ಹಾವೇರಿ: ಮೇ 15 ರ ನಂತರ ಮಾನ ಮಾನನಷ್ಟ ನಿರ್ಧಾರ ಆಗುತ್ತೆ, ಮಾನ ಮಾರ್ಯಾದೆ ಇಲ್ಲದಿರೋರ ಬಗ್ಗೆ ಮಾನನಷ್ಟ ಎಲ್ಲಿಂದ ಎಂದು ಸಿದ್ದರಾಮಯ್ಯ ವಿರುದ್ಧ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ.
ಹಾವೇರಿಯಲ್ಲಿ ಮಾತನಾಡಿದ ಅವರು, ಮೇ 17 ಒಳ್ಳೆಯ ದಿವಸ. ಅವತ್ತೆ ಪ್ರಮಾಣ ವಚನ ಸ್ಪೀಕಾರ ಮಾಡುತ್ತೇನೆ. ಕ್ಯಾಬಿನೇಟ್ ಮೊದಲ ಸಭೆಯಲ್ಲಿ ಸಾಲಮಾನ್ನಾ ಬಗ್ಗೆ ನಿರ್ಧಾರ ಮಾಡಿದ್ದೇನೆ. ಅಲ್ಲದೆ ಜೆಡಿಎಸ್ ಇಪ್ಪತ್ತು ಸೀಟ್ ಗೆಲ್ಲಲ್ಲ. ಅವರ ಬಗ್ಗೆ ನಾನು ಮಾತನಾಡೋದಿಲ್ಲ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಮೋದಿ ವಿರುದ್ಧ 100 ಕೋಟಿ ರೂ. ಮಾನನಷ್ಟ ಕೇಸ್!
Advertisement
ದಿನಕ್ಕೆ ಏಳೆಂಟು ವಿಧಾನಸಭಾ ಕ್ಷೇತ್ರದಲ್ಲಿ ಪ್ರವಾಸ ಮಾಡುತ್ತಿದ್ದು, ಪ್ರತಿ ಕ್ಷೇತ್ರದಲ್ಲಿ ಹತ್ತರಿಂದ ಇಪ್ಪತ್ತು ಸಾವಿರ ಜನ ಸೇರ್ತಿದ್ದಾರೆ. ಬಿಜೆಪಿ ಪ್ರಬಲವಾಗಿದೆ. ಎಲ್ಲರೂ ಒಂದಾಗಿ ಒಟ್ಟಾಗಿ ಕೆಲಸ ಮಾಡ್ತಿದ್ದೇವೆ ಪ್ರಧಾನಿ ಮೋದಿಯವರ ನಿರಂತರ ಪ್ರವಾಸ, ಅಮಿತ್ ಶಾರವರ ವಾಸ್ತವ್ಯ ಅನುಕೂಲವಾಗಿದೆ ಅಂದ್ರು.
Advertisement
ಹಾವೇರಿ ಜಿಲ್ಲೆಯ ಹಿರೇಕೆರೂರು, ಬ್ಯಾಡಗಿ, ಹಾನಗಲ್ ಮತ್ತು ಶಿಗ್ಗಾಂವಿ ಈ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಇಂದು ಯಡಿಯೂರಪ್ಪ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಸಭೆ ನಡೆಸಲಿದ್ದಾರೆ. ಇದನ್ನೂ ಓದಿ: ಭಾಷಣದಲ್ಲಿ ಮಹದಾಯಿ ಪ್ರಸ್ತಾಪ: ಮೋದಿ ವಿರುದ್ಧ ಆಯೋಗಕ್ಕೆ ಕಾಂಗ್ರೆಸ್ ದೂರು