ಬೆಂಗಳೂರು: ಕೆಪಿಸಿಸಿ ವತಿಯಿಂದ ನಗರದ ಅರಮನೆ ಮೈದಾನದ ಗಾಯತ್ರಿ ವಿಹಾರ್‌ನಲ್ಲಿ ಇಂದು ಪಂಡಿತ್ ಜವಾಹರ್ ಲಾಲ್ ನೆಹರು ಜನ್ಮ ದಿನಾಚರಣೆ ಹಾಗೂ ಸದಸ್ಯತ್ವ ನೋಂದಣಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಭಾಷಣ ಆರಂಭಿಸುತ್ತಿದ್ದಂತೆ ಬೆಂಬಲಿಗರು ಡಿಕೆ, ಡಿಕೆ ಎಂದು ಘೋಷಣೆ ಕೂಗಿದ್ದಾರೆ. ಘೋಷಣೆ ಕೂಗಬೇಡಿ ಎಂದು ಬೆಂಬಲಿಗರಿಗೆ ಪದೇ ಪದೇ ಹೇಳಿದರು ನಿಲ್ಲಿಸದಿದ್ದಾಗ, ಡಿಕೆ ಅಂತ ಘೋಷಣೆ ಕೂಗಿವದರು ಪಕ್ಷ ದ್ರೋಹಿಗಳು ಹೊರಗೆ ಹೋಗಿ ಎಂದು ಬೆಂಬಲಿಗರ ವಿರುದ್ಧ ಡಿಕೆಶಿ ಗರಂ ಆಗಿದ್ದಾರೆ.
Advertisement
ಡಿ.ಕೆ ಶಿವಕುಮಾರ್ ಭಾಷಣ ಆರಂಭಿಸುತ್ತಿದ್ದಂತೆ ಡಿಕೆ, ಡಿಕೆ ಎಂದು ಘೋಷಣೆ ಕೇಳಿಬಂತು. ಡಿಕೆಶಿ ಎಷ್ಟೆ ಹೇಳಿದರು ಬೆಂಬಲಿಗರು ಮಾತ್ರ ಘೋಷಣೆ ಕೂಗುವುದನ್ನು ನಿಲ್ಲಿಸಲಿಲ್ಲ. ಪದೇ ಪದೇ ಹೇಳಿ ಸುಸ್ತಾದ ಡಿಕೆಶಿ, ಯಾವ ಡಿಕೆ, ಡಿಕೆನೂ ಇಲ್ಲಾ ಏನು ಇಲ್ಲಾ ಇಲ್ಲಿ ವ್ಯಕ್ತಿ ಪೂಜೆ ಇಲ್ಲಾ. ಪಕ್ಷದ ಪೂಜೆ ಅಷ್ಟೆ ಎಂದು ಸಿಡಿಮಿಡಿಗೊಂಡರು. ಇದನ್ನೂ ಓದಿ: ಮರಿ ಖರ್ಗೆ ಹೆಸರು ಗಂಡೋ, ಹೆಣ್ಣೋ ಎಂಬ ಕ್ಲಾರಿಟಿ ಇಲ್ಲ: ಪ್ರತಾಪ್ ಸಿಂಹ
Advertisement
Advertisement
ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಗರು ಸಮಾಜವನ್ನು ಕತ್ತರಿಯ ರೀತಿ ಕತ್ತರಿಸುತ್ತಿದ್ದಾರೆ. ಕಾಂಗ್ರೆಸ್ಸಿಗರು ಸೂಜಿ ರೀತಿಯಲ್ಲಿ ಈ ಸಮಾಜವನ್ನು ಹೊಲಿಯಬೇಕು. 2023ಕ್ಕೆ ಮತ್ತೆ ವಿಧಾನ ಸೌಧದ ಮೇಲೆ ಕಾಂಗ್ರೆಸ್ ಧ್ವಜ ಹಾರಿಸಬೇಕು. ಆ ನಿಟ್ಟಿನಲ್ಲಿ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಮುಂದಾಗಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಸದಸ್ಯತ್ವ ಮಾಡಿಸೋಣ. ಬೋಗಸ್ ಸದಸ್ಯತ್ವ ಮಾಡಿಸುವುದು ಬೇಡ. ಸುಮಾರು 50ಲಕ್ಷ ಹೊಸ ಕಾಂಗ್ರೆಸ್ ಸದಸ್ಯತ್ವ ಆಗಬೇಕು ಎಂದು ಕೈ ಕಾರ್ಯಕರ್ತರಿಗೆ ಕರೆ ನೀಡಿದರು. ಇದನ್ನೂ ಓದಿ: ಬಿಟ್ ಕಾಯಿನ್ ಹಗರಣದ ಹಿಂದೆ ಯಾರ‍್ಯಾರಿದ್ದಾರೆ ಖಂಡಿತವಾಗಿಯೂ ಬಲಿ ಹಾಕ್ತೇವೆ: ಬಸವರಾಜ ಬೊಮ್ಮಾಯಿ
Advertisement