ನವದೆಹಲಿ: ಹಬ್ಬದ ವೇಳೆ ಆಹಾರ ಕಲಬೆರಕೆಗೆ ಬ್ರೇಕ್ ಹಾಕಲು ಕ್ರಮಕೈಗೊಳ್ಳುವಂತೆ ಎಲ್ಲಾ ರಾಜ್ಯಗಳಿಗೆ ಆಹಾರ ಸುರಕ್ಷತಾ ಗುಣಮಟ್ಟ ಪ್ರಾಧಿಕಾರ (FSSAI) ಸೂಚನೆ ನೀಡಿದೆ.
ಆಹಾರ ಕಲಬೆರಕೆ ತಡೆಗಟ್ಟಲು ಎಫ್ಎಸ್ಎಸ್ಎಐ ಮುಂದಾಗಿದೆ. ಹಬ್ಬದ ವೇಳೆ, ಸಿಹಿತಿಂಡಿ, ಹಾಲಿನ ಉತ್ಪನ, ಪಾನೀಯ, ಖಾದ್ಯ ತೈಲ ಸೇರಿ ಹಲವು ಉತ್ಪನಗಳ ಮೇಲೆ ನಿಗಾ ವಹಿಸಲು ಸೂಚಿಸಿದೆ. ಇದನ್ನೂ ಓದಿ: ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಕೈತಪ್ಪಿದ ಅಂಜನಾದ್ರಿ ಬೆಟ್ಟ
ಹಬ್ಬದ ಸಮಯದಲ್ಲಿ ತಪಾಸಣೆ ಹೆಚ್ಚು ಮಾಡಬೇಕು. ಮಾದರಿಗಳ ಸಂಗ್ರಹ ಹೆಚ್ಚಿಸಬೇಕು. ಫುಡ್ ಸೇಫ್ಟಿ ಆನ್ ವೀಲ್ಸ್ನಲ್ಲಿ ನಿಯೋಜನೆ ಮಾಡಬೇಕು. ಸ್ಥಳದಲ್ಲೇ ಆಹಾರ ಪರೀಕ್ಷೆ ಮಾಡಬೇಕು ಎಂದು ತಿಳಿಸಿದೆ.
ಕಲಬೆರಕೆ ಆಹಾರದ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು. ಹೀಗೆ ಹಲವು ಅಗತ್ಯ ಕ್ರಮ ವಹಿಸುವಂತೆ ರಾಜ್ಯಗಳ ಎಫ್ಡಿಎ ಅಧಿಕಾರಿಗಳಿಗೆ ಪ್ರಾಧಿಕಾರ ಸೂಚನೆ ನೀಡಿದೆ. ಇದನ್ನೂ ಓದಿ: ಚೆನ್ನೈಯಲ್ಲಿ 12 ಕೋಟಿ ಮೌಲ್ಯದ ಚೈನೀಸ್ ಪಟಾಕಿ ವಶ

