ಬೆಂಗಳೂರು: ಮತ್ತಿಕೆರೆಯಲ್ಲಿ (Mathikere) ಗ್ಯಾಸ್ (Gas) ಎಜೆನ್ಸಿಯೊಂದು 30 ಕೆಜಿ ಸಿಲಿಂಡರ್ನಲ್ಲಿ (Cylinder) 27 ಕೆಜಿ ಗ್ಯಾಸ್ ಸರಬರಾಜು ಮಾಡಿರುವುದು ಪತ್ತೆಯಾಗಿದೆ.
ಮತ್ತಿಕೆರೆಯ ಚನ್ನಪ್ಪಗಾರ್ಡನ್ನಲ್ಲಿ 2 ಮನೆಗೆ ಇಂಡಿಯನ್ ಗ್ಯಾಸ್ನ ಮೋಹನ್ ಏಜೆನ್ಸಿಯಿಂದ ಗ್ಯಾಸ್ ಸಿಲಿಂಡರ್ ಸರಬರಾಜು ಮಾಡಲಾಗಿತ್ತು. ಈ ಎರಡು ಸಿಲಿಂಡರ್ ತೂಕ ಪರಿಶೀಲಿಸಿದಾಗ 27 ಕೆಜಿ ಗ್ಯಾಸ್ ಇರುವುದು ಗೊತ್ತಾಗಿದೆ. ಕೂಡಲೇ ಸ್ಥಳೀಯರು ಏಜೆನ್ಸಿಯ ಸಿಬ್ಬಂದಿಯನ್ನು ಹಿಡಿದು ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: Kolkata Stampede | ದುರ್ಗಾ ಪೆಂಡಾಲ್ ಆಯೋಜಕರು ಸೇರಿದಂತೆ 7 ಮಂದಿ ಅರೆಸ್ಟ್
ಈ ಬಗ್ಗೆ ಮಾತನಾಡಿರುವ ಸ್ಥಳೀಯ ನಿವಾಸಿ ಗೋವಿಂದ ರಾಜು, ಮೋಹನ್ ಗ್ಯಾಸ್ ಏಜೆನ್ಸಿಯವರು ಗ್ಯಾಸ್ ಪೂರೈಕೆ ಮಾಡಿದ್ದಾರೆ. 30 ಕೆಜಿ ಸಿಲಿಂಡರ್ನಲ್ಲಿ 27 ಕೆಜಿ ಇರೋದು ಪತ್ತೆಯಾಗಿದೆ. ಸಿಲಿಂಡರ್ ಚೆಕ್ ಮಾಡಿದಾಗ ಕಡಿಮೆ ತೂಕ ಇರೋದು ಗೊತ್ತಾಗಿದೆ. ಈ ಕೂಡಲೇ ಇಂತಹವರ ವಿರುದ್ಧ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಕಂಬಳಕ್ಕೆ ವಿದ್ಯುಕ್ತ ಚಾಲನೆ – ಇಂದಿನಿಂದ 2 ದಿನ ದಸರೆಯಲ್ಲಿ ಕರಾವಳಿ ಸಂಸ್ಕೃತಿಯ ಸಂಭ್ರಮ
