ಶಿವಮೊಗ್ಗ: ಎಟಿಎಂ (ATM) ರಿನಿವಲ್ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ ಬ್ಯಾಂಕ್ (Bank) ಮ್ಯಾನೇಜರ್ನಂತೆ ಕರೆ ಮಾಡಿದ ಸೈಬರ್ ವಂಚಕರು ಲಕ್ಷಾಂತರ ರೂ. ಹಣವನ್ನು ವಂಚಿಸಿರುವ ಘಟನೆ ಶಿವಮೊಗ್ಗದಲ್ಲಿ (Shivamogga) ನಡೆದಿದೆ.
ನಗರದ ರಾಮಚಂದ್ರ ಅವರಿಗೆ ಅಪರಿಚಿತ ವ್ಯಕ್ತಿಯೊಬ್ಬ ಕೆನರಾ ಬ್ಯಾಂಕ್ ಮ್ಯಾನೇಜರ್ನಂತೆ ಫೋನ್ ಮಾಡಿದ್ದಾನೆ. ಬಳಿಕ ನಿಮ್ಮ ಎಟಿಎಂ ಕಾರ್ಡ್ ಬ್ಲಾಕ್ ಆಗಿದೆ. ಅದನ್ನು ರಿನಿವಲ್ ಮಾಡಬೇಕಾಗಿದೆ. ಆದ್ದರಿಂದ ನಿಮ್ಮ ಮೊಬೈಲ್ಗೆ ಬರುವ ಒಟಿಪಿ ನಂಬರ್ ತಿಳಿಸಿ ಎಂದು ನಂಬಿಸಿದ್ದಾನೆ. ಇದನ್ನು ಸತ್ಯವೆಂದು ನಂಬಿದ ರಾಮಚಂದ್ರ ಅವರು ಬಂದ ಒಟಿಪಿ ಸಂಖ್ಯೆಯನ್ನು ಹಂಚಿಕೊಂಡಿದ್ದಾರೆ. ಹೀಗೆ ಒಟಿಪಿ ಕೇಳುವ ಪ್ರಕ್ರಿಯೆ ಆರು ಬಾರಿ ಪುನರಾವರ್ತನೆಯಾಗಿದೆ. ತದನಂತರ ಮ್ಯಾನೇಜರ್ನಂತೆ ಮಾತನಾಡಿದ ವ್ಯಕ್ತಿ, ನಿಮ್ಮ ಎಟಿಎಂ ಕಾರ್ಡ್ ರಿನಿವಲ್ ಆಗಿದೆ ಎಂದು ಹೇಳಿ ಕರೆ ಕಟ್ ಮಾಡಿದ್ದಾನೆ. ಇದನ್ನೂ ಓದಿ: ನೈಸ್ ರಸ್ತೆಯಲ್ಲಿ ಹೊತ್ತಿ ಉರಿದ ರಾಸಾಯನಿಕ ತುಂಬಿದ್ದ ಟ್ಯಾಂಕರ್ – 8 ಕಿಮೀ ಟ್ರಾಫಿಕ್ ಜಾಮ್
ನಂತರ ದೂರುದಾರರು ತಮ್ಮ ಮೊಬೈಲ್ನಲ್ಲಿ ಮೆಸೇಜ್ ಚೆಕ್ ಮಾಡಿದಾಗ ಅವರ ಖಾತೆಯಿಂದ ಹಂತ ಹಂತವಾಗಿ ಒಟ್ಟು 2,74 ಲಕ್ಷ ರೂ. ಕಡಿತವಾಗಿತ್ತು. ಕೂಡಲೇ ಸಂಶಯಗೊಂಡು ಬ್ಯಾಂಕಿಗೆ ತೆರಳಿ ವಿಚಾರಿಸಿದಾಗ, ಒಟಿಪಿ ಪಡೆದುಕೊಂಡು ಮೋಸದಿಂದ ಹಣ ವರ್ಗಾವಣೆ ಮಾಡಿಕೊಂಡಿರುವುದು ತಿಳಿದುಬಂದಿದೆ. ಈ ಸಂಬಂಧ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: 30 ಕೆಜಿ ಸಿಲಿಂಡರ್ನಲ್ಲಿ 27 ಕೆಜಿ ಗ್ಯಾಸ್ ಸರಬರಾಜು – ಸ್ಥಳೀಯರಿಂದ ತರಾಟೆ
