– ಸಿಬ್ಬಂದಿ ಕಂಡೊಡನೆ ಓಡುತ್ತಿರುವ ಮರಿಯಾನೆ
ಮಡಿಕೇರಿ: ತಾಯಿಯನ್ನು ಕಳೆದುಕೊಂಡ ದುಃಖದಲ್ಲಿ ಕಂಗಾಲಾಗಿರುವ 1 ವರ್ಷದ ಮರಿಯಾನೆ ಅರಣ್ಯ ಇಲಾಖೆಯ (Forest Department) ಕಾರ್ಯಾಚರಣೆಗೆ ಸವಾಲಾಗಿ ಪರಿಣಮಿಸಿದೆ.
ಸಂಶಯಾಸ್ಪದ ರೀತಿಯಲ್ಲಿ ಕಾಡಾನೆ ಸಾವು – ಅಮ್ಮನ ಬಳಿ ನಿಂತು ಮರಿ ಆನೆ ರೋಧನೆ | ಕರುಳು ಹಿಂಡುವ ದೃಶ್ಯ ಕ್ಯಾಮೆರಾದಲ್ಲಿ ಸೆರೆ https://t.co/RHNPzZoOkT#ForestDepartment #Kodagu #WildElephant #Madikeri pic.twitter.com/z4tiam9VDt
— PublicTV (@publictvnews) July 26, 2026
ವಿರಾಜಪೇಟೆ ತಾಲ್ಲೂಕಿನ ಅಮ್ಮತ್ತಿ ಸಮೀಪದ ಆನಂದಪುರ-ಪುಲಿಯೇರಿ ಗ್ರಾಮದ ಕಾಫಿ ತೋಟದಿಂದ ತಪ್ಪಿಸಿಕೊಂಡ ಮರಿಯಾನೆ (Wild Elephant), ಕಾರ್ಯಾಚರಣೆ ತಂಡವನ್ನ ದಿಕ್ಕುತಪ್ಪಿಸಿ ಸುಮಾರು 10 ಕಿ.ಮೀ. ದೂರದವರೆಗೆ ಸಂಚರಿಸಿದೆ. ಇದನ್ನೂ ಓದಿ: ಸಂಶಯಾಸ್ಪದ ರೀತಿಯಲ್ಲಿ ಕಾಡಾನೆ ಸಾವು – ಅಮ್ಮನ ಬಳಿ ನಿಂತು ಮರಿ ಆನೆ ರೋಧನೆ

ಶನಿವಾರ ಆನಂದಪುರ-ಪುಲಿಯೇರಿ ಗ್ರಾಮದ ಕಾಫಿ ತೋಟದಲ್ಲಿ ಹೆಣ್ಣಾನೆಯೊಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿತ್ತು. ತಾಯಿಯ ಮೃತದೇಹದ ಬಳಿ ನಿಂತು ಮರಿಯಾನೆ ನಿರಂತರವಾಗಿ ಚೀರಾಡುತ್ತಾ ಯಾರನ್ನೂ ಸಮೀಪಕ್ಕೆ ಬಿಡದೆ ಮರಣೋತ್ತರ ಪರೀಕ್ಷೆಗೆ ಅಡ್ಡಿಪಡಿಸಿತ್ತು. ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಬಲೆ ಹಾಕಿ ಮರಿಯಾನೆಯನ್ನು ಸೆರೆಹಿಡಿದು ಸಮೀಪದ ಮನೆಯೊಂದರಲ್ಲಿ ಹಗ್ಗದಿಂದ ಕಟ್ಟಿಹಾಕಿದ್ದರು.

ಆದರೆ ಸ್ಥಳಾಂತರಿಸುವ ವೇಳೆ ಹಗ್ಗ ಕಳಚಿಕೊಂಡು ಮರಿಯಾನೆ ಮೂವರು ಸಿಬ್ಬಂದಿಗಳ ಮೇಲೆ ದಾಳಿ ನಡೆಸಿ ಕಾಫಿ ತೋಟದೊಳಗೆ ಓಡಿ ತಪ್ಪಿಸಿಕೊಂಡಿತು. ತಿತಿಮತಿ ವಲಯದ ಚೆನ್ನಯ್ಯನಕೋಟೆ, ಮೇಕೂರು-ಹೊಸ್ಕೇರಿ ಸೇರಿದಂತೆ ಹಲವೆಡೆ ಮರಿಯಾನೆಗಾಗಿ ಅರಣ್ಯ ಸಿಬ್ಬಂದಿ ಹುಡುಕಾಟ ಮುಂದುವರಿಸಿದ್ದಾರೆ. ತಾಯಿಯನ್ನು ಕಳೆದುಕೊಂಡ ನೋವಿನಲ್ಲಿ ತಾಯಿ ಆನೆಗೆ ಹುಡುಕುತ್ತಾ ಅಲೆದಾಡುತ್ತಿರುವ ಮರಿಯಾನೆ ತನ್ನನ್ನ ಹಿಡಿಯಲು ಮುಂದಾಗುವ ಸಿಬ್ಬಂದಿ ಮೇಲೆ ಆಕ್ರಮಣಕಾರಿ ವರ್ತನೆ ತೋರುತ್ತಿರುವುದು ಕಾರ್ಯಾಚರಣೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
