Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಹಾರ್ಮುಜ್ ಜಲಸಂಧಿಯಲ್ಲಿ ಅದೃಶ್ಯವಾಗಿ ಭಾರತಕ್ಕೆ ಬಂತು ಕಚ್ಚಾ ತೈಲ ಹೊತ್ತ ಹಡಗು
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಹಾರ್ಮುಜ್ ಜಲಸಂಧಿಯಲ್ಲಿ ಅದೃಶ್ಯವಾಗಿ ಭಾರತಕ್ಕೆ ಬಂತು ಕಚ್ಚಾ ತೈಲ ಹೊತ್ತ ಹಡಗು

Latest

ಹಾರ್ಮುಜ್ ಜಲಸಂಧಿಯಲ್ಲಿ ಅದೃಶ್ಯವಾಗಿ ಭಾರತಕ್ಕೆ ಬಂತು ಕಚ್ಚಾ ತೈಲ ಹೊತ್ತ ಹಡಗು

Public TV
Last updated: March 12, 2026 12:18 pm
Public TV
Share
2 Min Read
Vessel carrying Saudi crude reaches mumbai India first tanker to arrive from Strait of Hormuz since Iran war Shenlong
SHARE

– ಯುದ್ಧ ಆರಂಭವಾದ ಬಳಿಕ ಭಾರತಕ್ಕೆ ಬಂದ ಮೊದಲ ಟ್ಯಾಂಕರ್‌

ಮುಂಬೈ: ಅಮೆರಿಕ-ಇರಾನ್‌ (USA_IRAN) ನಡುವೆ ನಡೆಯುತ್ತಿರುವ ಯುದ್ಧದ ಮಧ್ಯೆಯೂ ಹಾರ್ಮುಜ್ ಜಲಸಂಧಿಯಿಂದ (Strait of Hormuz) ಕಚ್ಚಾ ತೈಲ ಹೊತ್ತ ಹಡಗು ಭಾರತಕ್ಕೆ ಆಗಮಿಸಿದೆ.

ಸೌದಿ ಅರೇಬಿಯಾದಿಂದ(Saudi Arabia) ಕಚ್ಚಾ ತೈಲವನ್ನು (Crude Oil) ಹೊತ್ತ ಲೈಬೀರಿಯನ್ ಧ್ವಜದ ಟ್ಯಾಂಕರ್ ಮುಂಬೈ ಬಂದರಿಗೆ ಆಗಮಿಸಿದೆ. ಹಾರ್ಮುಜ್ ಜಲಸಂಧಿಯಿಂದ ಭಾರತಕ್ಕೆ (India) ಆಗಮಿಸಿದ ಮೊದಲ ತೈಲ ಟ್ಯಾಂಕರ್‌ ಇದಾಗಿದ್ದು ಬುಧವಾರ ಮಧ್ಯಾಹ್ನ 1 ಗಂಟೆಗೆ ಮುಂಬೈ ಬಂದರನ್ನು ತಲುಪಿದ್ದು ಸಂಜೆ 6:06ಕ್ಕೆ ಹಡಗನ್ನು ನಿಲ್ಲಿಸಲಾಗಿದೆ.

ಲೈಬೀರಿಯಾ ಧ್ವಜದ ಶೆನ್ಲಾಂಗ್ ಸೂಯೆಜ್‌ಮ್ಯಾಕ್ಸ್(Shenlong Suezmax) ಮಾರ್ಚ್ 1 ರಂದು ಸೌದಿ ಬಂದರಾದ ರಾಸ್ ತನುರಾದಿಂದ ಕಚ್ಚಾ ತೈಲವನ್ನು ಹೊತ್ತುಕೊಂಡು ಭಾರತದತ್ತ ಹೊರಟಿತ್ತು. ಈ ಸಂದರ್ಭದಲ್ಲಿ ತನ್ನ ಮೇಲೆ ಅಮೆರಿಕ ಮತ್ತು ಇಸ್ರೇಲ್‌ ಪ್ರಬಲ ದಾಳಿ ನಡೆಸಿದ್ದಕ್ಕೆ ಹಾರ್ಮುಜ್ ಜಲಸಂಧಿಯನ್ನು ಇರಾನ್‌ ಬಂದ್‌ ಮಾಡಿತ್ತು.

ದಿಢೀರ್‌ ಬಂದ್‌ ಆಗಿದ್ದರಿಂದ ಹಡಗು ಸಮುದ್ರದಲ್ಲೇ ನಿಂತಿತ್ತು. ಸಮುದ್ರ ದತ್ತಾಂಶ ಸಂಸ್ಥೆಗಳಾದ ಲಾಯ್ಡ್ಸ್ ಲಿಸ್ಟ್ ಇಂಟೆಲಿಜೆನ್ಸ್ ಮತ್ತು ಟ್ಯಾಂಕರ್‌ಟ್ರಾಕರ್ಸ್ ಪ್ರಕಾರ ಮಾ.8 ರಂದು ಜಲಸಂಧಿಯೊಳಗೆ ಹಡಗಿನ ಕೊನೆಯ ಸಿಗ್ನಲ್ ಸ್ಥಳವನ್ನು ತೋರಿಸಿತ್ತು.  ಇದನ್ನೂ ಓದಿ: US-Iran War| 3 ಷರತ್ತನ್ನು ಒಪ್ಪಿಕೊಳ್ಳಿ, ಯದ್ಧ ಕೊನೆಗೊಳಿಸುತ್ತೇವೆ: ಇರಾನ್‌

 

ಅಪಾಯಕಾರಿಯಾಗಿರುವ ಜಲಸಂಧಿಯೊಳಗೆ ಸಂಚರಿಸುತ್ತಿದ್ದಾಗ ಪತ್ತೆಹಚ್ಚುವುದನ್ನು ತಪ್ಪಿಸಲು ಅದರ ಟ್ರಾನ್ಸ್‌ಪಾಂಡರ್‌ಗಳು ಮತ್ತು ಸ್ವಯಂಚಾಲಿತ ಗುರುತಿನ ವ್ಯವಸ್ಥೆಯನ್ನು ಆಫ್ ಮಾಡುವ ಮೂಲಕ ಅದೃಶ್ಯವಾಗಿತ್ತು. ಈ ವೇಳೆ ಇರಾನ್ ಹಾರ್ಮುಜ್ ಜಲಸಂಧಿ ದಾಟುವ ಚೀನಾ ಹೊರತುಪಡಿಸಿ ಇತರೆ ಹಡಗುಗಳ ಮೇಲೆ ದಾಳಿ ಮಾಡುತ್ತಿತ್ತು ಸಮುದ್ರದಲ್ಲಿ ಸುರಕ್ಷಿತ ಮಾರ್ಗವನ್ನು ತಲುಪಿದ ನಂತರ ಮಾ.9 ರಂದು ಟ್ರ್ಯಾಕಿಂಗ್ ಡೇಟಾಬೇಸ್‌ಗಳಲ್ಲಿ ಮತ್ತೆ ಹಡಗು ಕಾಣಿಸಿಕೊಡಿತು.

1,35,335 ಮೆಟ್ರಿಕ್ ಟನ್ ಕಚ್ಚಾ ತೈಲವನ್ನು ಹೊತ್ತುಕೊಂಡು ಬಂದ ಶೆನ್‌ಲಾಂಗ್ ಹಡಗಿನಿಂದ ಸರಕುಗಳನ್ನು ತೆಗೆಯುವ ಪ್ರಕ್ರಿಯೆ ಆರಂಭವಾಗಿದೆ. ಪೂರ್ವ ಮುಂಬೈನ ಮಹುಲ್ ಸಂಸ್ಕರಣಾಗಾರಗಳಿಗೆ ಬಿಡುಗಡೆ ಮಾಡಲು 36 ಗಂಟೆಗಳು ಬೇಕಾಗುತ್ತದೆ ಎಂದು ಮುಂಬೈ ಬಂದರು ಪ್ರಾಧಿಕಾರ ತಿಳಿಸಿದೆ. ಇದನ್ನೂ ಓದಿ: ಹಡಗು ಸಂಚರಿಸದಂತೆ ಸಮುದ್ರದಲ್ಲಿ ಸ್ಫೋಟಕ| ಇರಾನ್‌ ತಂತ್ರಕ್ಕೆ ಟ್ರಂಪ್‌ ಕೆಂಡಾಮಂಡಲ – ಏನಿದು ನೇವಲ್‌ ಮೈನ್ಸ್‌?

ಅಥೆನ್ಸ್ ಮೂಲದ ಡೈನಕಾಮ್ ಟ್ಯಾಂಕರ್ ಮ್ಯಾನೇಜ್‌ಮೆಂಟ್ ಲಿಮಿಟೆಡ್ ಈ ಹಡಗನ್ನು ನಿರ್ವಹಿಸುತ್ತಿದೆ. ಕ್ಯಾ. ಸುಕ್ಷಾಂತ್ ಸಿಂಗ್ ಸಂಧು ನೇತೃತ್ವದಲ್ಲಿ ಮುಂಬೈಗೆ ಬಂದ ಹಡಗಿನಲ್ಲಿ 29 ಭಾರತೀಯ, ಪಾಕಿಸ್ತಾನಿ ಮತ್ತು ಫಿಲಿಪೈನ್ಸ್‌ ಸಿಬ್ಬಂದಿ ಇದ್ದಾರೆ.

ಯುದ್ಧ ಪ್ರಾರಂಭವಾದಾಗಿನಿಂದ ಇನ್ನೂ 28 ಭಾರತೀಯ ಧ್ವಜವನ್ನು ಹೊಂದಿರುವ ಹಡಗುಗಳು ಜಲಮಾರ್ಗದಲ್ಲಿ ಸಿಲುಕಿಕೊಂಡಿವೆ ಎಂದು ಭಾರತದ ಹಡಗು ನಿರ್ದೇಶನಾಲಯದ ಜನರಲ್ ತಿಳಿಸಿದೆ.

TAGGED:Crude Oilindiasaudi arabiaStrait of Hormuzಅಮೆರಿಕಇರಾನ್ಭಾರತಸೌದಿ ಅರೇಬಿಯಾ
Share This Article
Facebook Whatsapp Whatsapp Telegram

Cinema news

Sanjay Dutt
ಸರ್ಸೆ ಸೆರಗ ಸರ್ಸೆ ಹಾಡಿನ ವಿವಾದ – ಕ್ಷಮೆಯಾಚಿಸಿದ ಸಂಜಯ್ ದತ್, ಬುಡಕಟ್ಟು ಜನಾಂಗದ 50 ಹುಡುಗಿಯರ ಶಿಕ್ಷಣಕ್ಕೆ ಹಣದ ಭರವಸೆ
Bollywood Cinema Latest National Sandalwood Top Stories
ChetanKumar Ahimsa
ರಾಜ್‌ಕುಮಾರ್‌ ಸಮಾಧಿ ಬಗ್ಗೆ ವಿವಾದಾತ್ಮಕ ಪೋಸ್ಟ್‌ – ಅಭಿಮಾನಿಗಳು ಮುತ್ತಿಗೆ ಹಾಕುತ್ತಿದ್ದಂತೆ ಕ್ಷಮೆಯಾಚಿಸಿದ ಚೇತನ್‌
Cinema Karnataka Latest Top Stories
chetan 13 5
ರಾಜ್‌ಕುಮಾರ್‌ ಸಮಾಧಿಗೆ 2.5 ಎಕರೆ ಜಾಗ ನೀಡಿದ್ದು ಸರಿಯೇ? – ನಟ‌ ಚೇತನ್ ವಿರುದ್ಧ ಡಾಕ್ಟರ್ ರಾಜ್‌ ಅಭಿಮಾನಿಗಳಿಂದ ದೂರು
Bengaluru City Cinema Latest Sandalwood Top Stories
Akshay Kumar 1
ನಟ ಅಕ್ಷಯ್ ಕುಮಾರ್ ಅಪ್ರಾಪ್ತ ಪುತ್ರಿಯ ಬೆತ್ತಲೆ ಫೋಟೋಗೆ ಬೇಡಿಕೆಯಿಟ್ಟಿದ್ದ ವ್ಯಕ್ತಿ ಅರೆಸ್ಟ್
Bollywood Cinema Crime Latest Top Stories

You Might Also Like

ramanath rai team mangaluru
Dakshina Kannada

ಬ್ರಹ್ಮರಕೊಟ್ಲು ಟೋಲ್‌ಗೇಟ್‌ ಬಂದ್‌: ನಾಳೆ ಬೃಹತ್‌ ಜನಾಂದೋಲನ ನಡಿಗೆ

Public TV
By Public TV
1 hour ago
pm modi 5
Latest

ಭಯದಲ್ಲಿ ಬದುಕಿದ್ದು ಸಾಕು.. ನಮಗಿನ್ನು ನಂಬಿಕೆ ಬೇಕು: ಬಂಗಾಳ ಜನತೆಗೆ ಮೋದಿ ಪತ್ರ

Public TV
By Public TV
1 hour ago
4 Of Mumbai Family Die Of Suspected Food Poisoning After Eating Biryani Watermelon
Crime

ಬಿರಿಯಾನಿ, ಕಲ್ಲಂಗಡಿ ತಿಂದ ಒಂದೇ ಕುಟುಂಬದ ನಾಲ್ವರು ಸಾವು

Public TV
By Public TV
2 hours ago
Auto
Latest

ಆಟೋ, ಟ್ಯಾಕ್ಸಿ ಚಾಲಕರಿಗೆ ಮರಾಠಿ ಕಡ್ಡಾಯ ಆದೇಶಕ್ಕೆ 6 ತಿಂಗಳ ಬ್ರೇಕ್ ಹಾಕಿದ `ಮಹಾ’ ಸರ್ಕಾರ

Public TV
By Public TV
2 hours ago
H.S Shivashankar
Davanagere

ಶ್ರೀಗಳನ್ನು ಎಳೆದು ಹೊರಗೆ ಹಾಕ್ತಾರಂತೆ, ತಾಕತ್‌ ಇದ್ರೆ ಮುಟ್ಟಿ – ಟ್ರಸ್ಟಿಗಳಿಗೆ ಹೆಚ್.ಎಸ್ ಶಿವಶಂಕರ್ ಎಚ್ಚರಿಕೆ

Public TV
By Public TV
2 hours ago
mangaluru cooker blast case auto driver
Dakshina Kannada

ಉಗ್ರ ಶಾರಿಕ್‌ಗೆ ಜೀವಾವಧಿ ಶಿಕ್ಷೆ ನೀಡಬೇಕಿತ್ತು: ಕುಕ್ಕರ್‌ ಬ್ಲಾಸ್ಟ್‌ನಿಂದ ಗಾಯಗೊಂಡಿದ್ದ ಆಟೋ ಚಾಲಕ ಮಾತು

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?