ತುಮಕೂರು: ಸಾಲಬಾಧೆಯಿಂದಾಗಿ ಒಂದೇ ಕುಟುಂಬದ ಐವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ಗಂಡ-ಹೆಂಡತಿ ಹಾಗೂ ಅವರ ಮೂವರು ಮಕ್ಕಳು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸದಾಶಿವನಗರ ನಿವಾಸಿ ಗರೀಬ್ ಸಾಬ್, ಪತ್ನಿ ಸುಮಯಾ, ಮಗಳು ಹಜೀನಾ, ಗಂಡು ಮಕ್ಕಳಾದ ಮೊಹ್ಮದ್ ಶಬೀರ್, ಮೊಹಮದ್ ಮುನೀರ್ ಆತ್ಮಹತ್ಯೆಗೆ ಶರಣಾದವರು. ಮೃತರು ಶಿರಾ ತಾಲ್ಲೂಕು ಲಕ್ಕನಹಳ್ಳಿಯವರು. ಇದನ್ನೂ ಓದಿ: ಹಣಕ್ಕಾಗಿ ಪಾಕ್ಗೆ ಸೇನಾ ಮಾಹಿತಿ – ಇಬ್ಬರು ಶಂಕಿತರು ಅರೆಸ್ಟ್
ಗರೀಬ್ ಸಾಬ್ ಕಬಾಬ್ ಅಂಗಡಿ ಇಟ್ಟುಕೊಂಡಿದ್ದರು. ಒಂದು ವರ್ಷದಿಂದ ಸದಾಶಿವನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಸಾಲಭಾದೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡೆತ್ನೋಟ್ ಬರೆದಿಟ್ಟು ಐವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸ್ಥಳಕ್ಕೆ ತುಮಕೂರು ಎಸ್ಪಿ ಅಶೋಕ್ ಕೆ.ವಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಅವರು, ನಮಗೆ 7:30 ರ ಸಮಯಕ್ಕೆ ಕರೆ ಬಂದಿತು. ಒಂದೇ ಮನೆಯಲ್ಲಿ ಐವರು ನೇಣು ಹಾಕಿಕೊಂಡಿದ್ದಾರೆ ಎಂಬ ಮಾಹಿತಿ ಬಂತು. ಐದು ನಿಮಿಷಕ್ಕೆ ನಾವು ಸ್ಥಳಕ್ಕೆ ಬಂದಿದ್ವಿ. ಇಬ್ಬರ ದೇಹಗಳು ನೇಣು ಬಿಗಿದ ಸ್ಥಿತಿಯಲ್ಲಿ ಇದ್ದವು. ಮೂವರು ಮಕ್ಕಳ ಮೃತದೇಹ ಹಾಸಿಗೆಯಲ್ಲಿದ್ದವು. ಅವರ ಕತ್ತಿನ ಮೇಲೆ ಕೆಲವು ಮಾರ್ಕ್ಗಳಿವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಫಸಲಿಗೆ ಬಂದ 70ಕ್ಕೂ ಹೆಚ್ಚು ತೆಂಗಿನ ಮರಗಳನ್ನು ಕಡಿದ ಕಿಡಿಗೇಡಿಗಳು – ಕಣ್ಣೀರಿಟ್ಟ ರೈತ
ಸಾಯುವ ಮುನ್ನ ಸಂಬಂಧಿಕರಿಗೆ ವಿಡಿಯೋ ಮೆಸೇಜ್ ಕಳುಹಿಸಿದ್ದಾರೆ. ಅದರಲ್ಲಿ ಏನು ಮಾಹಿತಿಯಿದೆ ಎಂಬುದನ್ನು ಪರಿಶೀಲನೆ ನಡೆಸುತ್ತೇವೆ. ವಿಡಿಯೋ ಆಧಾರ ಹಾಗೂ ದೂರು ಆಧರಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.