ಇಟಾನಗರ: ಅರುಣಾಚಲ ಪ್ರದೇಶದ (Arunachal Pradesh) ಸುಬನ್ಸಿರಿ ಜಿಲ್ಲೆಯಲ್ಲಿ ಹಠಾತ್ ಪ್ರವಾಹ ಹಾಗೂ ಭೂಕುಸಿತ (Landslide) ಸಂಭವಿಸಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ. ಈ ದುರಂತದಲ್ಲಿ ಐವರು ಸೇನಾ ಸಿಬ್ಬಂದಿ ನಾಪತ್ತೆಯಾಗಿದ್ದಾರೆ.

ಹಠಾತ್ ಪ್ರವಾಹದಿಂದ ದಿಬಾಂಗ್ ಕಣಿವೆಯ ಪಸು ಪಾನಿ ಸೇನಾ ಶಿಬಿರದ ಎರಡು ಆಶ್ರಯ ತಾಣಗಳು ಕೊಚ್ಚಿ ಹೋಗಿವೆ. ಅಲ್ಲದೇ ಕಿಯೋಜರಿಂಗ್-ಬೈಚಿಂಗ್ ಮಾರ್ಗದಲ್ಲಿ ಭೂಕುಸಿತ ಸಂಭವಿಸಿದೆ. ಇದರಿಂದ ಹಲವಾರು ಜನ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದಾರೆ ಎಂದು ವರದಿಯಾಗಿದೆ. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಇಬ್ಬರೂ ಸೈನಿಕರನ್ನು ರಕ್ಷಿಸಲಾಗಿದೆ. ಐವರು ಸೈನಿಕರು ನಾಪತ್ತೆಯಾಗಿದ್ದು, ಅವರಿಗಾಗಿ ತೀವ್ರ ಶೋಧ ಕಾರ್ಯ ನಡೆಯುತ್ತಿದೆ. ಇದನ್ನೂ ಓದಿ: ಉತ್ತರಾಖಂಡದಲ್ಲಿ ನಿರ್ಮಾಣ ಹಂತದ ಸುರಂಗಕ್ಕೆ ಏಕಾಏಕಿ ನುಗ್ಗಿದ ನೀರು – 10 ಮಂದಿ ಕಾರ್ಮಿಕರು ಸಿಲುಕಿರುವ ಶಂಕೆ
ಭಾರೀ ಮಳೆಯಿಂದಾಗಿ ಈಶಾನ್ಯ ರಾಜ್ಯದಾದ್ಯಂತ ಸಂಭವಿಸಿದ ಪ್ರವಾಹ ಮತ್ತು ಭೂಕುಸಿತದಿಂದ 10 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಈ ತಿಂಗಳ ಆರಂಭದಿಂದ ಇಲ್ಲಿಯವರೆಗೆ ಪ್ರವಾಹ ಮತ್ತು ಭೂಕುಸಿತಗಳಿಂದ ರಾಜ್ಯದಲ್ಲಿ 235 ರಸ್ತೆಗಳು, 40 ಸೇತುವೆಗಳು, 373 ನೀರು ಸರಬರಾಜು ವ್ಯವಸ್ಥೆಗಳು, 161 ವಿದ್ಯುತ್ ಮಾರ್ಗಗಳು, 823 ವಿದ್ಯುತ್ ಕಂಬಗಳು, 66 ನೀರಾವರಿ ಯೋಜನೆಗಳು, 122 ಸರ್ಕಾರಿ ಕಟ್ಟಡಗಳು, 41 ಶಾಲೆಗಳು, 12 ಜಲವಿದ್ಯುತ್ ಯೋಜನೆಗಳು, 26 ತಡೆಗೋಡೆಗಳು ಮತ್ತು 16 ಪ್ರವಾಹ ರಕ್ಷಣಾ ಗೋಡೆಗಳು, ಇತರ ಸಾರ್ವಜನಿಕ ಆಸ್ತಿಗಳು ಹಾನಿಗೊಳಗಾಗಿವೆ. ಇದನ್ನೂ ಓದಿ: ಉತ್ತರಾಖಂಡದಲ್ಲಿ ಸುರಂಗಕ್ಕೆ ಏಕಾಏಕಿ ನುಗ್ಗಿದ ನೀರು – 7 ಮಂದಿ ಬಲಿ, ಇಬ್ಬರಿಗಾಗಿ ಮುಂದುವರಿದ ಶೋಧಕಾರ್ಯ
