಿಮ್‍ನಲ್ಲಿದ್ದ ಎಎಪಿ ಮುಖಂಡನನ್ನು ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು