Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election 2024
Dakshina Kannada

ದುಬೈ ಬ್ಯಾರಿ ಮೇಳ ಯಶಸ್ವಿ -12 ಸಾವಿರಕ್ಕೂ ಹೆಚ್ಚು ಜನ ಸೇರುವ ಮೂಲಕ ಇತಿಹಾಸ ಸೃಷ್ಟಿ

Public TV
Last updated: February 14, 2025 1:49 pm
Public TV
Share
3 Min Read
Dubai Beary Mela 2025 1
SHARE

– ಯು.ಟಿ.ಖಾದರ್, ಕೊಲಾಸೊ ಸೇರಿದಂತೆ ವಿವಿಧ ಸಾಧಕರಿಗೆ ಪ್ರಶಸ್ತಿ ಪ್ರದಾನ

ದುಬೈ: ರವಿವಾರ ದುಬೈಯ ಇತಿಸಲಾತ್ ಅಕಾಡೆಮಿ ಮೈದಾನದಲ್ಲಿ ಯುಎಇಯ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿ(BCCI) ಆಶ್ರಯದಲ್ಲಿ ನಡೆದ ಬ್ಯಾರಿ ಮೇಳ-2025 (Beary Mela 2025)ಬಹಳ ಯಶಸ್ವಿಯಾಗಿ ನಡೆಯಿತು.

ಯುಎಇಯ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿಸ್(ಬಿಸಿಸಿಐ) ಯುಎಇ ಘಟಕದ ಅಧ್ಯಕ್ಷ ಹಿದಾಯತ್‌ ಅಡ್ಡೂರು ನೇತೃತ್ವದಲ್ಲಿ ಮಧ್ಯಾಹ್ನದಿಂದ ಆರಂಭಗೊಂಡ ಬ್ಯಾರಿ ಮೇಳವು ರಾತ್ರಿ ವರೆಗೂ ಅದ್ದೂರಿಯಾಗಿ ನಡೆದಿದ್ದು, 12 ಸಾವಿರಕ್ಕೂ ಹೆಚ್ಚು ಜನರು ಸೇರುವ ಮೂಲಕ ದುಬೈಯಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸಿದೆ.

ಈ ಮೇಳದಲ್ಲಿ ಕೇವಲ ಬ್ಯಾರಿ ಸಮುದಾಯದವರಲ್ಲದೆ ಇನ್ನಿತರ ಹಿಂದೂ, ಕ್ರಿಶ್ಚಿಯನ್ ಸಮುದಾಯದವರೂ ಕೂಡ ಪಾಲ್ಗೊಳ್ಳುವ ಮೂಲಕ ಸೌಹಾರ್ದತೆ ಮೆರೆದರು. ಈ ಕಾರ್ಯಕ್ರಮದಲ್ಲಿ ಜನರು ಕುಟುಂಬ ಸಮೇತರಾಗಿ ಪಾಲ್ಗೊಂಡು ಸಂಭ್ರಮಿಸಿದರು.

Dubai Beary Mela 2025 3

ವಿವಿಧ ಸಾಧಕರಿಗೆ ಪ್ರಶಸ್ತಿ ಪ್ರದಾನ
ಕರ್ನಾಟಕದ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಅವರಿಗೆ ‘Beary statesman Leadership’  ಪ್ರಶಸ್ತಿ,  ತುಂಬೆ ಗ್ರೂಪ್ ನ ಸಂಸ್ಥಾಪಕ ಅಧ್ಯಕ್ಷ ಡಾ.ತುಂಬೆ ಮೊಯ್ದಿನ್ ಅವರಿಗೆ ‘Global beary of Business Icon’ ಪ್ರಶಸ್ತಿ, ಅನಿವಾಸಿ ಭಾರತೀಯ ಉದ್ಯಮಿ ಡಾ.ರೊನಾಲ್ಡ್ ಕೊಲಾಸೊ ಅವರಿಗೆ ‘Global icon of Philanthropy’ ಪ್ರಶಸ್ತಿ, ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ ಅವರಿಗೆ ‘Indian Diaspora Humanitarian’ ಪ್ರಶಸ್ತಿ,  ಸೌದಿ ಅರೇಬಿಯಾದ ಎಕ್ಸ್‌ಪರ್ಟೈಸ್ ಕಾಂಟ್ರಾಕ್ಟಿಂಗ್ ಕಂಪನಿ ಲಿಮಿಟೆಡ್‌ನ ಸಿಇಒ ಮುಹಮ್ಮದ್‌ ಆಸಿಫ್‌ ಕರ್ನಿರೆ ಅವರಿಗೆ ‘Global Beary of Business Youth Icon’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮನಸೂರೆಗೊಂಡ ಸಾಂಸ್ಕೃತಿಕ ಕಾರ್ಯಕ್ರಮ
ಮೇಳದ ಮುಖ್ಯ ವೇದಿಕೆಯಲ್ಲಿ ಬ್ಯಾರಿ ಜಾನಪದ ಕಲೆಗಳಾದ ದಫ್, ಕೋಲ್ಕಲಿ, ಒಪ್ಪನೆ ಪಾಟ್, ಕವಾಲಿ, ‘ಪೋಕರಾಕ BA -LLB’ ಹಾಸ್ಯಮಯ ನಾಟಕ, ಮಕ್ಕಳ ಫ್ಯಾಶನ್ ಷೋ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಪ್ರದರ್ಶನಗೊಂಡವು. ಈ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದ ಜನರ ಮನಸೂರೆಗೊಳಿಸಿತು. ಜೊತೆಗೆ ವೇದಿಕೆಯ ಮುಂದೆ ಸಂದಲ್ (ಮೆರವಣಿಗೆ) ಕಾರ್ಯಕ್ರಮವು ನಡೆಯಿತು.

Dubai Beary Mela 2025 2

ಕೈಬೀಸಿ ಕರೆಯುತ್ತಿದ್ದ  ತಿಂಡಿ ಮಳಿಗೆಗಳು
ಬ್ಯಾರಿ ಮೇಳದಲ್ಲಿ ತಿಂಡಿ-ತಿನಸುಗಳ ಮಳಿಗೆಗಳು ಸೇರಿದ್ದ ಜನರನ್ನು ಕೈಬೀಸಿ ಕರೆಯುತ್ತಿತ್ತು. ಬಿರಿಯಾನಿ, ಘೀರೈಸ್, ಕಬಾಬ್ ಜೊತೆ ಕರಾವಳಿಯ ವಿವಿಧ ಬಗೆಯ ತಿಂಡಿ ತಿನಸುಗಳನ್ನು ಸವಿದು ಜನ ಖುಷಿಪಟ್ಟರು. ಇದಲ್ಲದೆ ಇನ್ನಿತರ ವಸ್ತುಗಳ ಮಳಿಗೆಗಳು ಕೂಡ ಈ ಮೇಳದಲ್ಲಿ ಗಮನ ಸೆಳೆದವು. ತಿಂಡಿ-ತಿನಸುಗಳ ಮಳಿಗೆಗಳು ಜನಜಂಗುಳಿಯಿಂದ ತುಂಬಿ ತುಳುಕುತ್ತಿತ್ತು.

ಬ್ಯಾರಿ ಶಾರ್ಕ್ ಥಿಂಕ್
ಇತಿಸಲಾತ್ ಅಕಾಡೆಮಿಯ ಸಭಾಂಗಣ 2ರಲ್ಲಿ ಬ್ಯಾರಿ ಯುವ ಉದಯೋನ್ಮುಖ ಉದ್ಯಮಿಗಳಿಗೆ ಆಯೋಜಿಸಿದ್ದ “ಬ್ಯಾರಿ ಶಾರ್ಕ್ ಥಿಂಕ್” ಕಾರ್ಯಕ್ರಮದಲ್ಲಿ ಹೊಸ ಬ್ಯೂಸಿನೆಸ್‌ ಯೋಜನೆಯನ್ನಿಟ್ಟುಕೊಂಡ 7 ಮಂದಿ ಪಾಲ್ಗೊಂಡಿದ್ದು, ಅವರು ತಮ್ಮ ಹೊಸ ಬಗೆಯ ಬ್ಯೂಸಿನೆಸ್‌ ಯೋಜನೆಯನ್ನು 3 ಮಂದಿ ತೀರ್ಪುಗಾರರ ತಂಡದ ಮುಂದೆ ಇಟ್ಟರು. ಈ ಕಾರ್ಯಕ್ರಮದಲ್ಲಿ ಹೂಡಿಕೆದಾರರು ಕೂಡ ಭಾಗವಹಿಸಿದ್ದು, ಹೊಸ ಹೊಸ ಬ್ಯೂಸಿನೆಸ್‌ ಯೋಜನೆಗಳನ್ನು ಆಲಿಸಿದರು.

ಬಿಸಿನೆಸ್‌ ಸೆಮಿನಾರ್
ಇತಿಸಲಾತ್ ಅಕಾಡೆಮಿಯ ಪ್ರಮುಖ ವೇದಿಕೆಯಲ್ಲಿ ನಡೆದ ‘NRI ತೆರಿಗೆ – ಅಪಾಯ ಮತ್ತು ಪ್ರತಿಫಲಗಳು'(NRI taxation-risk & rewards) ಎಂಬ ವಿಷಯದ ಕುರಿತು ನೌಫಾಲ್ ಎಂ. & ಕಂಪನಿಯ ಆಡಳಿತ ಪಾಲುದಾರ ಸಿಎ ನೌಫಾಲ್ ಮೊಹಮ್ಮದ್ ಅವರು ಸವಿವರವಾದ ಮಾಹಿತಿಯನ್ನು ಹಂಚಿಕೊಂಡರು.

‘ವ್ಯವಹಾರಕ್ಕಾಗಿ ಕೃತಕ ಬುದ್ಧಿಮತ್ತೆ'(Artificial Intelligence for Business) ಕುರಿತು ಟೆಕ್ ಪ್ರೊಕ್ಸಿಮ ಸ್ಥಾಪಕ ಹಾಗು ಸಿಇಒ ಶೇಖ್ ಸಲೀಂ ಅವರು ಮಾತನಾಡಿದರು.

‘ದುಬೈಯ ರಿಯಲ್ ಎಸ್ಟೇಟ್ ಹೂಡಿಕೆ’ ಕುರಿತ ನಡೆದ ಪ್ಯಾನೆಲ್ ಚರ್ಚೆಯಲ್ಲಿ ಮಂಗಳೂರಿನ ನೌಶಾದ್, ಸಾದಿಕ್ ಹಾಗು ಶುಐಬ್ ಪಾಲ್ಗೊಂಡು ತಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ಮುಂದಿಟ್ಟರು. ರಬಿಯತ್ ಅವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು. ‘ಬ್ಯಾರಿ ಶಾರ್ಕ್ ಥಿಂಕ್’ ಹಾಗು ಬ್ಯೂಸಿನೆಸ್‌ ಸೆಮಿನಾರ್ ಕಾರ್ಯಕ್ರಮ ನಿರ್ದೇಶಕರಾಗಿ ಬಿಸಿಸಿ ಉಪಾಧ್ಯಕ್ಷ ಬಶೀರ್ ಕಿನ್ನಿಂಗಾರ್ ಸಹಕರಿಸಿದರು.

TAGGED:Beary Mela 2025dubaiUT Khaderದುಬೈಬ್ಯಾರಿ ಮೇಳಯುಟಿ ಖಾದರ್
Share This Article
Facebook Whatsapp Whatsapp Telegram

Cinema Updates

Chaitra Kundapura Husband 1
Exclusive: ಕೊನೆಗೂ ಭಾವಿ ಪತಿಯನ್ನು ಪರಿಚಯಿಸಿದ ಚೈತ್ರಾ‌ ಕುಂದಾಪುರ
13 hours ago
daali dhananjay
ಆಪರೇಷನ್ ಸಿಂಧೂರ: ಭಯೋತ್ಪಾದಕರಿಗೆ ಭಾರತ ಒಳ್ಳೆಯ ಉತ್ತರವನ್ನೇ ಕೊಟ್ಟಿದೆ- ಡಾಲಿ
15 hours ago
amrutha prem
ಚಿತ್ರರಂಗದಲ್ಲಿ ಲವ್ಲಿ ಸ್ಟಾರ್ ಪ್ರೇಮ್ ಪುತ್ರಿಗೆ ಬೇಡಿಕೆ- ನಟಿಗೆ ಬಿಗ್ ಚಾನ್ಸ್
16 hours ago
chaithra kundapura 1
12 ವರ್ಷಗಳ ಪ್ರೀತಿ- ಮೇ 9ರಂದು ಚೈತ್ರಾ ಕುಂದಾಪುರ ಮದುವೆ
16 hours ago

You Might Also Like

ಸಾಂದರ್ಭಿಕ ಚಿತ್ರ
Latest

ಬಿಎಸ್‌ಎಫ್‌ ಯೋಧರ ಭರ್ಜರಿ ಬೇಟೆ – ಸಾಂಬಾದಲ್ಲಿ 7 ಮಂದಿ ಜೈಶ್‌ ಉಗ್ರರ ಹತ್ಯೆ

Public TV
By Public TV
22 minutes ago
IPL 2025
Cricket

ಭಾರತ-ಪಾಕ್‌ ನಡುವೆ ಯುದ್ಧ ಛಾಯೆ – ರದ್ದಾಗುತ್ತಾ ಐಪಿಎಲ್‌?- ಅತ್ತ ಪಾಕ್‌ ಸೂಪರ್‌ ಲೀಗ್‌ ದುಬೈಗೆ ಶಿಫ್ಟ್‌

Public TV
By Public TV
42 minutes ago
04
Latest

Video | ಪ್ರತೀಕಾರ ಸಮರ – ರಾತ್ರಿಯಿಡೀ ವಾರ್‌ರೂಂನಲ್ಲಿದ್ದು ಕ್ಷಣಕ್ಷಣದ ಮಾಹಿತಿ ಪಡೆದ ಮೋದಿ

Public TV
By Public TV
43 minutes ago
Jammu
Latest

ಜಮ್ಮುವಿನಲ್ಲಿ ಅಮಾಯಕರನ್ನ ಟಾರ್ಗೆಟ್‌ ಮಾಡಿದ ʻಪಾಪಿಸ್ತಾನʼ – 10,000 ಮಂದಿ ಸ್ಥಳಾಂತರ?

Public TV
By Public TV
1 hour ago
amit shah 1
Latest

ಭಾರತ- ಪಾಕ್‌ ನಡುವೆ ಹೆಚ್ಚಿದ ಉದ್ವಿಗ್ನತೆ – ಬಿಎಸ್‌ಎಫ್‌ ಮುಖ್ಯಸ್ಥರೊಂದಿಗೆ ಅಮಿತ್‌ ಶಾ ಚರ್ಚೆ

Public TV
By Public TV
2 hours ago
Pakistan Army
Latest

ಕ್ವೆಟ್ಟಾದಿಂದ ಪಾಕ್‌ ಸೇನೆ ಪಲಾಯನ – ಸೇನಾ ಠಾಣೆಗಳನ್ನ ವಶಕ್ಕೆ ಪಡೆದ ಬಲೂಚ್‌ ಹೋರಾಟಗಾರರು

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election 2024
Welcome Back!

Sign in to your account

Username or Email Address
Password

Lost your password?