ಗಾಂಧೀನಗರ: ಗುಜರಾತ್‌ನ (Gujarat) ಅಹಮದಾಬಾದ್ (Ahamadabad) ಜಿಲ್ಲೆಯ ನಿರ್ಮಾಣ ಹಂತದ ಸಬರಮತಿ ಬುಲೆಟ್ ರೈಲು ನಿಲ್ದಾಣದಲ್ಲಿ ಬೆಂಕಿ ಅವಘಡ ಸಂಭವಿಸಿದೆ.
508 ಕಿ.ಮೀ ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆಯ ಭಾಗವಾಗಿರುವ ಸಬರಮತಿ ಬುಲೆಟ್ ರೈಲು ನಿಲ್ದಾಣದಲ್ಲಿ ಶನಿವಾರ ಬೆಳಿಗ್ಗೆ 6:30ರ ಸುಮಾರಿಗೆ ಈ ಅವಘಡ ಉಂಟಾಗಿದೆ. ಅವಘಡದಲ್ಲಿ ಯಾವುದೇ ರೀತಿಯ ಪ್ರಾಣಾಪಾಯ ಸಂಭವಿಸಿಲ್ಲ. ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದು, ಒಟ್ಟು 13 ಅಗ್ನಿಶಾಮಕ ದಳದ ವಾಹನಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದವು.ಇದನ್ನೂ ಓದಿ: Delhi Election Results | ಬಜೆಟ್ ಡೇ ಸೂಪರ್ ಓವರ್‌ನಲ್ಲಿ ಸೀತಾರಾಮನ್ ʻಸಿಕ್ಸ್ʼ – ಬಿಜೆಪಿ ಚಾಂಪಿಯನ್!
ಈ ಕುರಿತು ನ್ಯಾಷನಲ್ ಹೈ-ಸ್ಪೀಡ್ ಟ್ರೈನ್ ಕಾರ್ಪೊರೇಷನ್ ಲಿಮಿಟೆಡ್ ಹೇಳಿಕೆ ಬಿಡುಗಡೆ ಮಾಡಿದ್ದು, ರೈಲು ನಿಲ್ದಾಣದ ಛಾವಣಿಯೊಂದರಲ್ಲಿ ಶಟರಿಂಗ್ ಕೆಲಸದಿಂದ ಬಂದ ವೆಲ್ಡಿಂಗ್ ಕಿಡಿಯಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ಉಲ್ಲೇಖಿಸಿದೆ.
ಸದ್ಯ ಸ್ಥಳದಲ್ಲಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಅವಘಡಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ.
ಈ ಬುಲೆಟ್ ರೈಲು ಯೋಜನೆಯಲ್ಲಿ ಗುಜರಾತ್ (352 ಕಿ.ಮೀ) ಮತ್ತು ಮಹಾರಾಷ್ಟ್ರ (156 ಕಿ.ಮೀ) ರಾಜ್ಯಗಳ ಜೊತೆಗೆ ಮುಂಬೈ, ಥಾಣೆ, ವಿರಾರ್, ಬೋಯಿಸರ್, ವಾಪಿ, ಬಿಲಿಮೋರಾ, ಸೂರತ್, ಭರೂಚ್, ವಡೋದರಾ, ಆನಂದ್/ನಾಡಿಯಾಡ್, ಅಹಮದಾಬಾದ್ ಮತ್ತು ಸಬರಮತಿಯಲ್ಲಿ ಒಟ್ಟು 12 ನಿಲ್ದಾಣಗಳನ್ನು ಒಳಗೊಂಡಿದೆ.ಇದನ್ನೂ ಓದಿ: ಮೆಟ್ರೋ ಪ್ರಯಾಣಿಕರಿಗೆ ಶಾಕ್- ಮೆಟ್ರೋ ದರ 46% ಏರಿಕೆ, ನಾಳೆಯಿಂದಲೇ ಜಾರಿ ಸಾಧ್ಯತೆ