– ರಿಕ್ಷಾ ನಿಲ್ಲಿಸಿ ಕಿಡಿಗೇಡಿಗಳಿಂದ ವಿಕೃತ ಆನಂದ
– ಕಣ್ಣೀರು ಹಾಕುತ್ತಿದ್ದ ಚಾಲಕರು
ನವದೆಹಲಿ: ರಸ್ತೆಯಲ್ಲಿ ಚಲಿಸುತ್ತಿರುವ ಇ-ರಿಕ್ಷಾಗಳನ್ನು (E-Rickshaw) ರಿಮೋಟ್ ಕಂಟ್ರೋಲ್ ಮೂಲಕ ಅರ್ಧ ಹಾದಿಯಲ್ಲೇ ಇದ್ದಕ್ಕಿದ್ದಂತೆ ನಿಲ್ಲಿಸುತ್ತಿದ್ದ ಮೊಬೈಲ್ ಅಪ್ಲಿಕೇಶನ್‌ಗಳನ್ನು (Mobile App) ಕೇಂದ್ರ ಸರ್ಕಾರ ಕೂಡಲೇ ಪ್ಲೇ ಸ್ಟೋರ್‌ಗಳಿಂದ ತಗೆದುಹಾಕುವಂತೆ ಸೂಚಿಸಿದೆ.
ಆ್ಯಪ್ ಬಳಸಿ ಇ-ರಿಕ್ಷಾಗಳನ್ನು ನಡು ರಸ್ತೆಯಲ್ಲಿ ನಿಲ್ಲಿಸುತ್ತಿದ್ದ ಪ್ರಾಂಕ್ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದವು. ಈ ಭದ್ರತಾ ಲೋಪವನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಸರ್ಕಾರ, ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆ್ಯಪ್ ಸ್ಟೋರ್‌ಗಳಿಂದ BAT-BMS, Lossigy ಮತ್ತು Epoch-i-ion ಎಂಬ ಚೀನಾ ಮೂಲದ ಆ್ಯಪ್‌ಗಳನ್ನು (China Application) ತಕ್ಷಣವೇ ತೆಗೆದುಹಾಕಲು ಆದೇಶಿಸಿದೆ.
ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (MeitY) ಕಾರ್ಯದರ್ಶಿ ಎಸ್. ಕೃಷ್ಣನ್ ಅವರು ಈ ಕುರಿತು ಮಾಹಿತಿ ನೀಡಿದ್ದು, ಸಾರ್ವಜನಿಕ ಸುರಕ್ಷತೆಗೆ ಧಕ್ಕೆ ತರುವ ಇಂತಹ ಆ್ಯಪ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
Poor e-rickshaw driver forced to push his vehicle 3km after Chinese app prank remotely disabled it, losing a day’s earnings. Chapri creators keep harassing hardworking drivers like this pic.twitter.com/CVms5bIHe7
— Ghar Ke Kalesh (@gharkekalesh) July 2, 2026
ಏನಾಗಿತ್ತು?
ಇತ್ತೀಚೆಗೆ ದೆಹಲಿ ಸೇರಿದಂತೆ ಪ್ರಮುಖ ನಗರಗಳಲ್ಲಿ ಚಲಿಸುತ್ತಿದ್ದ ಇ-ರಿಕ್ಷಾಗಳು ಯಾವುದೇ ತಾಂತ್ರಿಕ ದೋಷವಿಲ್ಲದಿದ್ದರೂ, ರಸ್ತೆ ಮಧ್ಯದಲ್ಲೇ ಇದ್ದಕ್ಕಿದ್ದಂತೆ ಬಂದ್ ಆಗುತ್ತಿದ್ದವು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ವಿಡಿಯೋಗಳಲ್ಲಿ ಯುವಕರು ತಮ್ಮ ಮೊಬೈಲ್‌ನಲ್ಲಿ ‘BAT-BMS’ ನಂತಹ ಆ್ಯಪ್ ಓಪನ್ ಮಾಡಿ, ರಸ್ತೆಯಲ್ಲಿ ಹೋಗುತ್ತಿದ್ದ ಇ-ರಿಕ್ಷಾಗಳನ್ನು ದೂರದಿಂದಲೇ ಆಫ್ ಮಾಡಿ ವಿಕೃತ ಆನಂದ ಪಡುತ್ತಿದ್ದರು.
ರಿಕ್ಷಾ ಸುಸ್ಥಿತಿಯಲ್ಲಿದ್ದರೂ ದಿಢೀರ್ ನಡು ರಸ್ತೆಯಲ್ಲಿ ನಿಂತಾಗ ಟ್ರಾಫಿಕ್ ಜಾಮ್ ಆಗುತ್ತಿತ್ತು. ರಿಕ್ಷಾಗಳು ಎಂಜಿನ್ ಸಡನ್ ಆಫ್ ಆಗಿ ನಿಂತಾಗ ಹಿಂದಿದ್ದ ವಾಹನ ಡಿಕ್ಕಿ ಹೊಡೆಯುವ ಸಾಧ್ಯತೆ ಸಹ ಇರುತ್ತಿತ್ತು. ಅಷ್ಟೇ ಅಲ್ಲದೇ ರಿಕ್ಷಾ ಚಾಲಕರು ಅಸಹಾಯಕರಾಗಿ ಕಣ್ಣೀರು ಇಡುತ್ತಿದ್ದರು. ಚಾಲಕರು ಸಂಕಷ್ಟ ಅನುಭವಿಸುತ್ತಿದ್ದಾಗ ಈ ಹ್ಯಾಕರ್‌ಗಳು ನಾವು ಸಮಸ್ಯೆಯನ್ನು ಸರಿ ಮಾಡುತ್ತೇವೆ ಎಂದು ಹೇಳಿ ಮೊಬೈಲ್‌ನಲ್ಲಿ ಆ್ಯಪ್ ಆನ್ ಮಾಡುತ್ತಿದ್ದರು. ತಂತ್ರಜ್ಞಾನದ ಅರಿವು ಇಲ್ಲದ ಚಾಲಕರು ಈ ಕಿಡಿಗೇಡಿಗಳಿಗೆ ಧನ್ಯವಾದ ಹೇಳುತ್ತಿದ್ದರು. ಇದನ್ನೂ ಓದಿ: ಇನ್ನು ಮುಂದೆ ಫೋನ್ ನಂಬರ್ ನೀಡದೇ ಚಾಟ್ ಮಾಡಿ – ಏನಿದು ಹೊಸ ವಾಟ್ಸಪ್ ಅಪ್‌ಡೇಟ್?
Please don’t sacrifice someone’s livelihood for reels and views.
An e-rickshaw driver spends the entire day working in the heat and traffic just to earn enough to feed their family. If an app is being misused to stop their vehicle in the middle of the road, it’s not a prank—it’s… pic.twitter.com/DAq7ujaNPG
— JanHit Voice (@HJP2029_2036) July 2, 2026
ಹ್ಯಾಕ್ ಹೇಗೆ?
ಈ ಆ್ಯಪ್‌ಗಳು ಮೂಲತಃ ಬ್ಯಾಟರಿಯ ವೋಲ್ಟೇಜ್ ಮತ್ತು ತಾಪಮಾನವನ್ನು ಮೇಲ್ವಿಚಾರಣೆ ಮಾಡಲು ಬಳಸುವ ಬ್ಯಾಟರಿ ಮ್ಯಾನೇಜ್‌ಮೆಂಟ್ ಸಿಸ್ಟಮ್ (BMS) ಭಾಗವಾಗಿ ಬಳಸಲಾಗುತ್ತಿತ್ತು. ಭಾರತದಲ್ಲಿ ಚಲಿಸುವ ಬಹುತೇಕ ಬಜೆಟ್ ಬೆಲೆಯ ಇ-ರಿಕ್ಷಾಗಳಲ್ಲಿ ಚೀನಾ ಮೂಲದ ಅಗ್ಗದ ಲಿಥಿಯಂ-ಅಯಾನ್ ಬ್ಯಾಟರಿಗಳನ್ನು ಬಳಸಲಾಗುತ್ತದೆ.
ಚೀನಾದ ಶೆನ್ಜೆನ್ ಗ್ರೆನರ್ಜಿ ಟೆಕ್ನಾಲಜಿ ಈ ಆಪ್ ಅಭಿವೃದ್ಧಿ ಪಡಿಸಿದ್ದು, ಈ ಬ್ಯಾಟರಿಗಳಲ್ಲಿ ಬ್ಲೂಟೂತ್ ಕನೆಕ್ಟಿವಿಟಿ ಇದೆ. ಆದರೆ ಇವುಗಳಿಗೆ ಯಾವುದೇ ಪಾಸ್‌ವರ್ಡ್ (Password) ಅಥವಾ ಸೆಕ್ಯೂರಿಟಿ ಅಥೆಂಟಿಕೇಶನ್ ಇಲ್ಲ. ಹೀಗಾಗಿ ರಿಕ್ಷಾದ 10 ರಿಂದ 15 ಮೀಟರ್ ವ್ಯಾಪ್ತಿಯಲ್ಲಿರುವ ಯಾರೂ ಬೇಕಾದರೂ ಈ ಆ್ಯಪ್‌ಗಳ ಮೂಲಕ ಬ್ಯಾಟರಿಗೆ ಕನೆಕ್ಟ್ ಆಗಬಹುದಿತ್ತು. ಕನೆಕ್ಟ್ ಆದ ತಕ್ಷಣ ಆ್ಯಪ್‌ನಲ್ಲಿರುವ ಡಿಸ್ಚಾರ್ಜ್ ಬಟನ್ ಆಫ್ ಮಾಡಿದರೆ ಬ್ಯಾಟರಿಯಿಂದ ಮೋಟಾರ್‌ಗೆ ಹೋಗುವ ವಿದ್ಯುತ್ ತಕ್ಷಣವೇ ಸ್ಥಗಿತಗೊಂಡು ರಿಕ್ಷಾ ರಸ್ತೆ ಮಧ್ಯದಲ್ಲೇ ನಿಲ್ಲುತ್ತಿತ್ತು. ಇದನ್ನೂ ಓದಿ: ನಕಲಿ ಖಾತೆ, ವಂಚನೆ ಆತಂಕ – ವಾಟ್ಸಪ್ ಹೊಸ ವೈಶಿಷ್ಟ್ಯದ ಮೇಲೆ ಕೇಂದ್ರ ಹದ್ದಿನ ಕಣ್ಣು
