ಮುಂಬೈ: ಬಾಲಿವುಡ್ ನಟ ಟೈಗರ್ ಶ್ರಾಫ್ ಹಾಗೂ ನಟಿ ದಿಶಾ ಪಠಾಣಿ ನಡುವೆ ಲವ್ ಬ್ರೇಕಪ್ ಆಗಿದೆ ಎಂಬ ಸುದ್ದಿ ಬಿ-ಟೌನ್ನಲ್ಲಿ ಕೇಳಿ ಬರುತ್ತಿದೆ.
ಟೈಗರ್ ಹಾಗೂ ದಿಶಾ 3 ವರ್ಷಗಳಿಂದ ಡೇಟಿಂಗ್ ನಡೆಸುತ್ತಿದ್ದರು. ಆದರೆ ಈ ಬಗ್ಗೆ ದಿಶಾ ಆಗಲಿ ಟೈಗರ್ ಆಗಲಿ ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿರಲಿಲ್ಲ. ಇಬ್ಬರು ಕಾರ್ಯಕ್ರಮಕ್ಕೆ ಒಟ್ಟಿಗೆ ತಿರುಗಾಡುತ್ತಿರುವುದು ಕ್ಯಾಮೆರಾದಲ್ಲಿ ಸೆರೆ ಆಗಿತ್ತು.
ಕೆಲವು ದಿನಗಳ ಹಿಂದೆ ಟೈಗರ್ ಹಾಗೂ ದಿಶಾ ಸಂಬಂಧದಲ್ಲಿ ಯಾವುದು ಸರಿ ಇರಲಿಲ್ಲ. ಹಾಗಾಗಿ ಇಬ್ಬರು ಅಧಿಕೃತವಾಗಿ ಬ್ರೇಕಪ್ ಮಾಡಿಕೊಂಡಿದ್ದಾರೆ. ಇಬ್ಬರು ತಮ್ಮ ಒಪ್ಪಿಗೆಯ ಮೇರೆಗೆ ಕೆಲವು ವಾರಗಳ ಹಿಂದೆ ಬ್ರೇಕಪ್ ಮಾಡಿಕೊಂಡಿದ್ದಾರೆ ಎಂದು ವೆಬ್ಸೈಟ್ ನಲ್ಲಿ ವರದಿಯಾಗಿದೆ. ಇದನ್ನೂ ಓದಿ: ಇದುವರೆಗೂ ಯಾವ ಹುಡ್ಗನೂ ಪ್ರಪೋಸ್ ಮಾಡಿಲ್ಲ: ದಿಶಾ ಪಟಾನಿ
ರಿಲೇಶನ್ಶಿಪ್ನಲ್ಲಿ ಇರುವುದಕ್ಕಿಂತ ಒಳ್ಳೆಯ ಸ್ನೇಹಿತರಾಗಿ ಇರಬಹುದು ಎಂದು ಟೈಗರ್ ಹಾಗೂ ದಿಶಾ ಆಪ್ತರ ಮುಂದೆ ಹೇಳಿಕೊಂಡಿದ್ದಾರೆ. ಅಲ್ಲದೆ ಟೈಗರ್ ಹಾಗೂ ದಿಶಾ ಇಬ್ಬರು ಮೆಚ್ಯೂರ್ ಆಗಿದ್ದಾರೆ. ಮುಂದಿನ ದಿನಗಳಲ್ಲಿ ಇಬ್ಬರು ಜೋಡಿಯಾಗಿ ಇರುವುದಿಲ್ಲ. ಅವರು ಒಳ್ಳೆಯ ಸ್ನೇಹಿತರಾಗಿ ಇರುತ್ತಾರೆ ಎಂದು ಇಬ್ಬರಿಗೂ ಆತ್ಮೀಯರಾದ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.
ಈ ಹಿಂದೆ ಸಂದರ್ಶನವೊಂದರಲ್ಲಿ ದಿಶಾ, ‘ಇಂದಿನವರೆಗೂ ಯಾವ ಹುಡುಗ ನನಗೆ ಪ್ರಪೋಸ್ ಮಾಡಿಲ್ಲ. ನಾನು ಸುಳ್ಳು ಹೇಳುತ್ತಿಲ್ಲ, ಯಾವ ಹುಡುಗರಿಂದಲೂ ನನಗೆ ಪ್ರಪೋಸ್ ಮಾಡುವ ರೀತಿಯ ಸನ್ನೆಗಳು ಬಂದಿಲ್ಲ. ಟೈಗರ್ ಶ್ರಾಫ್ ಜೊತೆ ತಿರುಗಾಡುತ್ತೇನೆ. ಊಟಕ್ಕೆ ಹೋಗಿ ಎಂಜಾಯ್ ಮಾಡುತ್ತೇವೆ. ಕೇವಲ ನಾವಿಬ್ಬರು ಒಳ್ಳೆಯ ಗೆಳೆಯರು ಎಂಬ ದೃಷ್ಟಿಕೋನದಿಂದ ತಿರುಗಾಡುತ್ತೇವೆಯೇ ಹೊರತು ನಮ್ಮಿಬ್ಬರ ಮಧ್ಯೆ ಪ್ರೀತಿ ಪ್ರೇಮ ಏನಿಲ್ಲ. ಟೈಗರ್ ಗಾಗಿ ಜಿಮ್ನಾಸ್ಟಿಕ್ ಎಲ್ಲ ಮಾಡಿದ್ರೂ ಅವರು ಇಂಪ್ರೆಸ್ ಆಗಿಲ್ಲ’ ಎಂದು ಹೇಳುವ ಮೂಲಕ ಒನ್ಸೈಡ್ ಲವ್ ಕಹಾನಿಯನ್ನ ಬಿಚ್ಚಿಟ್ಟಿದ್ದರು.