ಫ್ಯಾಷನ್ (Fashion) ಲೋಕದಲ್ಲೀಗ ಹೊಸ ಟ್ರೆಂಡ್ ಶುರುವಾಗಿದೆ. ಯುವಕರು ಹುಡ್ಗೀರಿಗಿಂತ ನಾವೇನು ಕಮ್ಮಿಯಿಲ್ಲ ಅನ್ನುವಂತೆ ಕಲರ್ಫುಲ್ ಡ್ರೆಸ್ಗಳ ಮೊರೆ ಹೋಗ್ತಿದ್ದಾರೆ. ತಮ್ಮ ನೆಚ್ಚಿನ ಸಂಗಾತಿ ಅಥವಾ ಗೆಳತಿಯನ್ನ (Girl Friend) ಇಂಪ್ರೆಸ್ ಮಾಡೋಕೆ ಪ್ರತಿದಿನ ಹೊಸ ಹೊಸ ತಂತ್ರ ಹೆಣೆಯುತ್ತಿದ್ದಾರೆ.
ಹಾಗಿದ್ರೆ ನಿಮ್ಮ ನೆಚ್ಚಿನ ಗೆಳತಿಯನ್ನ ಇಂಪ್ರೆಸ್ ಮಾಡೋಕೆ ಅಥವಾ ಉತ್ತಮ ಲೈಫ್ ಪಾಟ್ನರ್ ಸೆಲೆಕ್ಟ್ ಮಾಡೋಕೆ ಏನೆಲ್ಲಾ ಮಾಡ್ಬೇಕಾಗುತ್ತೆ? ಅದಕ್ಕೆ ಡ್ರೆಸ್ಸಿಂಗ್ ಸೆನ್ಸ್, ಹೇರ್ಸ್ಟೈಲ್ (Hair Style), ಬಾಡಿ ಫಿಟ್ನೆಸ್ (Fitness) ಮತ್ತೆ ಮುಖದ ಅಂದ ಹೆಚ್ಚಿಸುವ ಕನ್ನಡಕ ಎಲ್ಲವೂ ನಿಮಗೆ ಹೇಗೆ ಹೆಲ್ಪ್ ಆಗಿರುತ್ತೆ ಅನ್ನೋದನ್ನ ನೋಡೋಣ..
ಹೇರ್ ಸ್ಟೈಲ್ (Hair Style): ಅದೇಷ್ಟೋ ಹುಡ್ಗಿಯರಿಗೆ ಹುಡುಗರು ಗಡ್ಡ ಬಿಟ್ಟರೆ ತುಂಬಾ ಇಷ್ಟ ಆಗ್ತಾರೆ. ಹಾಗಂತ ಹುಚ್ಚರ ಹಾಗೆ ಗಡ್ಡ ಬಿಡ್ಬೇಡಿ ನೀಟಾಗಿ ಶೇಪ್ ಮಾಡಿಸಿ, ನೋಡಿದ್ರೆ ಆಕರ್ಷಿತರಾಗ್ಬೇಕು. ಇನ್ನು ಸ್ವಲ್ಪ ಹುಡುಗಿಯರಿಗೆ ಉದ್ದ ಕೂದಲು ಬಿಡೋ ಹುಡುಗರೇ ಇಷ್ಟ ಆಗ್ತಾರೆ. ಆದರೆ ಡ್ಯಾಂಡ್ರಫ್ ಆಗದೆ ಇರೋ ತರ ನೋಡ್ಕೋಳ್ಳಿ. ಇದನ್ನೂ ಓದಿ: ಹಳೆಯ ಆಭರಣಗಳಿಗೆ ಹೊಸ ಹುರುಪು – ಟ್ರೆಂಡಿಯಾಗಿ ಧರಿಸುವ ಬೆಳ್ಳಿ ಒಡವೆಗಳ ಬಗ್ಗೆ ಇಲ್ಲಿದೆ ಸಿಂಪಲ್ ಟಿಪ್ಸ್
ಡ್ರೆಸ್ಸಿಂಗ್ ಸೆನ್ಸ್: ಹುಡ್ಗೀರನ್ನ ಇಂಪ್ರೆಸ್ ಮಾಡ್ಬೇಕು ಅಂದ್ರೆ ಡ್ರೆಸ್ಸಿಂಗ್ ಸೆನ್ಸ್ ತುಂಬಾನೇ ಮುಖ್ಯ. ಆಕಾರ ವಿಕಾರವಾಗಿ ಅವಳ ಮುಂದೆ ಭಿಕ್ಷುಕನ ರೀತಿ ನಿಂತಂತೆ ಆಗಬಾರದು. ನಿಮ್ಮ ಡ್ರೆಸ್ಸಿಂಗ್ ಸೆನ್ಸ್ ಆಕರ್ಷಕವಾಗಿದ್ರೆ ಒಳ್ಳೆಯದು. ಕೆಲ ಹುಡ್ಗೀರು ನಿಮ್ಮ ಡ್ರೆಸ್ಸಿಂಗ್ ಸೆನ್ಸ್ ನೋಡೀನೆ ನಿಮ್ಮ ಯೋಗ್ಯತೆ ಅಳೆದುಬಿಡ್ತಾರೆ. ಇದನ್ನೂ ಓದಿ: ಫ್ರೆಶ್ ಲುಕ್ ನೀಡುವ ವೆಡ್ಡಿಂಗ್ ಸೂಟ್ಸ್ – ಏನಿದೆ ವಿಶೇಷ?
ಬಾಡಿ ಫಿಟ್ನೆಸ್: ಸಿಕ್ಸ್ ಪ್ಯಾಕ್ ಇಲ್ಲಾ ಅಂದ್ರೂ ಚಿಂತೆ ಇಲ್ಲ ಆದ್ರೆ ಡೊಳ್ಳು ಹೊಟ್ಟೆ ಮಾತ್ರ ಇರ್ಬಾದು. ಯಾಕಂದ್ರೆ ಹುಡ್ಗೀರ ಮೊದಲ ಎಕ್ಸ್ಪೆಕ್ಟೇಷನ್ ನೀವು ಫಿಟ್ ಆಗಿದ್ದೀರಾ ಅನ್ನೋದು. ಆದ್ದರಿಂದ ವ್ಯಾಯಾಮ ಮಾಡೋದನ್ನ ರೂಢಿಸಿಕೊಳ್ಳಿ. ಸ್ವಿಮ್ಮಿಂಗ್ ಕಲಿತಿದ್ದರೆ ತುಂಬಾ ಒಳ್ಳೆಯದು. ನೀರಿನ ಸ್ಥಳದಲ್ಲಿ ಹುಡುಗಿ ಅಪಾಯಕ್ಕೆ ಸಿಲುಕಿದಾಗ ಕಾಪಾಡಬಹುದು.
ತುಂಬಾ ಜಂಟಲ್ ಮ್ಯಾನ್ ಆಗ್ಬೇಡಿ: ಕೆಲವು ಹುಡ್ಗೀರಿಗೆ ಫಾರ್ಮಲ್ಸ್ ಡ್ರೆಸ್ನಲ್ಲಿದ್ದರೆ ಇಷ್ಟ ಆಗಲ್ಲ. ಆಗಾಗ್ಗೆ ಕಲರ್ಫುಲ್ ಆಗಿ ಬದಲಾಗುತ್ತಿದೆ. ಜೊತೆ – ಜೊತೆಗೆ ಮಿತಿ ಮೀರದಂತೆ ತರಲೆ ಮಾಡುವ ಕಲೆ ಇರಲಿ. ಯಾವಾಗಲೂ ವಿಚಾರಗಳನ್ನೇ ಮಾತಾಡ್ತಿದ್ದರೆ ನೀವು ಪುಸ್ತಕದ ಬದನೆಕಾಯಿ ಅನ್ನೋದು ಗೊತ್ತಾಗುತ್ತೆ.
ಪ್ರಿಪರೇಶನ್ ಇರಲಿ: ಹುಡ್ಗಿ ಮೆಚ್ಚಿಕೊಳ್ಳಬೇಕಂತಾ ಬ್ರಾಂಡೆಡ್ ಬಟ್ಟೆ ಹಾಕೊಂಡು ಟ್ಯಾಗ್ಸ್ ತೋರಿಸಿ ಇಂಪ್ರೇಸ್ ಮಾಡೋಕೆ ಹೋದ್ರೆ ಯಡವಟ್ಟಾಗುತ್ತೆ. ಸಿಂಪಲ್ ಅಂಡ್ ಸ್ಮಾರ್ಟ್ ಆಗಿರುವ ಡ್ರೆಸ್ ಧರಿಸಿ ಆಕೆಯ ಜತೆ ಕಂಫರ್ಟ್ ಆಗಿ ಮಾತನಾಡಿ, ಅವಳು ನಿಮ್ಮ ಪ್ರತಿ ಮಾತನ್ನು ಇಷ್ಟಪಟ್ಟು ನಗುತ್ತಾ ಕೇಳುವಂತೆ ನೋಡಿಕೊಳ್ಳಿ. ಜೊತೆಗೊಂದು ಕಂಫರ್ಟ್ ಬೈಕ್ ಇರಲಿ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k