– ಆನೆಗೆ ನಮಸ್ಕರಿಸಿದ ಡಿಸಿ ಲತಾಕುಮಾರಿ
ಹಾಸನ: ಸತತ 7 ಗಂಟೆಗಳ ಪ್ರಯತ್ನದ ಬಳಿಕ ಒಂಟಿ ಸಲಗ ಕೆಪಿ ಕಾಲರ್ – 2ಗೆ ಅರವಳಿಕೆ ನೀಡಿ ಅರಣ್ಯ ಸಿಬ್ಬಂದಿ (Forest Department) ಸೆರೆಹಿಡಿದಿದ್ದಾರೆ. ಬೇಲೂರಿನ (Beluru) ಶಿರಗುರ ಗ್ರಾಮದ ಬಳಿ ಆನೆಯನ್ನು (Elephant) ಸೆರೆಹಿಡಿಯಲಾಗಿದೆ.

ಅರವಳಿಕೆ ಚುಚ್ಚುಮದ್ದು ನೀಡುತ್ತಿದ್ದಂತೆ ಸ್ವಲ್ಪ ದೂರು ಓಡಿ ಹೋಗಿ ಕಾಫಿ ತೋಟದೊಳಗೆ ಕಾಡಾನೆ ಮಲಗಿಕೊಂಡಿತ್ತು. ತಗ್ಗಿನ ಪ್ರದೇಶದಲ್ಲಿ ಕಾಡಾನೆ ಇರುವುದರಿಂದ ಕಾರ್ಯಾಚರಣೆ ವಿಳಂಬವಾಗುತ್ತಿದೆ. ಸ್ಥಳಕ್ಕೆ ಕುಮ್ಕಿ ಆನೆಗಳ ತಂಡ ಆಗಮಿಸಿದ್ದು, ಹಗ್ಗಕಟ್ಟಿ ಅದನ್ನು ಸ್ಥಳಾಂತರಿಸುವ ಪ್ರಯತ್ನ ನಡೆಯುತ್ತಿದೆ. ಕಾರ್ಯಾಚರಣೆಯಲ್ಲಿ 7 ಕುಮ್ಕಿ ಆನೆಗಳು ಹಾಗೂ 300 ಸಿಬ್ಬಂದಿ ಭಾಗಿಯಾಗಿದ್ದಾರೆ. ಇದನ್ನೂ ಓದಿ: ಪೊಲೀಸ್ ಜೀಪ್ ಬೆನ್ನಟ್ಟಿದ ಪುಂಡಾನೆ – ಕೂದಲೆಳೆ ಅಂತರದಲ್ಲಿ ಪಾರಾದ ಮಹಿಳಾ ಪಿಎಸ್‌ಐ
ಸ್ಥಳದಲ್ಲೇ ಇದ್ದ ಡಿಸಿ ಲತಾ ಕುಮಾರಿಯವರು ಸೆರೆ ಹಿಡಿದ ಕಾಡಾನೆ ಕುಮ್ಕಿ ಆನೆಗೆ ನಮಸ್ಕರಿಸಿದ್ದಾರೆ. ಇನ್ನೂ ಇಟಿಎಫ್ ಸಿಬ್ಬಂದಿ ಸಹ ನಮಸ್ಕರಿಸಿ ಕಾರ್ಯಾಚರಣೆ ಮುಂದುವರಿಸಿದ್ದಾರೆ.

ಮಹೇಂದ್ರ, ಅಜ್ಜಯ್ಯ, ಪ್ರಶಾಂತ್, ಧನಂಜಯ, ಏಕಲವ್ಯ, ಈಶ್ವರ, ಲಕ್ಷ್ಮಣ ಸೇರಿ ಏಳು ಆನೆಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿವೆ. ಬೆಳಗ್ಗೆಯಿಂದ ಕಾರ್ಯಾಚರಣೆ ತಂಡದ ಕಣ್ತಪ್ಪಿಸಿ ಕೆ.ಪಿ ಕಾಲರ್ ಓಡಾಡುತ್ತಿತ್ತು. ಕೊನೆಗೂ ಆನೆ ಸೆರೆಯಾಗಿದ್ದು ಸಿಬ್ಬಂದಿ ಹಾಗೂ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಇದನ್ನೂ ಓದಿ: ಮಿತಿ ಮೀರಿದ ʻಕೆ.ಪಿ ಕಾಲರ್ʼ ಪುಂಡಾಟ – ಸೆರೆಗೆ ಕುಮ್ಕಿ ಆನೆಗಳ ತಂಡ ಆಗಮನ

