ಸಾಮಾನ್ಯವಾಗಿ ಟಿಕ್ಕಾ ಎಂಬ ಪದ ಚಿಕನ್, ಮೀನು ಅಥವಾ ಪನೀರ್ ಅನ್ನು ನೆನಪಿಸುತ್ತದೆ. ಆದರೆ ಇಂದು ನಾವು ಹೊಸ ರೀತಿಯ ಟಿಕ್ಕಾ ರೆಸಿಪಿಯನ್ನು ಹೇಳಿಕೊಡಲಿದ್ದೇವೆ. ಹಿರಿಯರು, ಮಕ್ಕಳು ಎಂಬ ವಯಸ್ಸಿನ ಭೇದವಿಲ್ಲದೇ ಪ್ರತಿಯೊಬ್ಬರೂ ಮೊಟ್ಟೆಯನ್ನು ಇಷ್ಟಪಡುತ್ತಾರೆ. ಅವರಿಗಾಗಿ ಈ ಅದ್ಭುತವಾದ ರೆಸಿಪಿ ಎಗ್ ಟಿಕ್ಕಾ ಕಬಾಬ್.
ಬೇಕಾಗುವ ಪದಾರ್ಥಗಳು:
ಬೇಯಿಸಿದ ಮೊಟ್ಟೆ – 4
ಕತ್ತರಿಸಿದ ಈರುಳ್ಳಿ – ಅರ್ಧ
ಕ್ಯಾಪ್ಸಿಕಮ್ – ಅರ್ಧ ಕಪ್
ಬೆಣ್ಣೆ – 2 ಟೀಸ್ಪೂನ್
ಚಾಟ್ ಮಸಾಲಾ – 2 ಟೀಸ್ಪೂನ್
ಮ್ಯಾರಿನೇಷನ್ಗೆ:
ಮೊಸರು – ಅರ್ಧ ಕಪ್
ಶುಂಠಿ ಬೆಳ್ಳುಳ್ಳಿ ಪೇಸ್ಟ್ – ಒಂದೂವರೆ ಟೀಸ್ಪೂನ್
ಜೀರಿಗೆ ಪುಡಿ – 1 ಟೀಸ್ಪೂನ್
ಕೊತ್ತಂಬರಿ ಪುಡಿ – 1 ಟೀಸ್ಪೂನ್
ಮೆಣಸಿನ ಪುಡಿ – ಮುಕ್ಕಾಲು ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಕರಿ ಮೆಣಸಿನಪುಡಿ – 1 ಟೀಸ್ಪೂನ್
ನಿಂಬೆ ರಸ – 1 ಟೀಸ್ಪೂನ್
ತಂದೂರಿ ಮಸಾಲಾ – ಮುಕ್ಕಾಲು ಟೀಸ್ಪೂನ್
ಅರಿಶಿನ ಪುಡಿ – ಚಿಟಿಕೆ
ಬೆಂಗಾಲ್ ಗ್ರಾಂ ಹಿಟ್ಟು – 2 ಟೀಸ್ಪೂನ್
ಎಣ್ಣೆ – 1 ಟೀಸ್ಪೂನ್ ಇದನ್ನೂ ಓದಿ: ಟೇಸ್ಟಿ ಟೇಸ್ಟಿ ಸಿಂಗಾಪುರ್ ನೂಡಲ್ಸ್ ರೆಸಿಪಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಬೇಯಿಸಿದ ಮೊಟ್ಟೆಗಳನ್ನು 2 ಭಾಗಗಳಾಗಿ ಕತ್ತರಿಸಿ.
* ಒಂದು ಬೌಲ್ನಲ್ಲಿ ಈರುಳ್ಳಿ, ಕ್ಯಾಪ್ಸಿಕಮ್, ಮೊಸರು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಜೀರಿಗೆ ಪುಡಿ, ಕೊತ್ತಂಬರಿ ಪುಡಿ, ಮೆಣಸಿನ ಪುಡಿ, ಉಪ್ಪು, ಕರಿ ಮೆಣಸಿನಪುಡಿ, ನಿಂಬೆ ರಸ, ತಂದೂರಿ ಮಸಾಲಾ, ಅರಿಶಿನ ಪುಡಿ ಹಾಗೂ ಬೆಂಗಾಲ್ ಗ್ರಾಂ ಹಿಟ್ಟನ್ನು ಹಾಕಿ ಮಿಶ್ರಣ ಮಾಡಿ.
* ಅದಕ್ಕೆ ಕತ್ತರಿಸಿಟ್ಟಿದ್ದ ಮೊಟ್ಟೆಗಳನ್ನು ಸೇರಿಸಿ, ಮಿಶ್ರಣ ಮಾಡಿ, ಸುಮಾರು 1 ಗಂಟೆಗಳ ಕಾಲ ಮ್ಯಾರಿನೇಟ್ ಆಗಲು ಫ್ರಿಜ್ನಲ್ಲಿ ಇಡಿ.
* ಬಳಿಕ ಪ್ಯಾನ್ನಲ್ಲಿ ಎಣ್ಣೆಯನ್ನು ಬಿಸಿ ಮಾಡಿ, ಮ್ಯಾರಿನೇಟ್ ಮಾಡಿದ ಮೊಟ್ಟೆಯ ತುಂಡುಗಳನ್ನು ಅದರಲ್ಲಿ ಇರಿಸಿ.
* ಪ್ರತಿ 1-2 ನಿಮಿಷಗಳಿಗೊಮ್ಮೆ ಮೊಟ್ಟೆಗಳ ಮೇಲೆ ಬೆಣ್ಣೆಯಿಂದ ಗ್ರೀಸ್ ಮಾಡಿ ಮ್ಯಾರಿನೇಟ್ ಒಣ ಹಾಗೂ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಹುರಿದುಕೊಳ್ಳಿ.
* ಇದೀಗ ಎಗ್ ಟಿಕ್ಕಾ ಕಬಾಬ್ ತಯಾರಾಗಿದ್ದು, ಇದನ್ನು ಚಾಟ್ ಮಸಾಲಾ, ತಾಜಾ ನಿಂಬೆ ರಸ ಹಾಗೂ ನಿಮ್ಮಿಷ್ಟದ ಸಾಸ್ನೊಂದಿಗೆ ಬಡಿಸಿ, ಬಿಸಿಬಿಸಿಯಾಗಿ ಸವಿಯಿರಿ. ಇದನ್ನೂ ಓದಿ: ಟ್ರೈ ಮಾಡಿ ಟೇಸ್ಟಿ ಫಿಶ್ ಪಕೋಡಾ