ಪುನೀತ್ ರಾಜ್ ಕುಮಾರ್ (Puneeth Raj Kumar) ಕನಸಿನ ಗಂಧದ ಗುಡಿ ಡಾಕ್ಯುಡ್ರಾಮಾ ಸಿನಿಮಾ ಇಂದು ಬಿಡುಗಡೆ ಆಗಿದೆ. ಬೆಳಗ್ಗೆಯೇ ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸ್ಪೆಷಲ್ ಶೋ ಆಯೋಜನೆಗೊಂಡಿದ್ದವು. ಮೊದಲ ಪ್ರದರ್ಶನದಲ್ಲೇ ನೆಚ್ಚಿನ ನಟನ ಚಿತ್ರವನ್ನು ಕಣ್ತುಂಬಿಕೊಂಡ ಅಭಿಮಾನಿಗಳು ಭಾವುಕರಾದರು. ಅಭಿಮಾನಿಗಳ ಜೊತೆಯೇ ಡಾ.ರಾಜ್ ಕುಟುಂಬ ಕೂಡ ಸಿನಿಮಾ ವೀಕ್ಷಿಸಿತು.
Advertisement
ಇಂದು ಬೆಳಗ್ಗೆ ಹತ್ತು ಗಂಟೆಯೊಳಗೆ ಬೆಂಗಳೂರಿನಲ್ಲೇ 50ಕ್ಕೂ ಹೆಚ್ಚು ಪ್ರದರ್ಶನಗಳನ್ನು ಆಯೋಜನೆ ಮಾಡಿದ್ದು, ಬೆಳಗಿನ ಜಾವವೇ 50 ಬಾರಿ ಈ ಸಿನಿಮಾ ಬೆಂಗಳೂರಿನ ಮಲ್ಟಿಪ್ಲೆಕ್ಸ್ ಚಿತ್ರ ಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ ಎಂದು ವಿತರಕ ಕಾರ್ತಿಕ್ ಗೌಡ ಮಾಹಿತಿ ಹಂಚಿಕೊಂಡಿದ್ದಾರೆ. ಇದೊಂದು ನೂತನ ದಾಖಲೆ ಎಂದೂ ಅವರು ತಿಳಿಸಿದ್ದಾರೆ. ಬೆಳಗಿನ ಜಾವ 6 ಗಂಟೆಯಿಂದಲೇ ಸಿನಿಮಾ ಪ್ರದರ್ಶನ ಶುರುವಾಗಿದೆ. ಇದನ್ನೂ ಓದಿ: ಗಂಧದಗುಡಿ ಸಿನಿಮಾ ಅಲ್ಲವೇ ಅಲ್ಲ, ಅದೊಂದು ಅನುಭೂತಿ
Advertisement
Advertisement
ನಿನ್ನೆ ರಾತ್ರಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆ ಪೇಯ್ಡ್ ಪ್ರೀಮಿಯರ್ (Special Show) ಆಯೋಜನೆ ಮಾಡಲಾಗಿತ್ತು. ನಲವತ್ತಕ್ಕೂ ಹೆಚ್ಚು ಪೇಯ್ಡ್ ಪ್ರೀಮಿಯರ್ ಪ್ರದರ್ಶನ ನಡೆದಿರುವುದು ವಿಶೇಷ. ಪೇಯ್ಡ್ ಪ್ರೀಮಿಯರ್ ಶೋ ಆಯೋಜನೆ ಆಗುತ್ತಿದ್ದಂತೆಯೇ ಅಭಿಮಾನಿಗಳು ಟಿಕೆಟ್ ಅನ್ನು ಮುಗಿಬಿದ್ದು ಖರೀದಿಸಿದ್ದರು. ಬಹುತೇಕ ಚಿತ್ರಮಂದಿರಗಳ ಮುಂದೆ ಹೌಸ್ ಫುಲ್ ಬೋರ್ಡ್ ಹಾಕಲಾಗಿತ್ತು. ಪೇಯ್ಡ್ ಪ್ರೀಮಿಯರ್ ಮೂಲಕವೇ 25 ಲಕ್ಷ ರೂಪಾಯಿಗೂ ಅಧಿಕ ಹಣ ಬಾಕ್ಸ್ ಆಫೀಸ್ ಕಲೆಕ್ಷನ್ ಆಗಿದೆ ಎನ್ನುವ ಮಾಹಿತಿಯೂ ಇದೆ.
Advertisement
ಪುನೀತ್ ರಾಜ್‍ಕುಮಾರ್ ಗಂಧದ ಗುಡಿ (Gandhad Gudi) ಹೆಸರಿನಲ್ಲಿ ಡಾಕ್ಯುಮೆಂಟರಿ ಮಾಡಿದ್ದಾರೆ ಅಂದಾಗ, ಕುತೂಹಲಕ್ಕಿಂತ ಅನುಮಾನಿಸಿದವರೆ ಹೆಚ್ಚು. ಓಟಿಟಿ ಮೂಲಕ ಜಗತ್ತಿನ ಸಿನಿಮಾಗಳು ನಮ್ಮುಂದಿರುವಾಗ, ಡಿಸ್ಕವರಿ ಚಾನೆಲ್ ಗಳು ನಮ್ಮ ಬೆರಳ ತುದಿಯಲ್ಲೇ ನಲಿಯುತ್ತಿರುವಾಗ, ಅದಕ್ಕಿಂತ ಅಪ್ಪು ಇನ್ನೇನು ಮಾಡುವುದಕ್ಕೆ ಸಾಧ್ಯ? ಅಂತ ಅನಿಸಿದ್ದೂ ಇದೆ. ಪುನೀತ್ ಡ್ಯಾನ್ಸ್, ಪುನೀತ್ ಡೈಲಾಗ್, ಪುನೀತ್ ನಟನೆ, ಪುನೀತ್ ನಗುವನ್ನು ಬೆಳ್ಳಿ ಪರದೆಯಲ್ಲಿ ನೋಡಿ, ಕಣ್ತುಂಬಿಕೊಂಡಿರುವ ಅಭಿಮಾನಿಗಳು, ಇದ್ಯಾವುದೂ ಇಲ್ಲದ ಕಾಡು ಮೇಡುಗಳನ್ನು ನೋಡುವುದಕ್ಕೆ ಇಷ್ಟ ಪಡುತ್ತಾರಾ ಅಂತ ಚರ್ಚೆ ಮಾಡಿದ್ದೂ ಇದೆ. ಆದರೆ, ಅದೆಲ್ಲದರ ಆಚೆ ಗಂಧದ ಗುಡಿ ಹೊಸ ಅನುಭವವನ್ನು ನೀಡುತ್ತದೆ. ಸಿನಿಮಾ ಕೊಡುವ ಥ್ರಿಲ್ ಗಿಂತ ಅಪ್ಪು ಇಲ್ಲಿ ಹೊಸ ಅನುಭೂತಿಯನ್ನು ಕಟ್ಟಿ ಕೊಡ ಯತಿ ಡೆತ್ ಕಟ್ಟಿ ಕೊಡುತ್ತಾರೆ. ಅವರು ಬೆಟ್ಟ ಹತ್ತಿದರೇ ನಾವೇ ಬೆಟ್ಟ ಹತ್ತಿದಷ್ಟು ಖುಷಿ, ಅವರು ಕಾಡಲ್ಲಿ ನಡೆದು ಹೊರಟರೇ ಅವರನ್ನು ನಾವೇ ಹಿಂಬಾಲಿಸುವಂತಹ ಅನುಭವ, ನಡು ನಡುವೆ ಅಪ್ಪು ಮಾತು, ತಮಾಷೆ, ಭಯ ಎಲ್ಲವೂ ಇಷ್ಟ ಇಷ್ಟ.