ಬೆಂಗಳೂರು: ಕಲ್ಲು ಕ್ವಾರಿ ಮತ್ತು ಕ್ರಷರ್ ಉದ್ಯಮದ ಮೇಲೆ ರಾಜ್ಯ ಸರ್ಕಾರ ಗದಾ ಪ್ರಹಾರ ಮಾಡುತ್ತಿದ್ದು, ಅನಗತ್ಯ ದಂಡ, ಅವೈಜ್ಞಾನಿಕ ತೀರ್ಮಾನಗಳನ್ನು ಸರ್ಕಾರ ಹಿಂಪಡೆದು ಪಾರದರ್ಶನಕ ನಿಯಮಗಳನ್ನು ಜಾರಿಗೆ ತರಬೇಕು ಎಂದು ಫೆಡರೇಷನ್ ಸ್ಟೋನ್ ಅಂಡ್ ಕ್ರಷರ್ ಅಸೋಸಿಯೇಷನ್ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಸೋಸಿಯೇಷನ್ ಅಧ್ಯಕ್ಷ ರವೀಂದ್ರ ಶೆಟ್ಟಿ, ಕಲ್ಲು ಕ್ವಾರಿ ಮತ್ತು ಕ್ರಷರ್ ಉದ್ಯಮದಲ್ಲಿ ಸರ್ಕಾರದ ನಿರ್ಧಾರಗಳಿಂದಾಗಿ ಅರಾಜಕತೆ ಸೃಷ್ಟಿಯಾಗಿದೆ. ಇಲ್ಲಿ ಪಾರದರ್ಶಕ ಕಾನೂನುಗಳು, ಸೂಕ್ತ ನಿಯಮಗಳಿಲ್ಲ. ಕಳೆದ ಏಳು ವರ್ಷಗಳಿಂದ ಅನಗತ್ಯವಾಗಿ ಲೆಕ್ಕ ಪರಿಶೋಧನೆ ಮಾಡಲಾಗುತ್ತಿದೆ. ಕಾನೂನು ಬದ್ಧ ಗಣಿಗಾರಿಕೆ ನಡೆಸಲು ತೊಡಕಾಗಿದ್ದು, ಇನ್ಸ್‍ಪೆಕ್ಟರ್ ರಾಜ್ ವ್ಯವಸ್ಥೆ ಜಾರಿಗೆ ಬಂದಿದೆ. ಕಲ್ಲು ಕ್ವಾರಿ ಮತ್ತು ಕ್ರಷರ್ ಉದ್ಯಮವನ್ನು ಗುರಿಯಾಗಿಸಿಕೊಂಡು ಅನಗತ್ಯವಾಗಿ ಕಿರುಕುಳ ನೀಡಲಾಗುತ್ತಿದೆ ಎಂದು ದೂರಿದರು.
Advertisement
Advertisement
ನಮ್ಮ ನ್ಯಾಯಯುತ ಬೇಡಿಕೆಗಳು ಬೇಡಿಕೆಗಳಾಗಿಯೇ ಉಳಿದಿವೆ. ಉದ್ಯಮದ ನಿಯಮಗಳು, ಕಾನೂನುಗಳನ್ನು ಬದಲಾವಣೆ ಮಾಡುವ, ತಿದ್ದುಪಡಿ ಮಾಡಿ ಔದ್ಯಮಿಕ ವಲಯ ಕಾನೂನುಬದ್ಧವಾಗಿ ಬದಕುವ ಹಕ್ಕನ್ನು ಕಸಿದುಕೊಂಡಿದೆ. ಘನತೆ ಗೌರವದಿಂದ ಬದಕುವ ನಮ್ಮ ಹಕ್ಕನ್ನು ಸರ್ಕಾರ ಕಸಿಯುತ್ತಿದೆ. ನಮಗೆ ಅಕ್ರಮ ಗಣಿಗಾರಿಕೆ ಬೇಡ. ಕಾನೂನು ಬದ್ಧವಾಗಿ ಉದ್ಯಮದಲ್ಲಿ ತೊಡಗಿಕೊಂಡಿದ್ದರೂ ಸಹ ನಮಗೆ ಅನಗತ್ಯವಾಗಿ ನೋಟಿಸ್ ನೀಡಿ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದರು.
Advertisement
ನಮ್ಮ ಕಾನೂನು ಬದ್ಧ ಚಟುವಟಿಕೆಗಳನ್ನು ಅಕ್ರಮ ಗಣಿಗಾರಿಕೆ ಎಂದು ಬಿಂಬಿಸುವ ಪ್ರಯತ್ನಗಳಾಗುತ್ತಿವೆ. ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ನೋಡಿಕೊಳ್ಳಲು ಸಮಗ್ರ ಕಾನೂನು ತಿದ್ದುಪಡಿ ತರಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
Advertisement
ಸಂಘದ ಗೌರವಾಧ್ಯಕ್ಷ ಡಿ. ಸಿದ್ದರಾಜು ಮಾತನಾಡಿ, ಸರ್ಕಾರದ ಹಾಲಿ ಉಪ ಖನಿಜ ನಿಯಮಗಳು ಅಸ್ಪಷ್ಟವಾಗಿವೆ. ಅವೈಜ್ಞಾನಿಕ ಮತ್ತು ಲೋಪಗಳಿಂದ ಕೂಡಿದ್ದು, ನಿಯಮಾನುಸಾರ ಗಣಿಗುತ್ತಿಗೆ ಪಡೆದು ಸಕ್ರಮ ಗಣಿ ಕಾರ್ಯ ನಡೆಸುತ್ತಿರುವ ಗಣಿ ಗುತ್ತಿಗೆದಾರನ್ನು ಗುರಿಯಾಗಿಸಿಕೊಂಡು ನಮ್ಮ ಮೇಲೆ ಐದು ಪಟ್ಟು ದಂಡ ವಿಧಿಸಲಾಗುತ್ತಿದೆ. ಜತೆಗೆ ಅನಧಿಕೃತ ಗಣಿಗಾರಿಕೆಯ ಆರೋಪ , ಮುಂತಾದ ಎಲ್ಲ ರೀತಿಯ ಒತ್ತಡ ಕ್ರಮಗಳನ್ನು ಅನುಸರಿಸಲಾಗುತ್ತಿದೆ ಎಂದರು. ಇದನ್ನೂ ಓದಿ: ಹಾಂಕಾಂಗ್‌ನಲ್ಲಿ 2000 ಪ್ರಾಣಿಗಳನ್ನು ಕೊಲ್ಲಲು ಆದೇಶ!
ಸರ್ಕಾರ ಎರಡು ಕಡೆಗಳಲ್ಲಿ ರಾಜಧನ ಪಡೆಯುತ್ತಿದೆ. ಒಂದು ಕಡೆ ರಾಯಲ್ಟಿ ಸಂಗ್ರಹಿಸುವ ವ್ಯವಸ್ಥೆ ಜಾರಿಗೆ ಬರಬೇಕು. ಸರ್ಕಾರ ಒಂದು ಕಡೆ ಪರಿಸರ ಸಂರಕ್ಷಣೆ ಮಾಡಿ ಎಂದು ಹೇಳುತ್ತಿದೆ. ಮತ್ತೊಂದೆಡೆ ಮರಳು ಗಣಿಗಾರಿಕೆಗೆ ಆದ್ಯತೆ ನೀಡುವುದಾಗಿ ಸರ್ಕಾರ ಹೇಳುತ್ತಿದೆ. ಮರಳು ಮಾರಾಟದಿಂದ ಅಂತರ್ಜಲ ಬರಿದಾಗುತ್ತದೆ ಎಂದರು. ಇದನ್ನೂ ಓದಿ: ಮಸೀದಿಯನ್ನು ಒಡೆದು ಹಾಕಿ ಎಂದ ಕಾಳಿ ಸ್ವಾಮೀಜಿಗೆ ಷರತ್ತು ಬದ್ಧ ಜಾಮೀನು
ಉಪಾಧ್ಯಕ್ಷ ಕಿರಣ್ ಜೈನ್ ಮಾತನಾಡಿ, ಕ್ರಷರ್ ಘಟಟಕಗಳಿಗೆ ಸಂಬಂಧಿಸದಂತೆ 2020ರಲ್ಲಿ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿ ಕ್ರಷರ್ ಪರವಾನಗಿ ಅವಧಿಯನ್ನು 20 ವರ್ಷಗಳಿಗೆ ವಿಸ್ತರಿಸಿ ಆದೇಶಿಸಿದ ಕ್ರಮವನ್ನು ರಾಜ್ಯಸಂಘ ಸ್ವಾಗತಿಸಿ ಅಭಿನಂದಿಸುತ್ತದೆ. ಬ್ಲಾಸ್ಟಿಂಗ್ ಕಾರ್ಯಾಚರಣೆಗಾಗಿ ಅನುಮತಿ ನೀಡುವಲ್ಲಿ ಉಂಟಾಗಿರುವ ವಿಳಂಬದಿಂದಾಗಿ ಕಟ್ಟಡಕಲ್ಲು ಗಣಿಗಾರಿಕೆಯನ್ನು ಹಲವೆಡೆ ಸ್ಥಗಿತಗೊಳಿಸಲಾಗುತ್ತಿದೆ. ಆದ್ದರಿಂದ ಕಟ್ಟಡಕಲ್ಲು ಉತ್ಪಾದನೆ ಮತ್ತು ಕಾಮಗಾರಿಗಳಿಗೆ ಸರಬರಾಜು ಕುಂಠಿತಗೊಳ್ಳುವ ಸಾಧ್ಯತೆಗಳು ಹೆಚ್ಚಾಗುತ್ತಿವೆ ಎಂದು ಹೇಳಿದರು. ಇದನ್ನೂ ಓದಿ: ಗಾಂಜಾ ಮಾರುತ್ತಿದ್ದ ಪೊಲೀಸರನ್ನು ಅರೆಸ್ಟ್ ಮಾಡಿದ್ದ ಇನ್‌ಸ್ಪೆಕ್ಟರ್ ಸಸ್ಪೆಂಡ್
ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಓನರ್ಸ್ ಆಸೋಸೀಯೇಷನ್ ವತಿಯಿಂದ ನಡೆದ ಸಭೆಯಲ್ಲಿ ಸಂಘದ ಅಧ್ಯಕ್ಷ ರವೀಂದ್ರ ಶೆಟ್ಟಿ, ಗೌರವಾಧ್ಯಕ್ಷ ಸಿದ್ದರಾಜು, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ್, ಉಪಾಧ್ಯಕ್ಷ ಬಿ.ಆರ್. ಕಿರಣ್ ಜೈನ್, ಸಂಘಟನಾ ಕಾರ್ಯದರ್ಶಿ ನಾರಾಯಣಬಾಬು ಉಪಸ್ಥಿತರಿದ್ದರು.