ಬೀದರ್: ಕುಡಿದ ನಶೆಯಲ್ಲಿ ಪುಂಡರಿಬ್ಬರು ಬೈಕ್ ಅನ್ನು ನೇರವಾಗಿ ಆಸ್ಪತ್ರೆಯ ICUಗೆ ನುಗ್ಗಿಸಿ ರೋಗಿಗಳಿಗೆ ತೊಂದರೆ ನೀಡಿದ ಘಟನೆ ಬೀದರ್‌ನ (Bidar) ಬ್ರೀಮ್ಸ್ (BRIMS) ಆಸ್ಪತ್ರೆಯಲ್ಲಿ ನಡೆದಿದೆ.
ಬೈಕ್‌ನಲ್ಲಿದ್ದ ಇಬ್ಬರ ಪೈಕಿ ಓರ್ವ ವ್ಯಕ್ತಿ ಅನಾರೋಗ್ಯದಿಂದ ಬಳಲುತ್ತಿದ್ದ. ಹೀಗಾಗಿ ಚಿಕಿತ್ಸೆಗಾಗಿ ಬೈಕ್‌ನಲ್ಲಿ ಬಂದಿದ್ದು, ನೇರವಾಗಿ ಬೈಕ್‌ನಲ್ಲಿಯೇ ತುರ್ತು ಚಿಕಿತ್ಸಾ ಘಟಕಕ್ಕೆ ನುಗಿದ್ದಾರೆ. ಆದರೆ ಇಬ್ಬರು ಕುಡಿದ ಅಮಲಿನಲ್ಲಿದ್ದರು ಎಂದು ತಿಳಿದುಬಂದಿದೆ. ಇದನ್ನೂ ಓದಿ: ವಿದ್ಯಾರ್ಥಿಗಳ ಶಕ್ತಿ ಚಿರಾಯುವಾಗಲಿ: ಪ್ರಧಾನ್ ರಾಜೀನಾಮೆ ಬೆನ್ನಲ್ಲೇ ಸಿಜೆಪಿ ವಿಜಯೋತ್ಸವ
ಇವರ ಅತಿರೇಕದ ಪುಂಡಾಟಿಕೆಯನ್ನು ಗಮನಿಸಿ, ಸ್ಥಳಕ್ಕೆ ಬಂದ ಪೊಲೀಸರು, ತಕ್ಷಣವೇ ಕಾರ್ಯಪ್ರವೃತ್ತರಾಗಿ ಇಬ್ಬರಿಗೂ ಲಾಠಿಯಿಂದ ರುಚಿ ತೋರಿಸಿ ಆಸ್ಪತ್ರೆಯಿಂದ ಹೊರಹಾಕಿದ್ದಾರೆ.
ಪೊಲೀಸರು ಬಿಸಿ ಬಿಸಿ ಕಜ್ಜಾಯ ನೀಡಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ವಿಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ನ್ಯೂ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.ಇದನ್ನೂ ಓದಿ: CJP Protest Live Updates | ಧರ್ಮೇಂದ್ರ ಪ್ರಧಾನ್ ರಾಜೀನಾಮೆ – ವಿದ್ಯಾರ್ಥಿಗಳ ಹೋರಾಟಕ್ಕೆ ಮಣಿದ ಮೋದಿ ಸರ್ಕಾರ
