ಪ್ರಧಾನಿ ನರೇಂದ್ರ ಮೋದಿ (Narendra Modi) ‘ಪಠಾಣ್’ (Pathan) ಸಿನಿಮಾವನ್ನು ಪರೋಕ್ಷವಾಗಿ ಸಂಸತ್ ನಲ್ಲಿ ಹೊಗಳಿದ್ದಾರೆ ಎನ್ನುವ ವಿಡಿಯೋ ಸಖತ್ ವೈರಲ್ ಆಗಿದೆ. ಸಂಸತ್ ನಲ್ಲಿ ಅವರು ಮಾತನಾಡುತ್ತಾ, ‘ದಶಕಗಳ ನಂತರ ಶ್ರೀನಗರದಲ್ಲಿ ಥಿಯೇಟರ್ (Theatre) ಹೌಸ್ ಫುಲ್ ಕಂಡಿದೆ’ ಎಂದು ಹೇಳಿದ್ದಾರೆ. ಸದ್ಯ ಶ್ರೀನಗರದಲ್ಲಿ (Srinagar) ಪಠಾಣ್ ಸಿನಿಮಾ ಪ್ರದರ್ಶನ ಆಗುತ್ತಿರುವ ಹಿನ್ನೆಲೆಯಲ್ಲಿ ಅವರು ಈ ಮಾತುಗಳನ್ನು ಆಡಿದ್ದಾರೆ ಎಂದು ಬಣ್ಣಿಸಲಾಗುತ್ತಿದೆ.
ಶಾರುಖ್ (Shah Rukh Khan) ಅಭಿಮಾನಿಗಳು ಮೋದಿ ಅವರ ಮಾತುಗಳನ್ನು ‘ಪಠಾಣ್’ ಸಿನಿಮಾ ಹಿನ್ನೆಲೆಯಲ್ಲೇ ಆಡಿದ್ದು ಎಂದು ಚರ್ಚೆ ಮಾಡುತ್ತಿದ್ದರೆ, ಮೋದಿ ಹಿಂಬಾಲಕರು ಶ್ರೀನಗರ ಇದೀಗ ಶಾಂತವಾಗಿ, ನೆಮ್ಮದಿಯಾಗಿ ಸಿನಿಮಾ ನೋಡುವಂತಹ ವಾತಾವರಣ ನಿರ್ಮಾಣವಾಗಿದೆ ಎನ್ನುವ ಅರ್ಥ ವಿವರಿಸುತ್ತಿದ್ದಾರೆ. ಮೋದಿ ಆಡಿದ ಆ ಮಾತು ಪಠಾಣ್ ಸಿನಿಮಾಗಿಂತಲೂ ಸಖತ್ ಫೇಮಸ್ ಕೂಡ ಆಗಿದೆ. ಇದನ್ನೂ ಓದಿ: ಸಾಲು ಸಾಲು ಸಿನಿಮಾಗಳ ನಡುವೆ ಕಾವಿತೊಟ್ಟು ಅಚ್ಚರಿ ಮೂಡಿಸಿದ ಮಿಲ್ಕಿ ಬ್ಯೂಟಿ
ಪಠಾಣ್ ಸಿನಿಮಾದಲ್ಲಿ ಹಿಂದೂಗಳ ಭಾವನೆಗೆ ಧಕ್ಕೆ ತರಲಾಗಿದೆ ಎನ್ನುವ ಕಾರಣಕ್ಕಾಗಿ ಬಾಯ್ಕಾಟ್ ಪಠಾಣ್ ಅಭಿಯಾನ ಶುರುವಾಗಿತ್ತು. ಕೆಲವು ಕಡೆ ಸಿನಿಮಾ ಪ್ರದರ್ಶನಕ್ಕೂ ಅಡೆತಡೆ ನೀಡಲಾಯಿತು. ಎಲ್ಲವನ್ನೂ ದಾಟಿಕೊಂಡು ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಗೆದ್ದಿದೆ. ಇನ್ನೂ ಹಲವು ಕಡೆ ಹೌಸ್ ಫುಲ್ ಪ್ರದರ್ಶನ ಕಂಡಿದೆ. ಬಾಯ್ಕಾಟ್ ನಡುವೆಯೂ ಸಿನಿಮಾ ಗೆದ್ದಿರುವುದಕ್ಕೆ ಮತ್ತೊಂದು ಸುತ್ತಿನ ಚರ್ಚೆ ಶುರುವಾಗಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k