CricketLatestMain PostSports

23ನೇ ಓವರ್‌ನಲ್ಲಿ ಪಂದ್ಯ ಸ್ಥಗಿತ – ಲಾರ್ಡ್ಸ್ ಟೆಸ್ಟ್‌ನಲ್ಲಿ ವಾರ್ನ್‍ಗೆ ವಿಶೇಷ ಗೌರವ

Advertisements

ಲಾರ್ಡ್ಸ್: ಆಸ್ಟ್ರೇಲಿಯಾದ ದಿವಂಗತ ಲೆಗ್ ಸ್ಪಿನ್ನರ್ ಶೇನ್ ವಾರ್ನ್ ಅವರಿಗೆ ಗೌರವ ಸಲ್ಲಿಸಲು ಪ್ರಸ್ತುತ ಲಾರ್ಡ್ಸ್ ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಅನ್ನು ಮೊದಲ ಇನ್ನಿಂಗ್ಸ್‌ನ 23ನೇ ಓವರ್‌ನ ನಂತರ ನಿಲ್ಲಿಸಲಾಯಿತು.

23ನೇ ಓವರ್‌ನ ನಂತರದಲ್ಲಿ ಮೈದಾನದ ಸ್ಕ್ರೀನ್‍ವೊಂದರ ಮೇಲೆ ಶೇನ್ ವಾರ್ನ್ ಅವರ ಫೋಟೋವನ್ನು ಹಾಕಲಾಯಿತು. ಫೋಟೋದಲ್ಲಿ ಅವರು ರೌಂಡ್ ಕ್ಯಾಪ್‍ವೊಂದನ್ನು ಎಡಗೈನಲ್ಲಿ ಹಿಡಿದು ನಿಂತಿದ್ದು, ಶೇನ್ ವಾರ್ನ್ ಅವರೇ ನಿಮ್ಮನ್ನು ಇಲ್ಲಿ ನೇರದಿರುವ ಪ್ರತಿಯೊಬ್ಬರು ನೆನಪಿಕೊಳ್ಳುತ್ತಿದ್ದಾರೆ ಎಂದು ಶೀರ್ಷಿಕೆ ನೀಡಿದ್ದಾರೆ.

ಶೇನ್ ವಾರ್ನ್ ಅವರು ತಮ್ಮ ಆಟದ ದಿನಗಳಲ್ಲಿ 23 ಸಂಖ್ಯೆಯ ಜೆರ್ಸಿಯೊಂದನ್ನು ಧರಿಸುತ್ತಿದ್ದ ಹಿನ್ನೆಲೆ ಆಟಗಾರರು 23ನೇ ಓವರ್ ವೇಳೆ ಆಟ ನಿಲ್ಲಿಸಿ ಗೌರವ ಸೂಚಿಸಿದರು. ಪ್ರೇಕ್ಷಕರು ಕೂಡ ದಂತಕಥೆಗೆ 23 ಸೆಕೆಂಡುಗಳ ಕಾಲ ಎದ್ದು ನಿಂತು ಚಪ್ಪಾಳೆಯೊಂದಿಗೆ ಗೌರವ ಸಲ್ಲಿಸಿದರು.

ಈ ಕುರಿತು ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡದ ಮಾಜಿ ಆಟಗಾರರೆಲ್ಲರೂ ಅವರೊಂದಿಗೆ ಕಳೆದ ಹಳೆಯ ನೆನಪುಗಳನ್ನೆಲ್ಲಾ ನೆನಪಿಸಿಕೊಂಡು ಭಾವನಾತ್ಮಕವಾಗಿ ಟ್ವೀಟ್ ಮಾಡುವ ಮೂಲಕ ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

ಆಸ್ಟ್ರೇಲಿಯಾ ತಂಡದ ಮಾಜಿ ಆಟಗಾರ ಶೇನ್ ವಾರ್ನ್ ಮಾರ್ಚ್ 4 ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. 52 ವರ್ಷದ ಶೇನ್ ವಾರ್ನ್‍ಗೆ ಥಾಯ್ಲೆಂಡ್‍ನ ವಿಲ್ಲಾದಲ್ಲಿ ಹೃದಯಾಘಾತವಾಗುತ್ತಿದ್ದಂತೆ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಆಸ್ಪತ್ರೆಯಲ್ಲಿ ವೈದ್ಯರು ತುರ್ತು ಚಿಕಿತ್ಸೆ ನೀಡಿದರೂ ಫಲಕಾರಿಯಾಗದೇ, ವಾರ್ನ್ ಕೊನೆಯುಸಿರೆಳೆದಿದ್ದರು.

ಆಸ್ಟ್ರೇಲಿಯಾದ ತಂಡದಲ್ಲಿ ಗೂಗ್ಲಿ ಎಸೆತದ ಮೂಲಕ ಸಾಕಷ್ಟು ಪ್ರಸಿದ್ಧಿ ಪಡೆದಿದ್ದ ವಾರ್ನ್ ಕ್ರಿಕೆಟ್‍ಗೆ ನಿವೃತ್ತಿ ನೀಡಿದ ಬಳಿಕ ಹಲವು ತಂಡಗಳಿಗೆ ಕೋಚ್ ಮತ್ತು ಮೆಂಟರ್ ಆಗಿ ಕಾರ್ಯ ನಿರ್ವಹಿಸಿದ್ದರು. ಐಪಿಎಲ್‍ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ನಾಯಕರಾಗಿ ತಂಡವನ್ನು ಮುನ್ನಡೆಸಿದ್ದರು.

Leave a Reply

Your email address will not be published.

Back to top button