ಕೌಟುಂಬಿಕ ಕಲಹ ಒಂದೇ ಕುಟುಂಬದ ನಾಲ್ವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ

Public TV
1 Min Read
HBL SUICIDE ATTEMPT

ಹುಬ್ಬಳ್ಳಿ: ಕೌಟುಂಬಿಕ ಕಲಹದಿಂದ ಮನನೊಂದು ಒಂದೇ ಕುಟುಂಬದ ನಾಲ್ವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಸಿದ ಘಟನೆ ಹುಬ್ಬಳ್ಳಿ ತಾಲ್ಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ನಡೆದಿದೆ.

ಸೋಮಣ್ಣ ನವಲಗುಂದ (44), ಶಾಂತವ್ವ(38), ಶಂಕರ(15) ಹಾಗೂ ಸವಿತಾ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದವರು. ಕಳೆದ ಎರಡು ದಿನಗಳಿಂದ ಸಂಬಂಧಿಕರ ಮಧ್ಯೆ ಆಸ್ತಿಗಾಗಿ ಜಗಳವಾಗಿದ್ದು, ಹೀಗಾಗಿ ಮನನೊಂದು ಇಂದು ಮುಂಜಾನೆ ತಮ್ಮ ಮನೆಯಲ್ಲಿ ಕುಟಂಬ ಸಂಮೇತ ಎಲ್ಲರೂ ಆತ್ಮಹತ್ಯೆ ಯತ್ನಿದ್ದಾರೆ.

ಕುಟುಂಬದ ಸದಸ್ಯರೆಲ್ಲರೂ ವಿಷ ಸೇವಿಸಿ ನರಳಾಡುತ್ತಿದ್ದ ವಿಷಯ ತಿಳಿದ ಪಕ್ಕದ ಮನೆಯವರು ಅಸ್ವಸ್ಥರರನ್ನ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಶಾಂತವ್ವ, ಸವಿತಾ ಆರೋಗ್ಯದಲ್ಲಿ ತೀವ್ರ ಏರುಪೇರಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆ ಕುರಿತು ಹುಬ್ಬಳ್ಳಿಯ ಗ್ರಾಮೀಣ ಪೊಲೀಸ್ ಪ್ರಕರಣ ದಾಖಲಾಗಿದೆ.

HBL SUICIDE ATTEMPT 3

HBL SUICIDE ATTEMPT 2

HBL SUICIDE aTTEMPT

Share This Article