ದೆಹಲಿ ಪ್ರತಿಭಟನೆ ಅಂತ್ಯ: ಸಿಜೆಪಿ ಘೋಷಣೆ
ದೆಹಲಿಯಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಅಂತ್ಯ
ಪ್ರತಿಭಟನೆ ಕೊನೆಗೊಳಿಸುವುದಾಗಿ ಘೋಷಿಸಿದ ಸಿಜೆಪಿ ವಕ್ತಾರ ಸೌರವ್ ದಾಸ್
ನಾವು ಪ್ರತಿಭಟನೆ ವಾಪಸ್ ಪಡೆಯುತ್ತಿದ್ದೇವೆ: ಸೌರವ್ ದಾಸ್
ನಿಯಮಗಳಿಗೆ ಬದ್ಧವಾಗಿ ಪ್ರತಿಭಟನೆ ವಾಪಸ್
ಈ ಕ್ಷಣದಿಂದಲೇ ಎಲ್ಲರೂ ಮನೆಗೆ ವಾಪಸ್ ಹೋಗಬೇಕು
ಜೆ.ಪಿ.ನಡ್ಡಾ ಹೇಳಿಕೆ
ಮೂರನೇ ಸಭೆ ನಡೆಸಿ ಸುದೀರ್ಘ ಮಾತುಕತೆ ನಡೆಸಿದೆ
ಲಿಖಿತ ಭರವಸೆಯೊಂದಿಗೆ ಬಂದಿದ್ದೆವು
ಬಾಕಿ ಬೇಡಿಕೆಗಳನ್ನು ಚರ್ಚೆಗಳ ಮೂಲಕ ಈಡೇರಿಸಲಾಗುವುದು
ಪ್ರಮುಖ ಬೇಡಿಕೆಯನ್ನು ಈಡೇರಿಸಿದ್ದೇವೆ
ದೆಹಲಿ ಸೇರಿದಂತೆ ಬಿಜೆಪಿ ಆಡಳಿತ ಸರ್ಕಾರದಲ್ಲಿ ಆಗಿರುವ ಎಫ್‌ಐಆರ್ ರದ್ದು ಮಾಡಲಾಗುವುದು
ವಿದ್ಯಾರ್ಥಿಗಳ ಮೇಲಿನ FIR ರದ್ದಿಗೆ ಕೇಂದ್ರ ಒಪ್ಪಿಗೆ
ಮೂರು ನಾಲ್ಕು ದಿನಗಳಲ್ಲಿ ಎಫ್‌ಐಆರ್ ರದ್ದಾಗಲಿದೆ
ಮುಂದೆಯೂ ಯಾವುದೇ ಕ್ರಮ ಆಗುವುದಿಲ್ಲ ಎಂದು ಭರವಸೆ ಸಿಕ್ಕಿದೆ
ಸಿಜೆಪಿ ಸೇರಿದಂತೆ ಯಾವುದೇ ವಿದ್ಯಾರ್ಥಿಗಳ ನಾಯಕರ ವಿರುದ್ಧ ಮುಂದೆ ಕ್ರಮ ಆಗಲ್ಲ
ನಾವು ಮಂಗಳವಾರ ವೇಳೆಗೆ ಎಲ್ಲ ಭರವಸೆ ಈಡೇರಲಿದೆ – ಸೌರವ್ ದಾಸ್
ಎಲ್ಲ ರಾಜ್ಯಗಳಲ್ಲೂ ವಿದ್ಯಾರ್ಥಿಗಳ ಮೇಲಿನ ಎಫ್‌ಐಆರ್ ರದ್ದು ಆಗಬೇಕು
ಅದು ಆದಷ್ಟು ಬೇಗ ರದ್ದಾಗಲಿದೆ – ಸಿಜೆಪಿ ಪ್ರತಿನಿಧಿ ಸೌರವ್ ದಾಸ್
ಸಿಜೆಪಿ ಪ್ರತಿನಿಧಿಗಳ ಜೊತೆಗೆ ಜೆಪಿ ನಡ್ಡಾ ಸುದ್ದಿಗೋಷ್ಠಿ
ಸಿಜೆಪಿ ಪ್ರತಿನಿಧಿ ಹೇಳಿಕೆ
ವಿದ್ಯಾರ್ಥಿಗಳ ಮೇಲಿನ ಎಫ್‌ಐಆರ್ ರದ್ದು ಮಾಡಬೇಕು, ಮುಂದೆಯೂ ಕ್ರಮ ಆಗಬಾರದು.
ಮೃತರಿಗೆ ತಲಾ ಒಂದು ಕೋಟಿ ಪರಿಹಾರ ಹಾಗೂ ರಾಜೀನಾಮೆ ಬೇಡಿಕೆ ಇಟ್ಟಿದ್ದೆವು.
ರಾಜೀನಾಮೆಯನ್ನು ಪ್ರಧಾನ್ ನೀಡಿದ್ದಾರೆ.
‘ನನ್ನ ಮಗ ಸುರಕ್ಷಿತವಾಗಿ ಮನೆಗೆ ಬರಬೇಕು’ – ಕೇಂದ್ರ ಸಚಿವರ ರಾಜೀನಾಮೆ ಬಳಿಕ ಭಾವುಕರಾದ ಅಭಿಜೀತ್ ದೀಪ್ಕೆ ತಾಯಿ https://publictv.in/cjp-warns-of-tough-protest-if-dharmendra-pradhan-does-not-resign-2/
ರಾಹುಲ್ ಗಾಂಧಿ ರಿಯಾಕ್ಷನ್
ಫಡ್ನವೀಸ್‌ಗೆ ಮೋದಿ ತುರ್ತು ಬುಲಾವ್
ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಬೆನ್ನಲ್ಲೇ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್‌ಗೆ ಪ್ರಧಾನಿ ಮೋದಿ ತುರ್ತು ಬುಲಾವ್ ನೀಡಿದ್ದಾರೆ. ಫಡ್ನವೀಸ್ ಅವರು ಕೇಂದ್ರ ಶಿಕ್ಷಣ ಸಚಿವರಾಗುತ್ತಾರಾ ಎಂಬ ಚರ್ಚೆಗಳು ನಡೆಯುತ್ತಿವೆ.
ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ ಮತ್ತು ಜಿತೇಂದ್ರ ಸಿಂಗ್ ಅವರು ಕಾಕ್ರೋಚ್ ಜನತಾ ಪಕ್ಷದ ಮುಖ್ಯ ವಕ್ತಾರ ಸೌರವ್ ದಾಸ್ ಮತ್ತು ಅದರ ರಾಷ್ಟ್ರೀಯ ವಕ್ತಾರ ಅಶುತೋಷ್ ರಂಕಾ ಅವರೊಂದಿಗೆ ಮೂರನೇ ಸುತ್ತಿನ ಮಾತುಕತೆ ನಡೆಸಿದ್ದಾರೆ.

3ನೇ ಸುತ್ತಿನ ಮಾತುಕತೆ
ಸಿಜೆಪಿ ಜೊತೆಗಿನ ಮೂರನೇ ಸುತ್ತಿನ ಮಾತುಕತೆಗಾಗಿ ಕೇಂದ್ರ ಸಚಿವರಾದ ಜೆಪಿ ನಡ್ಡಾ ಮತ್ತು ಜಿತೇಂದ್ರ ಸಿಂಗ್ ಅವರು ಕಾನ್ಸ್ಟಿಟ್ಯೂಷನ್ ಕ್ಲಬ್ ಆಫ್ ಇಂಡಿಯಾಗೆ ಆಗಮಿಸಿದ್ದಾರೆ.
ಯುವಕರ ಉಜ್ವಲ ಭವಿಷ್ಯವೇ ನನ್ನ ಸಂಕಲ್ಪ – ಧರ್ಮೇಂದ್ರ ಪ್ರಧಾನ್ ಸುದೀರ್ಘ ರಾಜೀನಾಮೆ ಪತ್ರದಲ್ಲಿ ಏನಿದೆ?
ನನ್ನ ಯುವ ಸ್ನೇಹಿತರೇ,
ಕಳೆದ ನಾಲ್ಕು ದಶಕಗಳಿಗೂ ಹೆಚ್ಚು ಕಾಲದಿಂದ ನಾನು ವಿದ್ಯಾರ್ಥಿ, ಶಿಕ್ಷಕ ಹಾಗೂ ಶಿಕ್ಷಣ ಸುಧಾರಣೆಗೆ ಸಮರ್ಪಿತನಾಗಿದ್ದೇನೆ. ಸದೃಢ, ಸಮಾವೇಶಿತ ಮತ್ತು ದೂರದೃಷ್ಟಿಯ ಶಿಕ್ಷಣ ವ್ಯವಸ್ಥೆಯೇ ಬಲಿಷ್ಠ ರಾಷ್ಟ್ರದ ಅಡಿಪಾಯ ಎಂಬುದು ನನ್ನ ಅಚಲ ನಂಬಿಕೆಯಾಗಿದೆ.
ದೇಶದ ಯುವಜನರ ಆಶಯಗಳು, ಭಾವನೆಗಳು ಹಾಗೂ ಅವರ ನ್ಯಾಯಸಮ್ಮತ ನಿರೀಕ್ಷೆಗಳ ಬಗ್ಗೆ ನನಗೆ ಅಪಾರ ಗೌರವವಿದೆ. ಭಾರತದ ಯುವಪೀಳಿಗೆಯ ಕನಸುಗಳನ್ನು ನನಸಾಗಿಸುವುದು ನಮ್ಮೆಲ್ಲರ ರಾಜಕೀಯ ಹಾಗೂ ಸಾಮಾಜಿಕ ಜೀವನದ ನೈತಿಕ ಸಂಕಲ್ಪವಾಗಿದೆ. ಪ್ರಧಾನಮಂತ್ರಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ರಾಷ್ಟ್ರಸೇವೆ ಮಾಡುವ ಅವಕಾಶ ನನಗೆ ದೊರೆತಿದ್ದಕ್ಕಾಗಿ ಅವರಿಗೆ ನಾನು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ.
ಆದರೆ, 2026ರ ಮೇ 3ರಂದು ನಡೆದ NEET-UG ಪರೀಕ್ಷೆಯಲ್ಲಿ ಅಕ್ರಮಗಳು ಬೆಳಕಿಗೆ ಬಂದವು. ಭಾರತ ಸರ್ಕಾರವು ತಕ್ಷಣವೇ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತನಿಖೆಯನ್ನು ಸಿಬಿಐಗೆ ವಹಿಸಿತು. ಪರೀಕ್ಷೆಯನ್ನ ರದ್ದುಗೊಳಿಸಿ ಮರುಪರೀಕ್ಷೆಯ ದಿನಾಂಕವನ್ನು ಘೋಷಿಸಲಾಯಿತು. ಜೊತೆಗೆ, ಮುಂದಿನ ವರ್ಷದಿಂದ ಈ ಪರೀಕ್ಷೆಯನ್ನು ಸಿಬಿಟಿ (Computer-Based Test) ಮಾದರಿಯಲ್ಲಿ ನಡೆಸುವ ನಿರ್ಧಾರವೂ ಕೈಗೊಳ್ಳಲಾಯಿತು.
ಈ ಅವಧಿಯಲ್ಲಿ ನಮ್ಮ ಪ್ರಮುಖ ಆದ್ಯತೆ 20 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಪರೀಕ್ಷೆಯನ್ನ ಸುಗಮವಾಗಿ ನಡೆಸುವುದಾಗಿತ್ತು. ಇದಕ್ಕಾಗಿ Whole of Government Approach ಅಡಿಯಲ್ಲಿ ಕಾರ್ಯನಿರ್ವಹಿಸಲಾಯಿತು. ಕೇಂದ್ರ ಸರ್ಕಾರದೊಂದಿಗೆ ರಾಜ್ಯ ಸರ್ಕಾರಗಳು, ವಿಶೇಷವಾಗಿ ಜಿಲ್ಲಾ ಆಡಳಿತಗಳು ಮಹತ್ವದ ಪಾತ್ರ ವಹಿಸಿದವು. ವಿದ್ಯಾರ್ಥಿಗಳು, ಪೋಷಕರು ಹಾಗೂ ಪಾಲಕರ ಸಹಕಾರದಿಂದ 2026ರ ಜೂನ್ 21ರಂದು ಈ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು.
ಮೊದಲ ದಿನದಿಂದಲೇ ಈ ವಿಷಯದ ಸಂಪೂರ್ಣ ಜವಾಬ್ದಾರಿಯನ್ನ ನಾನು ಹೊತ್ತಿದ್ದೇನೆ ಮತ್ತು ಯಾವುದೇ ಸಂದರ್ಭದಲ್ಲೂ ಈ ಪರಿಸ್ಥಿತಿಯಿಂದ ಹಿಂದೆ ಸರಿದಿಲ್ಲ. ಪರೀಕ್ಷಾ ಮಾಫಿಯಾದ ಕಾರಣದಿಂದ ಯಾವುದೇ ಪ್ರತಿಭಾವಂತ ವಿದ್ಯಾರ್ಥಿಯ ಭವಿಷ್ಯ ಹಾಳಾಗಬಾರದು, ಯಾವುದೇ ವಿದ್ಯಾರ್ಥಿಗೆ ಅನ್ಯಾಯವಾಗಬಾರದು ಎಂಬುದು ನನ್ನ ದೃಢ ಸಂಕಲ್ಪವಾಗಿತ್ತು.
ಜುಲೈ 16ರಂದು ಪ್ರಕಟವಾದ NEET-UG ಫಲಿತಾಂಶಗಳು ತೃಪ್ತಿಕರವಾಗಿದ್ದವು. ಬಡ ಹಿನ್ನೆಲೆಯಿಂದ ಬಂದ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳು ಕೂಡ ಯಶಸ್ಸು ಗಳಿಸಿದರು. ಆದರೆ, ಈ ಅವಧಿಯಲ್ಲಿಯೂ ವಿದ್ಯಾರ್ಥಿಗಳನ್ನು ದಾರಿ ತಪ್ಪಿಸಲು ಜವಾಬ್ದಾರಿಯುತ ಹುದ್ದೆಗಳಲ್ಲಿ ಕುಳಿತಿದ್ದ ಕೆಲವರು ಅಡ್ಡಿಪಡಿಸಲು ಪ್ರಯತ್ನಿಸಿದರು. ಇದು ನನ್ನ ಮನಸ್ಸಿಗೆ ಅಪಾರ ನೋವುಂಟುಮಾಡಿದೆ.
ನಾನು ಸದಾ ನಮ್ಮ ಪ್ರಜಾಪ್ರಭುತ್ವದ ಶಕ್ತಿಯ ಮೇಲೆ ಅಚಲ ನಂಬಿಕೆ ಇಟ್ಟಿದ್ದೇನೆ ಹಾಗೂ ಯುವಜನರ ಆಶಯಗಳು, ಕನಸುಗಳು ಮತ್ತು ನಿರೀಕ್ಷೆಗಳಿಗೆ ಆಳವಾದ ಗೌರವವನ್ನು ತೋರಿದ್ದೇನೆ. ಅವರು ಕೇವಲ ಭಾರತದ ಭವಿಷ್ಯವಷ್ಟೇ ಅಲ್ಲ, ಹೊಸ ಹಾಗೂ ಅಭಿವೃದ್ಧಿ ಹೊಂದಿದ ಭಾರತದ ನಿರ್ಮಾಪಕರು ಮತ್ತು ಭವಿಷ್ಯದ ಶಿಲ್ಪಿಗಳೂ ಆಗಿದ್ದಾರೆ. ಕಳೆದ 10 ದಿನಗಳ ಬೆಳವಣಿಗೆಗಳನ್ನು ಗಮನಿಸಿದಾಗ ನನ್ನ ಮನಸ್ಸಿಗೆ ತುಂಬಾ ನೋವಾಗಿದೆ. ಇದು ನನಗೆ ವೈಯಕ್ತಿಕ ಪ್ರತಿಷ್ಠೆಯ ಪ್ರಶ್ನೆಯಲ್ಲ. ಭಾರತದ ಯುವಶಕ್ತಿಯೇ ಈ ದೇಶದ ನಿಜವಾದ ಶಕ್ತಿ. ದೇಶದ ಯುವಶಕ್ತಿಯನ್ನು ಗೊಂದಲದ ದುಷ್ಟಚಕ್ರದಲ್ಲಿ ಸಿಲುಕಲು ಬಿಡುವುದಿಲ್ಲ ಎಂಬುದು ನನ್ನ ಸಂಕಲ್ಪ.
ಜಂತರ್-ಮಂತರ್‌ನಲ್ಲಿ ಹಾಗೂ ದೇಶದಾದ್ಯಂತ ಉಂಟಾದ ಪರಿಸ್ಥಿತಿಯನ್ನು ರಾಷ್ಟ್ರವಿರೋಧಿ ಶಕ್ತಿಗಳು ದುರುಪಯೋಗಪಡಿಸಿಕೊಳ್ಳಬಾರದು, ದೇಶದ ಏಕತೆ ಅಬಾಧಿತವಾಗಿರಬೇಕು, ಭಾರತದ ಒಬ್ಬ ವಿದ್ಯಾರ್ಥಿಯ ಭವಿಷ್ಯವೂ ಕಾನೂನು ತೊಡಕುಗಳಲ್ಲಿ ಸಿಲುಕಬಾರದು, ನಮ್ಮ ಮಕ್ಕಳು ತಮ್ಮ ಸಮಯವನ್ನ ಓದು ಮತ್ತು ವೃತ್ತಿಜೀವನ ನಿರ್ಮಾಣದತ್ತ ಕೇಂದ್ರೀಕರಿಸಬೇಕು ಎಂಬ ಉದ್ದೇಶದಿಂದ ನಾನು ನನ್ನ ರಾಜೀನಾಮೆಯನ್ನು ಮಾನ್ಯ ಪ್ರಧಾನಮಂತ್ರಿ ಅವರಿಗೆ ಸಲ್ಲಿಸಿದ್ದೇನೆ.
ಆಧರಣೀಯ ಪ್ರಧಾನಮಂತ್ರಿ ಅವರ ಮಾರ್ಗದರ್ಶನ, ವಿಶ್ವಾಸ ಹಾಗೂ ನಿರಂತರ ಸಹಕಾರಕ್ಕಾಗಿ ನಾನು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ. ಜೊತೆಗೆ, ಸಚಿವ ಸಂಪುಟದ ನನ್ನ ಎಲ್ಲ ಗೌರವಾನ್ವಿತ ಸಹೋದ್ಯೋಗಿಗಳು, ಸಚಿವಾಲಯದ ಅಧಿಕಾರಿಗಳು ಹಾಗೂ ಸಿಬ್ಬಂದಿ ಮತ್ತು ನನ್ನೊಂದಿಗೆ ಕೆಲಸ ಮಾಡುವ ಅವಕಾಶ ದೊರೆತ ಎಲ್ಲರಿಗೂ ನಾನು ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ.
ರಾಷ್ಟ್ರಸೇವೆಯೇ ನನ್ನ ಜೀವನದ ಅತ್ಯುನ್ನತ ಆದ್ಯತೆಯಾಗಿದೆ. ಅದಕ್ಕಾಗಿ ನಾನು ಸದಾ ಸಮರ್ಪಿತನಾಗಿರುತ್ತೇನೆ. ಪ್ರಭು ಶ್ರೀಜಗನ್ನಾಥರ ಆಶೀರ್ವಾದದಿಂದ ಮುಂದೆಯೂ ಭಾರತ ಮಾತೆ, ಒಡಿಶಾದ ಜನತೆ ಹಾಗೂ ದೇಶದ ಯುವಜನರ ಆಶಯಗಳನ್ನು ಈಡೇರಿಸಲು ಸಾಧ್ಯವಾದ ಪ್ರತಿಯೊಂದು ರೀತಿಯಲ್ಲೂ ನನ್ನನ್ನು ನಾನು ಸಮರ್ಪಿಸಿಕೊಳ್ಳುತ್ತೇನೆ.
ನಿಮ್ಮ,
ಧರ್ಮೇಂದ್ರ ಪ್ರಧಾನ್

ಪ್ರಧಾನ್ ರಾಜೀನಾಮೆ ಸುದ್ದಿ ಕೇಳಿ ಸ್ವಲ್ಪ ಭಾವುಕಳಾದೆ: ಪ್ರಿಯಾಂಕಾ ಗಾಂಧಿ
ಇದು ಕೇವಲ ಆರಂಭ, ಆದ್ರೂ ನಾನು ಸಂತೋಷಪಡುತ್ತೇನೆ. ಪ್ರಧಾನ್ ರಾಜೀನಾಮೆ ಸುದ್ದಿ ಕೇಳಿ ಸ್ವಲ್ಪ ಭಾವುಕಳಾದೆ, ಏಕೆಂದ್ರೆ ಕಳೆದ 10-12 ವರ್ಷಗಳಲ್ಲಿ ಅನೇಕ ಬಾರಿ ನಮ್ಮ ಯುವಕರು ಯಾವಾಗ ಎಚ್ಚರಗೊಳ್ಳುತ್ತಾರೆ? ಅಂದುಕೊಂಡಿದ್ದೆ ಎಂದು ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
ನಮ್ಮ ದೇಶಕ್ಕೆ ಏನ್ ಮಾಡ್ತಿದ್ದಾರೆ ನೋಡಿ… ಆರ್‌ಎಸ್‌ಎಸ್ ಇಡೀ ಶಿಕ್ಷಣ ವ್ಯವಸ್ಥೆಯನ್ನ, ಪ್ರತಿ ಹುದ್ದೆಯನ್ನ, ಪ್ರತಿ ಉಪಕುಲಪತಿಯ ಸ್ಥಾನವನ್ನ ತುಂಬುತ್ತಿದೆ. ನಮ್ಮ ಪೂರ್ವಜರ ಸಿದ್ಧಾಂತವನ್ನು ದುರ್ಬಲಗೊಳಿಸಲಾಗುತ್ತಿದೆ. ಯುವಜನರ ವಿರುದ್ಧ ಮತ್ತು ಪ್ರತಿಭಟನೆಯಲ್ಲಿ ಧ್ವನಿ ಎತ್ತುವವರ ವಿರುದ್ಧ ಬಲಪ್ರಯೋಗ ಮಾಡಲಾಗುತ್ತಿದೆ. ಇಂದು, ನಮ್ಮ ದೇಶದ ಯುವಕರು ಮಾತನಾಡಿದ್ದಾರೆ ಎಂಬ ಕಾರಣಕ್ಕಾಗಿ ನಾನು ಸಂತಸಪಡುತ್ತೇನೆ. ಯಾರೂ ಯುವ ಧ್ವನಿಯನ್ನ ಅಡಗಿಸಲು ಸಾಧ್ಯವಿಲ್ಲ ಅಂತಲೂ ಹೇಳಿದ್ದಾರೆ.
ಪ್ರಧಾನ್ ರಾಜೀನಾಮೆ – ಅಣ್ಣನಿಗೆ ಧನ್ಯವಾದ ಹೇಳಿದ ಪ್ರಿಯಾಂಕಾ ಗಾಂಧಿ
ನಮ್ಮ ಕಾಂಗ್ರೆಸ್ ಪಕ್ಷ ಸಾಧ್ಯವಾದಷ್ಟು ಪ್ರಬಲ ರೀತಿಯಲ್ಲಿ ವಿದ್ಯಾರ್ಥಿಗಳನ್ನ ಬೆಂಬಲಿಸಲು ಪ್ರಯತ್ನಿಸಿದೆ. ರಾಹುಲ್ ಗಾಂಧಿ ಅವರು ಸಹ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಸುಧಾರಣೆ ವಿಷಯಗಳ ಬಗ್ಗೆ ಮಾತನಾಡುತ್ತಿದ್ದರು. 2 – 3 ವರ್ಷಗಳಿಗೂ ಹೆಚ್ಚು ಕಾಲದಿಂದ ನಿರಂತರವಾಗಿ ಈ ವಿಷಯದ ಬಗ್ಗೆ ದನಿ ಎತ್ತುತ್ತಾ ಬಂದಿದ್ದಾರೆ. ಈ ಮೂಲಕ ವಿದ್ಯಾರ್ಥಿಗಳ ಹಕ್ಕುಗಳಿಗಾಗಿ ಮತ್ತು ನಮ್ಮ ಶಿಕ್ಷಣ ವ್ಯವಸ್ಥೆಯ ಸುಧಾರಣೆಗಾಗಿ ದೇಶಾದ್ಯಂತ ಚಳುವಳಿ ರೂಪಿಸಲು ಪ್ರೇರೇಪಿಸಿದ್ದಾರೆ. ಹಾಗಾಗಿ ರಾಹುಲ್ ಗಾಂಧಿ ಅವರನ್ನ ಅಭಿನಂದಿಸಲು ಬಯಸುತ್ತೇನೆ ಎಂದು ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಪ್ರಜಾಪ್ರಭುತ್ವದ ಗೆಲುವು
ಎಕ್ಸ್‌ನಲ್ಲಿ ಸೋನಂ ವಾಂಗ್ಚುಕ್ ಸಂತಸ
ಉಮರ್ ಖಾಲಿದ್ ಪರ ವಿದ್ಯಾರ್ಥಿನಿ ಪೋಸ್ಟರ್ – ತಪ್ಪೇನಿದೆ? ಅಂತ ಹರಿಪ್ರಸಾದ್ ಸಮರ್ಥನೆ
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ ವಿದ್ಯಾರ್ಥಿನಿಯೊಬ್ಬಳು ಗಲಭೆಕೋರ ಉಮರ್ ಖಾಲಿದ್ ಪರ ಪೋಸ್ಟರ್ ಪ್ರದರ್ಶಿಸಿದ ನಡೆಯನ್ನ ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಸಮರ್ಥಿಸಿಕೊಂಡಿದ್ದಾರೆ.
ಅದ್ರಲ್ಲಿ ತಪ್ಪೇನಿದೆ…? ಉಮರ್ ಖಾಲಿದ್‌ನನ್ನ ಯಾಕೆ 5 ವರ್ಷಗಳ ಕಾಲ ಜೈಲಿನಲ್ಲಿ ಇಟ್ಟಿದ್ದಾರೆ. ಚಾರ್ಜ್ ಶಿಟ್ ಯಾಕೆ ಹಾಕಿಲ್ಲ ಇದೇನು ಪಾಕಿಸ್ತಾನನಾ? ಪಾಕಿಸ್ತಾನದ ಮಾದರಿಯನ್ನ ಈ ಸರ್ಕಾರ ಅನುಸರಿಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಪ್ರಧಾನ್ ರಾಜೀನಾಮೆ – ಬೆಂಗಳೂರು ಫ್ರೀಡಂ ಪಾರ್ಕ್‌ನಲ್ಲಿ ಸಂಭ್ರಮಾಚರಣೆ
ಪ್ರಧಾನ್ ರಾಜೀನಾಮೆ – ಬೆಂಗಳೂರು ಫ್ರೀಡಂ ಪಾರ್ಕ್‌ನಲ್ಲಿ ಸಂಭ್ರಮಾಚರಣೆ, ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು, ಶಿಳ್ಳೆ – ಚಪ್ಪಾಳೆ ಮಳೆ
ಧರ್ಮೆಂದ್ರ ಪ್ರಧಾನ್ ಅಂಥವರು ಸಚಿವರಾಗಿದ್ದು ರಾಷ್ಟ್ರದ ದುರಂತ: ಬಿಕೆ ಹರಿಪ್ರಸಾದ್
ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೆಂದ್ರ ಪ್ರಧಾನ್ ರಾಜೀನಾಮೆ ಕೊಟ್ಟಿದ್ದಾರೆ
ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ವಾಗ್ದಾಳಿ
ಸುದೀರ್ಘ ಪತ್ರ ಬರೆದು ತಮ್ಮ ಸಾಧನೆ ಹೇಳಲು ಹೋಗಿ ನಗೆ ಪಾಟಲಿಗೀಡಾಗಿದ್ದಾರೆ
ರಾಷ್ಟ್ರದ ದುರಂತ ಏನಂದ್ರೆ ಧರ್ಮೆಂದ್ರ ಪ್ರಧಾನ್ ಅಂಥವರು ಸಚಿವರಾದರು
ಪ್ರಧಾನ್ ರಾಜೀನಾಮೆ ಬೆನ್ನಲ್ಲೇ ʻಕಾಕ್ರೋಚ್ʼಗಳ ವಿಜಯೋತ್ಸವ
ವಿದ್ಯಾರ್ಥಿಗಳ ಮೂರು ಬೇಡಿಕೆಗಳಿಗೆ ಒಪ್ಪಿದ ಕೇಂದ್ರ ಸರ್ಕಾರ
- ವಿದ್ಯಾರ್ಥಿಗಳ ಮೇಲಿನ ಎಫ್‌ಐಆರ್ ವಾಪಸ್ ಪಡೆದು, ದೌರ್ಜನ್ಯ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು.
- ಧರ್ಮೇಂದ್ರ ಪ್ರಧಾನ್ ರಾಜೀನಾಮೆ.
- ಮೃತ ವಿದ್ಯಾರ್ಥಿಗಳ ಕುಟುಂಬಕ್ಕೆ ತಲಾ 1 ಕೋಟಿ ಪರಿಹಾರ ಕೊಡಬೇಕು.
ದೇಶದ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಹುದ್ದೆಯಿಂದ ಕೆಳಗಿಳಿಯಲು ನಿರ್ಧರಿಸಿದ್ದೇನೆ: ಧರ್ಮೇಂದ್ರ ಪ್ರಧಾನ್
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ನಡೆಯುತ್ತಿದ್ದ ರಾಷ್ಟ್ರವ್ಯಾಪಿ ಪ್ರತಿಭಟನೆ ನಡುವೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಶನಿವಾರ (ಇಂದು) ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲಿಸಿದ 2 ಪುಟಗಳ ರಾಜೀನಾಮೆ ಪತ್ರವನ್ನು ಧರ್ಮೇಂದ್ರ ಪ್ರಧಾನ್ ತಮ್ಮ ಸೋಷಿಯಲ್ ಮೀಡಿಯಾ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ʻಈ ವಿಚಾರವನ್ನು ರಾಷ್ಟ್ರವಿರೋಧಿ ಶಕ್ತಿಗಳು ಗೊಂದಲ ಸೃಷ್ಟಿಸಲು ಮತ್ತು ತಮ್ಮ ಸ್ವಾರ್ಥಕ್ಕಾಗಿ ದುರುಪಯೋಗಪಡಿಸಿಕೊಳ್ಳದಂತೆ ತಡೆಯುವ ಉದ್ದೇಶದಿಂದ ನಾನು ಈ ನಿರ್ಧಾರ ಕೈಗೊಂಡಿದ್ದೇನೆ. ದೇಶದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಹುದ್ದೆಯಿಂದ ಕೆಳಗಿಳಿಯಲು ನಿರ್ಧರಿಸಿದ್ದೇನೆʼ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಿದ್ದಾರೆ.
ವಿದ್ಯಾರ್ಥಿಗಳ ಪ್ರತಿಭಟನೆಗೆ ಪರಿಹಾರ ಕಂಡುಹಿಡಿಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮತ್ತು ಕಾಕ್ರೋಚ್ ಜನತಾ ಪಾರ್ಟಿ (CJP) ನಡುವೆ ಇಂದು (ಶನಿವಾರ) 3ನೇ ಸುತ್ತಿನ ಮಾತುಕತೆ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ಮಹತ್ವದ ಸಭೆ ನಿಗದಿಯಾಗಿತ್ತು. ಆದ್ರೆ ಅದಕ್ಕೂ ಮುನ್ನವೇ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದು, ಯುವ ಸಮೂಹಕ್ಕೆ ಅತಿದೊಡ್ಡ ಗೆಲುವು ಸಿಕ್ಕಂತಾಗಿದೆ.
ದೆಹಲಿ ನೀಟ್ ಪ್ರತಿಭಟನೆಯಲ್ಲಿದ್ದಾರಾ ಕ್ರಿಮಿನಲ್ಸ್? – ಅಪರಾಧ ಹಿನ್ನೆಲೆಯುಳ್ಳ 2,500 ಮಂದಿ ಭಾಗಿ
ಮೋದಿ ಸೆಲ್ಫಿ ವಿಡಿಯೋ – 303 ಮಿಲಿಯನ್ ವೀಕ್ಷಣೆ
ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ತೆಗೆದುಕೊಂಡ ಕ್ರಮಗಳ ಬಗ್ಗೆ ಪ್ರಧಾನಿ ಮೋದಿ ಇನ್‌ಸ್ಟಾಗ್ರಾಮ್ ಅಪ್ಲೋಡ್ ಮಾಡಿದ ಸೆಲ್ಪಿ ವಿಡಿಯೋಗೆ ವ್ಯಾಪಕ ಪ್ರತಿಕ್ರಿಯಿ ಸಿಕ್ಕಿದೆ. ಅವರ ಈ ವಿಡಿಯೋಗೆ 303 ಮಿಲಿಯನ್ ವೀಕ್ಷಣೆ ಸಿಕ್ಕಿದೆ. ಫೀಫಾ ವಿಶ್ವಕಪ್ ಸಮಯದಲ್ಲಿ ದಕ್ಷಿಣಾ ಕೋರಿಯಾದ ಸಂಗೀತ ಗುಂಪಿನೊಂದಿಗೆ ಪ್ರಧಾನಿ ಮೋದಿ ಮಾಡಿದ್ದ ರೀಲ್ ಗೆ 300 ಮಿಲಿಯನ್ ವೀಕ್ಷಣೆ ಬಂದಿತ್ತು. ಈಗ ಸೆಲ್ಪಿ ವಿಡಿಯೋ 303 ಮಿಲಿಯನ್ ತಲುಪುವ ಮೂಲಕ ಹೊಸ ದಾಖಲೆ ಸೃಷ್ಠಿಸಿದೆ.
ಬಿಹಾರದ ಚಪ್ರಾದಲ್ಲಿ ಕಲ್ಲು ತೂರಾಟ
ಬಿಹಾರದ ಚಪ್ರಾದಲ್ಲಿ ಕಲ್ಲು ತೂರಾಟ
ನೀಟ್ ವಿಷಯದ ಕುರಿತು ನಡೆದ ಪ್ರತಿಭಟನೆ ವೇಳೆ ಕಲ್ಲು ತೂರಾಟ
ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದಿದ್ದಾರೆ ಪೊಲೀಸರು
ಜಂತರ್ ಮಂತರ್‌ಗೆ ಊಟ ತಲುಪದಂತೆ ದೆಹಲಿ ಪೊಲೀಸರಿಂದ ತಡೆ – ಸಿಜೆಪಿ ಗಂಭೀರ ಆರೋಪ
ದೆಹಲಿಯಲ್ಲಿನ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನಾಕಾರರಿಗೆ ಊಟ ತಲುಪದಂತೆ ದೆಹಲಿ ಪೊಲೀಸರು ತಡೆಯುತ್ತಿದ್ದಾರೆ ಎಂದು ಸಿಜೆಪಿ (ಕಾಕ್ರೋಚ್ ಜನತಾ ಪಾರ್ಟಿ) ಗಂಭೀರ ಆರೋಪ ಮಾಡಿದೆ.
ಪ್ರತಿಭಟನಾಕಾರರಿಗೆ ಆಹಾರ ತಡೆದ ಆರೋಪವನ್ನು ದೆಹಲಿ ಪೊಲೀಸರು ನಿರಾಕರಿಸಿದ್ದಾರೆ. ಇದು ಸುಳ್ಳು, ಆಧಾರರಹಿತ ಮತ್ತು ದಾರಿತಪ್ಪಿಸುವ ಆರೋಪಗಳು ಎಂದು ಕರೆದಿದ್ದಾರೆ.

ಓರ್ವ ಮಹಿಳಾ ಪ್ರತಿಭಟನಾಗಾರ್ತಿ ಸಾವಾಗಿದೆ ಅನ್ನೋದು ಸುಳ್ಳು – ದೆಹಲಿ ಪೊಲೀಸ್
ಜಂತರ್ ಮಂತರ್ ಪ್ರತಿಭಟನೆ ವೇಳೆ ಓರ್ವ ಮಹಿಳಾ ಪ್ರತಿಭಟನಾಗಾರ್ತಿ ಸಾವಾಗಿದೆ ಅನ್ನೋ ಸುಳ್ಳು ಸುದ್ದಿ ಹರಡಲಾಗಿದೆ
ಈ ಮಾಹಿತಿ ಸಂಪೂರ್ಣ ಸುಳ್ಳು
ಕೇಂದ್ರ ಸರ್ಕಾರ ಪ್ರತಿಭಟನೆ ಒಕ್ಕೆಲೆಬಿಸಲು ಪ್ರಯತ್ನ ಮಾಡುತ್ತಿದೆ ವಿಡಿಯೋ ಹಂಚಿಕೊಳ್ಳಲಾಗಿತ್ತು
ಪಾಕಿಸ್ತಾನ ಮೂಲದ ಕೆಲವು ಖಾತೆಗಳಿಂದ ಭಯದ ವಾತಾವರಣ ಸೃಷ್ಟಿಸಲಾಗುತ್ತಿದೆ
ಇಂತಹ 400 ಖಾತೆಗಳನ್ನು ನಿರ್ಬಂಧಿಸಿದ್ದೇವೆ
ಆರ್ಮಿಯನ್ನ ದೆಹಲಿಯಲ್ಲಿ ನಿಯೋಜಿಸಲಾಗುತ್ತಿದೆ

ದೆಹಲಿ ಪೊಲೀಸರಿಂದ ಮಹತ್ವದ ಸುದ್ದಿಗೋಷ್ಠಿ – ಪ್ರತಿಭಟನೆ ವಿಚಾರದಲ್ಲಿ ಸೋಶಿಯಲ್ ಮಿಡಿಯಾ ದುರ್ಬಳಕೆ
ಪ್ರತಿಭಟನೆ ವಿಚಾರದಲ್ಲಿ ಸೋಶಿಯಲ್ ಮಿಡಿಯಾ ದುರ್ಬಳಕೆ ಮಾಡಿಕೊಂಡಿದೆ
ತಪ್ಪು ಮಾಹಿತಿಯನ್ನಯ ಹರಡಲಾಗುತ್ತಿದೆ
ಈ ತಪ್ಪು ಮಾಹಿತಿ ವ್ಯಾಪಕವಾಗಿ ವೈರಲ್ ಆಗುತ್ತಿದೆ
ಇಂತಹ ಮಾಹಿತಿ ಫಾರ್ವರ್ಡ್ ಮಾಡುವ ಮುನ್ನ ಎಚ್ಚರಿಕೆ ಇರಲಿ
ಫೇಕ್ ನ್ಯೂಸ್, ಎಐ ವಿಡಿಯೋ ಬಗ್ಗೆ ನಾವು ನಿಗ್ರಹ ವಹಿಸುತ್ತಿದ್ದೇವೆ
ʻನನಗೆ ಟೈಫಾಯ್ಡ್ ಆಗಿದೆ, ಆದ್ರೂ ಹೋರಾಟ ನಿಲ್ಲಲ್ಲʼ – ದೀಪ್ಕೆ
ನೀಟ್ ಪರೀಕ್ಷೆ ಅಕ್ರಮ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣವನ್ನು ಖಂಡಿಸಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಯ ನಡುವೆ, ಕಾಕ್ರೋಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭಿಜಿತ್ ದೀಪ್ಕೆ ಅವರಿಗೆ ಟೈಫಾಯ್ಡ್ ಇರುವುದು ದೃಢಪಟ್ಟಿದೆ. ಆದರೂ ತಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸೋಷಿಯಲ್ ಮೀಡಿಯಾ ಎಕ್ಸ್ (X) ನಲ್ಲಿ ವೀಡಿಯೋ ಹಂಚಿಕೊಂಡಿರುವ ದೀಪ್ಕೆ, ತಮ್ಮ ಆರೋಗ್ಯ ಸಮಸ್ಯೆ ಪ್ರತಿಭಟನೆಗೆ ಯಾವುದೇ ಅಡ್ಡಿಯಾಗುವುದಿಲ್ಲ ಎಂದು ಹೇಳಿದ್ದಾರೆ. ದೇಶದಾದ್ಯಂತ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವ ಬೆಂಬಲಿಗರಿಗೆ ಅವರು ಧನ್ಯವಾದ ತಿಳಿಸಿದ್ದಾರೆ.
ಬದಲಾಗದ ಸಿಜೆಪಿ ನಿಲುವು
ಧರ್ಮೇಂದ್ರ ಪ್ರಧಾನ್ ರಾಜೀನಾಮೆ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಸಿಜೆಪಿ ಸ್ಪಷ್ಟಪಡಿಸಿದೆ. ಶಿಕ್ಷಣ ಸಚಿವರ ರಾಜೀನಾಮೆ ತಮ್ಮ ಅನಿವಾರ್ಯ ಬೇಡಿಕೆ ಎಂದು ಪಕ್ಷ ಪುನರುಚ್ಚರಿಸಿದೆ.
ಇದರ ಜೊತೆಗೆ, ಪ್ರತಿಭಟನಾಕಾರರ ವಿರುದ್ಧ ನಡೆದಿತ್ತೆಂದು ಆರೋಪಿಸಲಾಗಿರುವ ಪೊಲೀಸ್ ಕ್ರಮಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕೆಂಬ ಬೇಡಿಕೆಯನ್ನು ಸಹ ಸಿಜೆಪಿ ಮುಂದಿಟ್ಟಿದೆ.

ಯಾವ 2 ಬೇಡಿಕೆಗಳಿಗೆ ಕೇಂದ್ರ ಒಪ್ಪಿಗೆ?
ಶುಕ್ರವಾರದ ಸಿಜೆಪಿ ಪ್ರತಿನಿಧಿಗಳೊಂದಿಗೆ ನಡೆಸಿದ ಸಭೆಯಲ್ಲಿ ಕೇಂದ್ರ ಸರ್ಕಾರ ತನ್ನ ನಿಲುವಿನಲ್ಲಿ ಕೆಲಮಟ್ಟಿಗೆ ಸಡಿಲಿಕೆ ತೋರಿದ್ದು, ಸಿಜೆಪಿ ಮುಂದಿಟ್ಟಿದ್ದ 2 ಪ್ರಮುಖ ಬೇಡಿಕೆಗಳನ್ನು ಒಪ್ಪಿಕೊಂಡಿದೆ.
- ಜುಲೈ 20ರಂದು ನಡೆದ ‘ಸಂಸತ್ ಚಲೋ’ ಶಾಂತಿಯುತ ಪ್ರತಿಭಟನೆಯಲ್ಲಿ ಭಾಗವಹಿಸಿದ್ದವರ ವಿರುದ್ಧ ಯಾವುದೇ ಎಫ್‌ಐಆರ್ ದಾಖಲಿಸಬಾರದು. ಜೊತೆಗೆ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ 1 ಕೋಟಿ ರೂ. ಪರಿಹಾರ ನೀಡಲು ಒಪ್ಪಿಕೊಂಡಿದೆ.
- ಇದಲ್ಲದೆ, ಸಚಿವರ ನಿವಾಸದ ಬದಲು ಕಾನ್ಸ್ಟಿಟ್ಯೂಷನ್ ಕ್ಲಬ್‌ನಲ್ಲಿ ಮಾತುಕತೆ ನಡೆಸುವ ಸಿಜೆಪಿ ಬೇಡಿಕೆಯನ್ನು ಸಹ ಸರ್ಕಾರ ಅಂಗೀಕರಿಸಿದೆ
ಪ್ರಧಾನ್ ರಾಜೀನಾಮೆ ಕುರಿತು ಇಂದು ಉತ್ತರ?
ಶುಕ್ರವಾರ ನಡೆದ 2ನೇ ಸುತ್ತಿನ ಸಭೆಯ ಬಳಿಕ ಸಿಜೆಪಿ ನಾಯಕ ಅಶುತೋಷ್ ರಂಕಾ ಮಾತನಾಡಿ, ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಬೇಡಿಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಶನಿವಾರ ಮಧ್ಯಾಹ್ನದೊಳಗೆ ತನ್ನ ನಿರ್ಧಾರ ತಿಳಿಸುವುದಾಗಿ ಹೇಳಿದೆ ಎಂದು ತಿಳಿಸಿದ್ದಾರೆ.
ಇನ್ನೊಂದೆಡೆ, ಕೇಂದ್ರ ಸಚಿವ ಜೆ.ಪಿ. ನಡ್ಡಾ ಕೂಡ ಮತ್ತೊಂದು ಸುತ್ತಿನ ಸಭೆ ನಡೆಯಲಿದ್ದು, ಸರ್ಕಾರದ ಅಂತಿಮ ನಿಲುವನ್ನು ಬಳಿಕ ಅಧಿಕೃತವಾಗಿ ತಿಳಿಸಲಾಗುವುದು ಎಂದು ದೃಢಪಡಿಸಿದ್ದಾರೆ.

ಇಂದು ರಾಜೀನಾಮೆ ಕೊಡ್ತಾರಾ ಪ್ರಧಾನ್? – ಮಧ್ಯಾಹ್ನ 3 ಗಂಟೆಗೆ ಸಿಜೆಪಿ-ಕೇಂದ್ರದ ಹೈವೋಲ್ಟೇಜ್ ಸಭೆ
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಪ್ರತಿಭಟನೆಗೆ ಪರಿಹಾರ ಕಂಡುಹಿಡಿಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮತ್ತು ಕಾಕ್ರೋಚ್ ಜನತಾ ಪಾರ್ಟಿ (CJP) ನಡುವೆ ಇಂದು (ಶನಿವಾರ) 3ನೇ ಸುತ್ತಿನ ಮಾತುಕತೆ ನಡೆಯಲಿದೆ.
ಇಂದು ಮಧ್ಯಾಹ್ನ 3 ಗಂಟೆ ವೇಳೆಗೆ ಸಭೆ ನಡೆಯಲಿದೆ. ಹಲವು ದಿನಗಳ ಚರ್ಚೆ ಮತ್ತು ಸಂಧಾನದ ಬಳಿಕ ಈ ಸಭೆ ನಿರ್ಣಾಯಕ ಹಂತ ತಲುಪಿದ್ದು, ಕೇಂದ್ರ ಸರ್ಕಾರದ ಮುಂದಿನ ನಿಲುವಿನ ಮೇಲೆ ಎಲ್ಲರ ಗಮನ ನೆಟ್ಟಿದೆ.
ಈ ಸಭೆ ವಿಶೇಷ ಮಹತ್ವ ಪಡೆದುಕೊಂಡಿರುವುದಕ್ಕೆ ಕಾರಣ, ಸಿಜೆಪಿ ಮುಂದಿಟ್ಟಿದ್ದ ಮೂರು ಪ್ರಮುಖ ಬೇಡಿಕೆಗಳಲ್ಲಿ ಎರಡನ್ನ ಕೇಂದ್ರ ಸರ್ಕಾರ ಈಗಾಗಲೇ ಒಪ್ಪಿಕೊಂಡಿದ್ದು, ಉಳಿದಿರುವ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕುರಿತ ಬೇಡಿಕೆಗೆ ಮಾತ್ರ ಹೆಚ್ಚುವರಿ ಸಮಯ ಕೋರಿರುವುದಾಗಿದೆ.
ನೀಟ್ ಪ್ರತಿಭಟನೆ ವೇಳೆ ಉಮರ್ ಖಾಲಿದ್ ಪರ ಪೋಸ್ಟರ್ – ಕೇಸ್ ದಾಖಲಿಸಲು ಕಾನೂನು ತಜ್ಞರ ಮೊರೆಹೋದ ಪೊಲೀಸ್
ʻಕಾಕ್ರೋಚ್ʼ ಪ್ರತಿಭಟನೆ ಹಿನ್ನೆಲೆ ದೆಹಲಿಯಲ್ಲಿ 18 ಮೆಟ್ರೋ ನಿಲ್ದಾಣಗಳ ಸೇವೆ ಸ್ಥಗಿತ
ಮೆಟ್ರೋ, ರಸ್ತೆ, ಇಂಟರ್ನೆಟ್, ಅಂಗಡಿ, ಆಹಾರ ಎಲ್ಲವನ್ನೂ ನಿರ್ಬಂಧಿಸಿದ ಮೋದಿ ಜೀಗೆ ಪೇಪರ್ ಲೀಕ್ ನಿರ್ಬಂಧಿಸಲು ಆಗಲಿಲ್ಲ: ರಾಹುಲ್ ಲೇವಡಿ
ನೀಟ್ ಪರೀಕ್ಷೆಯಲ್ಲಿನ ಅಕ್ರಮಗಳನ್ನು ಪ್ರಶ್ನಿಸಿ ಧಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸಿ ಸರ್ಕಾರದ ವಿರುದ್ದ CJP ನೇತೃತ್ವದ ವಿದ್ಯಾರ್ಥಿ ಪ್ರತಿಭಟನೆಗಳು ಬೃಹತ್ ರೂಪ ಪಡೆದುಕೊಳ್ಳುತ್ತಿದ್ದಂತೆ ದೆಹಲಿಯಲ್ಲಿ ಮೆಟ್ರೋ, ಇಂಟರ್ನೆಟ್, ಅಂಗಡಿ ಮುಂಗಟ್ಟುಗಳ, ರಸ್ತೆ, ಆಹಾರ ಎಲ್ಲದರ ಮೇಲೂ ನಿರ್ಬಂಧ ವಿಧಿಸಿದ ಪ್ರದಾನಿ ಮೋದಿ ಜೀ ಅವರಿಗೆ ಪೇಪರ್ ಲೀಕ್ ನಿರ್ಬಂಧಿಸಲು ಆಗಲಿಲ್ಲ ಎಂದು ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ಲೇವಡಿ ಮಾಡಿದ್ದಾರೆ.
ಈ ಕುರಿತು X ಪೋಸ್ಟ್ ಹಂಚಿಕೊಂಡಿದ್ದು, ತಮ್ಮ ಹಕ್ಕುಗಳನ್ನು ಕೇಳುತ್ತಿರುವ ವಿದ್ಯಾರ್ಥಿಗಳನ್ನು ಹತ್ತಿಕ್ಕಲು ಸರ್ಕಾರ ಅತ್ಯಂತ ಕ್ರೂರ ಕ್ರಮಗಳನ್ನ ಕೈಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಮೆಟ್ರೋ ಬಂದ್, ರಸ್ತೆ ಬಂದ್, ಅಂಗಡಿ ಬಂದ್, ಇಂಟರ್ನೆಟ್ ಬಂದ್, ಆಹಾರ ಬಂದ್ ಮಾಡುತ್ತಿದೆ. ಆದರೆ ಅವರು ಮುಚ್ಚಲು ಸಾಧ್ಯವಾಗದ ಒಂದೇ ಒಂದು ವಿಷಯವಿದೆ, ಶ್ರೀ ಮೋದಿ – ʻಪತ್ರಿಕೆ ಸೋರಿಕೆʼ. ಎಂದು ಬರೆದುಕೊಂಡಿದ್ದಾರೆ.
ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಪಡೆಯೋಕೆ ಮೋದಿ ಏಕೆ ಹೆದರುತ್ತಿದ್ದಾರೆ? – ಪ್ರಿಯಾಂಕ್ ಖರ್ಗೆ
ಪ್ರಧಾನಿ ಮೋದಿ ವಿದ್ಯಾರ್ಥಿಗಳ ಕ್ಷಮೆಯಾಚಿಸಬೇಕು – ಮತ್ತೊಮ್ಮೆ 3 ಬೇಡಿಕೆ ಪ್ರಸ್ತಾಪಿಸಿದ ರಾಹುಲ್ ಗಾಂಧಿ
`ಕಾಕ್ರೋಚ್ʼಗಳ 3 ಮುಖ್ಯ ಬೇಡಿಕೆಗಳೇನು?
- ವಿದ್ಯಾರ್ಥಿಗಳ ಮೇಲಿನ ಎಫ್‌ಐಆರ್ ವಾಪಸ್ ಪಡೆದು, ದೌರ್ಜನ್ಯ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು.
- ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು.
- ಮೃತ ವಿದ್ಯಾರ್ಥಿಗಳ ಕುಟುಂಬಕ್ಕೆ ತಲಾ 1 ಕೋಟಿ ಪರಿಹಾರ ಕೊಡಬೇಕು.

ಕಾಂಗ್ರೆಸ್ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಮುಂದಾಗಿದೆ: ಯದುವೀರ್ ಒಡೆಯರ್
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಕುರಿತು ಮೈಸೂರಿನಲ್ಲಿ ಸಂಸದ ಸಂಸದ ಯದುವೀರ್ ಒಡೆಯರ್ ಪ್ರತಿಕ್ರಿಯಿಸಿದ್ದಾರೆ.
ಕಾಂಗ್ರೆಸ್ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಮುಂದಾಗಿದೆ. ನೀಟ್ ಪ್ರಶ್ನೆ ಪತ್ರಿಕೆ ಬಹಿರಂಗ ಪ್ರಕರಣವನ್ನ ಕೇಂದ್ರ ಗಂಭೀರವಾಗಿ ಪರಿಗಣಿಸಿದೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಮರುಪರೀಕ್ಷೆ ನಡೆದು ಫಲಿತಾಂಶವೂ ಪ್ರಕಟವಾಗಿದೆ. ಆದರೂ ಇದೇ ವಿಚಾರ ಮುಂದಿಟ್ಟುಕೊಂಡು ಕಾಂಗ್ರೆಸ್ ಅರಾಜಕತೆ ಸೃಷ್ಟಿಸಲು ಹೊರಟಿದೆ. ಪ್ರತಿಭಟನೆ ಮೂಲಕ ದಿಕ್ಕು ತಪ್ಪಿಸುವ ಕೆಲಸವಾಗಿದೆ. ಇದು ಕಾಂಗ್ರೆಸ್‌ನ ವ್ಯವಸ್ಥಿತ ಷಡ್ಯಂತ್ರವಾಗಿದೆ ಎಂದು ಕಿಡಿಕಾರಿದರು.

ಕಾಕ್ರೋಚ್‌ಗಳ ಜೊತೆ ಪ್ರತಿಭಟನೆಗೆ ಧುಮುಕಿದ ಅಸ್ಸಾಂ ಸಚಿವರ ಪುತ್ರಿ
ಕಾಕ್ರೋಚ್ ಜನತಾ ಪಾರ್ಟಿ ಆರಂಭಿಸಿರುವ ಪ್ರತಿಭಟನೆಯ ಕಿಚ್ಚು ದೇಶದೆಲ್ಲೆಡೆ ಹಬ್ಬಿದೆ. ಅಸ್ಸಾಂನ ಗುವಾಹಟಿಯ ಚಾಚಲ್‌ನಲ್ಲೂ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದೆ. ಪ್ರತಿಭಟನೆಯಲ್ಲಿ ಅಸ್ಸಾಂ ಕಂದಾಯ ಸಚಿವ ಕೇಶಬ್ ಮಹಾಂತ ಅವರ ಪುತ್ರಿ ದಿಬಿಸಾ ಮಹಾಂತ್ ಭಾಗವಹಿಸಿದ್ದಾರೆ. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.
ಪ್ರತಿಭಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅದರಲ್ಲಿ ಅವರು ಫಲಕಗಳನ್ನು ಹಿಡಿದು, ಶಿಕ್ಷಣ ಸಚಿವ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಘೋಷಣೆಗಳನ್ನು ಕೂಗುತ್ತಿರುವುದು ಸೆರೆಯಾಗಿದೆ.
ಕೇಶಬ್ ಮಹಾಂತ್ ಅವರು ಅಸ್ಸಾಂ ಗಣ ಪರಿಷತ್‌ನ (ಎಜಿಪಿ) ಹಿರಿಯ ನಾಯಕರಾಗಿದ್ದಾರೆ. ಅಲ್ಲದೇ ಅಸ್ಸಾಂನಲ್ಲಿ ಎಜಿಪಿ – ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರ ಆಡಳಿತದಲ್ಲಿದೆ. ಹೀಗಿದ್ದು ಸಚಿವರ ಮಗಳು ಪ್ರತಿಭಟನೆಯಲ್ಲಿ ಭಾಗಿಯಾಗಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

`ಕಾಕ್ರೋಚ್’ ಗಳ ಬೆಂಬಲಕ್ಕೆ ನಿಂತ ನಟಿ ಜ್ಯೋತಿಕಾ
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಹಿನ್ನೆಲೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಖ್ಯಾತ ತಮಿಳು ನಟಿ ಜ್ಯೋತಿಕಾ ಆಗ್ರಹಿಸಿದ್ದಾರೆ. ಈ ಕುರಿತು ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡದಿದ್ರೆ ಕಠಿಣ ನಿಲುವು: ರಂಕಾ
ಇಂದು ಕೇಂದ್ರ ಸರ್ಕಾರದೊಂದಿಗೆ 3ನೇ ಸುತ್ತಿನ ಸಭೆ ನಡೆಸುವುದಕ್ಕೆ ಮುನ್ನ ಕಾಕ್ರೋಚ್ ಜನತಾ ಪಕ್ಷದ ರಾಷ್ಟ್ರೀಯ ವಕ್ತಾರ ಅಶುತೋಷ್ ರಂಕಾ ಮತ್ತೆ ಕಟ್ಟುನಿಟ್ಟಿನ ಎಚ್ಚರಿಕೆ ರವಾನಿಸಿದ್ದಾರೆ. ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ರೆ ನಾವು ಕಠಿಣ ನಿಲುವು ತೆಗೆದುಕೊಳ್ಳಬೇಕಾಗುತ್ತದೆ. ಈ ರೀತಿಯ ಸಭೆಗಳನ್ನ ನಡೆಸುವುದರಲ್ಲಿ ಯಾವುದೇ ಅರ್ಥವೂ ಇಲ್ಲ ಎಂದೂ ಹೇಳಿದ್ದಾರೆ.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ (NEET Question Paper Leak) ಪ್ರಕರಣದಲ್ಲಿನ ಅವ್ಯವಹಾರ ಪ್ರಶ್ನಿಸಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಕಾಕ್ರೋಚ್ ಜನತಾ ಪಾರ್ಟಿಯ (CJP) ನೇತೃತ್ವದಲ್ಲಿ ಭಾರಿ ಮಟ್ಟದಲ್ಲಿ ಹೋರಾಟ ನಡೆಯುತ್ತಿದೆ. ಈಗಾಗಲೇ ಪರೀಕ್ಷೆಗಳಲ್ಲಿನ ಅಕ್ರಮಗಳನ್ನು ಸರಿಪಡಿಸಲು ಕೇಂದ್ರ ಸರ್ಕಾರ ಕ್ರಮಕ್ಕೆ ಮುಂದಾಗಿದ್ದು, CJP ಜೊತೆಗೆ 2 ಸುತ್ತಿನ ಮಾತುಕತೆ ನಡೆಸಿದೆ.
ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಆಗಲೇಬೇಕೆಂದು ಇಂದು ಸಿಜೆಪಿ ನೀಡಿರುವ ಡೆಡ್‌ಲೈನ್ ಅಂತ್ಯವಾಗಲಿದ್ದು, ಮಹತ್ವದ ನಿರ್ಧಾರ ಹೊರಬೀಳುವ ಸಾಧ್ಯತೆಯಿದೆ. ಇನ್ನು, ದೆಹಲಿಯಲ್ಲಿ ಪ್ರತಿಭಟನೆಗಳು ಇನ್ನಷ್ಟು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಬಿಗಿ ಭದ್ರತೆಯ ಕ್ರಮ ಕೈಗೊಳ್ಳಲಾಗಿದೆ. ಮೆಟ್ರೋ ಸಂಪರ್ಕಗಳನ್ನು ಸಹ ಸ್ಥಗಿತಗೊಳಿಸಲಾಗಿದೆ, ಜೊತೆಗೆ ವೀಕೆಂಡ್‌ನಲ್ಲಿ ರಾತ್ರಿ 8 ಗಂಟೆ ಬಳಿಕ ಮದ್ಯದ ಅಂಗಡಿಗಳನ್ನ ಬಂದ್ ಮಾಡುವಂತೆ ಸ್ಥಳೀಯ ಆಡಳಿತ ಸೂಚಿಸಿದೆ.
