ಬೆಂಗಳೂರು: ಸಿಎಲ್‌ಪಿ ಸಭೆ ಬಳಿಕ ಸಿದ್ದರಾಮಯ್ಯ (Siddaramaiah) ಹಾಗೂ ಡಿಕೆ ಶಿವಕುಮಾರ್ (DK Shivakumar) ಹೊರಬಂದ ವೇಳೆ ವಿಧಾನಸೌಧದ ಬಳಿ ಡಿಕೆ ಬೆಂಬಲಿಗರು ‘ಡಿಕೆ…ಡಿಕೆ’ ಜಯಘೋಷ ಕೂಗುವ ಮೂಲಕ ಅಬ್ಬರಿಸಿದ್ದಾರೆ.
ಸಿಎಲ್‌ಪಿ ಸಭೆ (CLP Meet) ಬಳಿಕ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಒಂದೇ ಕಾರಿನಲ್ಲಿ ಲೋಕಭವನಕ್ಕೆ ತೆರಳಿದ್ದಾರೆ. ಲೋಕಭವನಕ್ಕೆ ತೆರಳುವಾಗ ವಿಧಾನಸೌಧದ ಉತ್ತರ ಗೇಟ್‌ನಲ್ಲಿ ಡಿಕೆ ಬೆಂಬಲಿಗರು ಭರ್ಜರಿ ಜಯಘೋಷ ಕೂಗಿದ್ದಾರೆ. ಮುಂದಿನ ಮುಖ್ಯಮಂತ್ರಿ ಡಿಕೆ ಎಂದು ಜೈಕಾರ ಹಾಕಿದ್ದಾರೆ. ಇದನ್ನೂ ಓದಿ: ಸಿಎಲ್‌ಪಿ ಸಭೆಯಲ್ಲಿ ಕೈಗೊಂಡ 3 ನಿರ್ಣಯಗಳೇನು?
ಸಿದ್ದರಾಮಯ್ಯರ ಮುಂದೆಯೇ ಡಿಕೆ ಬೆಂಗಲಿಗರು ಜೈಕಾರ ಕೂಗಿದ್ದಾರೆ. ಈ ವೇಳೆ ಸಿದ್ದರಾಮಯ್ಯ ಮೌನವಾಗಿ ಕುಳಿತಿದ್ದರು. ಸದ್ಯ ಲೋಕಸಭೆಗೆ ತೆರಳಿರುವ ಡಿಕೆ ಶಿವಕುಮಾರ್ ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ. ಇದನ್ನೂ ಓದಿ: ಕೆರೆಗೆ ಈಜಲು ಹೋಗಿದ್ದ ಮೂವರು ಬಾಲಕರು ನೀರುಪಾಲು
ಶಾಸಕಾಂಗ ಪಕ್ಷದ ನಾಯಕನಾಗಿ ಡಿ.ಕೆ.ಶಿವಕುಮಾರ್ ಆಯ್ಕೆಯಾಗಿದ್ದಾರೆ. ವಿಧಾನಸೌಧದಲ್ಲಿ ನಡೆದ ಸಿಎಲ್‌ಪಿ ಸಭೆಯಲ್ಲಿ ಸಿದ್ದರಾಮಯ್ಯ ಆರಂಭಿಕ ಮಾತುಗಳನ್ನಾಡಿದರು. ಈ ವೇಳೆ ನಿರ್ಣಯ ಮಂಡಿಸಿದರು. ಸಿಎಲ್‌ಪಿ ನಾಯಕನಾಗಿ ಡಿಕೆಶಿ ಹೆಸರನ್ನು ಸಿದ್ದರಾಮಯ್ಯ ಅವರು ಪ್ರಸ್ತಾಪಿಸಿದರು. ಅದಕ್ಕೆ ಜಿ.ಪರಮೇಶ್ವರ್ ಅವರು ಅನುಮೋದಿಸಿದರು. ಕೊನೆಗೆ ಡಿಕೆಶಿ ಆಯ್ಕೆಗೆ ಶಾಸಕರು ಕೂಡ ಕೈ ಎತ್ತುವ ಮೂಲಕ ಅನುಮೋದನೆ ನೀಡಿದರು. ಇದನ್ನೂ ಓದಿ: ಜನಮನದಲ್ಲಿ ಉಳಿಯುವ ನಾಯಕನಿಗೆ ವಿದಾಯ ಇರಲ್ಲ: ಸಿದ್ದರಾಮಯ್ಯ ಆಡಳಿತ ನೆನೆದು ಹೆಬ್ಬಾಳ್ಕರ್ ಭಾವನಾತ್ಮಕ ಪೋಸ್ಟ್
ಲೋಕಭವನದ ಗ್ಲಾಸ್‌ಹೌಸ್‌ನಲ್ಲಿ ಬುಧವಾರ ನಡೆಯಲಿರುವ ಸರಳ ಕಾರ್ಯಕ್ರಮದಲ್ಲಿ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದನ್ನೂ ಓದಿ: ಶಾಸಕಾಂಗ ಪಕ್ಷದ ನಾಯಕನಾಗಿ ಡಿ.ಕೆ.ಶಿವಕುಮಾರ್ ಆಯ್ಕೆ
