Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಮಲಯಾಳಂ ಜೊತೆ ಕನ್ನಡದಲ್ಲೂ ಧೂಮಂ ರಿಲೀಸ್: ಹೊಂಬಾಳೆ ಫಿಲ್ಮ್ಸ್ ಘೋಷಣೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Cinema | ಮಲಯಾಳಂ ಜೊತೆ ಕನ್ನಡದಲ್ಲೂ ಧೂಮಂ ರಿಲೀಸ್: ಹೊಂಬಾಳೆ ಫಿಲ್ಮ್ಸ್ ಘೋಷಣೆ

Cinema

ಮಲಯಾಳಂ ಜೊತೆ ಕನ್ನಡದಲ್ಲೂ ಧೂಮಂ ರಿಲೀಸ್: ಹೊಂಬಾಳೆ ಫಿಲ್ಮ್ಸ್ ಘೋಷಣೆ

Public TV
Last updated: June 20, 2023 12:38 pm
Public TV
Share
2 Min Read
Dhoomam 2
SHARE

ಲೂಸಿಯಾ ಪವನ್ ನಿರ್ದೇಶನದಲ್ಲಿ ಮೂಡಿ ಬಂದಿರುವ ‘ಧೂಮಂ’ (Dhoomam) ಸಿನಿಮಾ ಇದೇ ಜೂನ್ 23 ರಂದು ದೇಶದಾದ್ಯಂತ ಬಿಡುಗಡೆ (Release) ಆಗುತ್ತಿದೆ. ಸಿನಿಮಾ ರಿಲೀಸ್ ಗೆ ಸಂಬಂಧಿಸಿದಂತೆ ಹಲವಾರು ಗೊಂದಲಗಳು ಇದ್ದವು. ಆ ಎಲ್ಲ ಗೊಂದಲಗಳಿಗೆ ತೆರೆ ಎಳೆದಿದೆ ಹೊಂಬಾಳೆ ಫಿಲ್ಮ್ಸ್ (Hombale Films). ಇದು ಮಲಯಾಳಂ ಸಿನಿಮಾವಾಗಿದ್ದರಿಂದ ಕೇವಲ ಮಲಯಾಳಂನಲ್ಲಿ ಮಾತ್ರ ಬಿಡುಗಡೆ ಆಗತ್ತಾ? ಅಥವಾ ಕನ್ನಡದಲ್ಲೂ ಡಬ್ ಆಗಿ ರಿಲೀಸ್ ಮಾಡಲಿದ್ದಾರಾ ಎನ್ನುವ ಪ್ರಶ್ನೆಯನ್ನು ಹಲವರು ಮಾಡಿದ್ದರು.

Dhoomam 1

ಸಿನಿಮಾ ರಿಲೀಸ್ ಗೆ ಸಂಬಂಧಿಸಿದಂತೆ ಹೊಂಬಾಳೆ ಫಿಲ್ಮ್ಸ್ ಪ್ರತಿಕ್ರಿಯೆ ನೀಡಿದ್ದು ಜೂನ್ 23 ರಂದು ಏಕಕಾಲದಲ್ಲೇ ಕನ್ನಡ ಮತ್ತು ಮಲಯಾಳಂ ಎರಡೂ ಭಾಷೆಯಲ್ಲೂ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಅವರು ಸ್ಪಷ್ಟ ಪಡಿಸಿದೆ. ಇತ್ತೀಚೆಗಷ್ಟೇ ಟ್ರೈಲರ್ ಬಿಡುಗಡೆಯಾಗಿದ್ದು, ಟ್ರೈಲರ್ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದನ್ನೂ ಓದಿ:ಮನುಷ್ಯರಂತೆ ವರ್ತಿಸಿ, ನನ್ನ ಪಾಡಿಗೆ ನನ್ನ ಬಿಟ್ಟುಬಿಡಿ- ‘ಪುಷ್ಪ’ ನಟಿ ಅನಸೂಯಾ

Dhoomam

ವಿಜಯ್ ಕಿರಗಂದೂರು ನಿರ್ಮಾಣದ, ‘ಲೂಸಿಯಾ’ ಮತ್ತು ‘ಯೂ ಟರ್ನ್’ ಖ್ಯಾತಿಯ ಪವನ್ ಕುಮಾರ್ (Pawan Kumar) ನಿರ್ದೇಶನ ಈ ಚಿತ್ರದಲ್ಲಿ ಫಹಾದ್ ಫಾಸಿಲ್, ಅಪರ್ಣ ಬಾಲಮುರಳಿ (Aparna), ಅಚ್ಯುತ್ ಕುಮಾರ್, ರೋಶನ್ ಮ್ಯಾಥ್ಯೂ, ವಿನೀತ್ ರಾಧಾಕೃಷ್ಣನ್, ಅನು ಮೋಹನ್, ಜಾಯ್ ಮ್ಯಾಥ್ಯೂ, ನಂದು ಮುಂತಾದವರು ನಟಿಸಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ, ಸುರೇಶ್ ಅವರ ಸಂಕಲನ ಮತ್ತು ಪ್ರೀತಾ ಜಯರಾಮನ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

Dhoomam 2

ಸಮಯದ ವಿರುದ್ಧದ ಓಟದಲ್ಲಿ ಸಿಕ್ಕಿರುವ ಅವಿ (ಫಹಾದ್ ಫಾಸಿಲ್) (Fahadh Faasil) ಮತ್ತು ದಿಯಾ (ಅಪರ್ಣ) ಸುತ್ತ ಈ ಚಿತ್ರ ಸುತ್ತುತ್ತದೆ. ಸುತ್ತ ಅಪಾಯ ಮತ್ತು ಮನಸ್ಸೊಳಗಿನ ಭಯವನ್ನು ಮೆಟ್ಟಿ ನಿಲ್ಲುವುದಕ್ಕೆ ಅವರಿಬ್ಬರೂ ಏನೆಲ್ಲಾ ತ್ಯಾಗಗಳನ್ನು ಮಾಡುತ್ತಾರೆ ಎಂಬುದೇ ಈ ಚಿತ್ರದ ಕಥೆ. ನಿರ್ದೇಶನದ ಜೊತೆಗೆ ಕಥೆ ಮತ್ತು ಚಿತ್ರಕಥೆಯನ್ನು ಪವನ್ ಅವರೇ ರಚಿಸಿದ್ದಾರೆ.

 

ಈ ಚಿತ್ರದ ಕುರಿತು ಮಾತನಾಡುವ ನಿರ್ದೇಶಕ ಪವನ್ ಕುಮಾರ್, ‘ಕಳೆದ ಒಂದು ದಶಕದಿಂದ ಈ ಚಿತ್ರವನ್ನು ಮಾಡಬೇಕು ಎಂಬ ಪ್ರಯತ್ನದಲ್ಲಿದ್ದೆ ಹಾಗೂ ಒಂದು ಅದ್ಭುತ ಚಿತ್ರ ಮಾಡುವ ನಿಟ್ಟಿನಲ್ಲಿ ಚಿತ್ರಕಥೆಯನ್ನು ಹಲವು ಬಾರಿ ತಿದ್ದಿದ್ದೆ. ಒಂದು ದಶಕದ ನನ್ನ ಕನಸನ್ನು ಇದೀಗ ಹೊಂಬಾಳೆ ಪ್ರೊಡಕ್ಷನ್ಸ್ ಸಂಸ್ಥೆಯು ನನಸು ಮಾಡಿದೆ. ಒಂದು ವಿಭಿನ್ನವಾದ ಕಥೆಯನ್ನು ತೆರೆಯ ಮೇಲೆ ತರುವುದಕ್ಕೆ ಕೈ ಜೋಡಿಸಿದೆ. ಹಲವು ಪ್ರತಿಭಾವಂತರ ತಂಡವನ್ನು ನೀಡಿ ಒಂದೊಳ್ಳೆಯ ಚಿತ್ರ ನೀಡುವುದಕ್ಕೆ ಸಂಪೂರ್ಣ ಸಹಕಾರ ನೀಡಿದೆ. ಈ ಚಿತ್ರ ಮತ್ತು ಕಥೆಯನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ ಎಂಬ ಕುತೂಹಲ ನನಗಿದೆ’ ಎನ್ನುತ್ತಾರೆ.

TAGGED:AparnaDhoomamFahadh FaasilHombale FilmsLucia PawanReleaseಅಪರ್ಣಧೂಮಂಫಾಹದ್ ಫಾಸಿಲ್ರಿಲೀಸ್ಲೂಸಿಯಾ ಪವನ್ಹೊಂಬಾಳೆ ಫಿಲ್ಮ್ಸ್
Share This Article
Facebook Whatsapp Whatsapp Telegram

Cinema news

gilli hanumantha
ಗಿಲ್ಲಿ ಅಣ್ಣ ನನ್ನ ಫೇವರಿಟ್, ಅವನೇ ಗೆಲ್ತಾನೆ: ಬಿಗ್ ಬಾಸ್ 11 ವಿನ್ನರ್ ಹನುಮಂತ ಮಾತು
Cinema Haveri Latest Main Post TV Shows
BBK 12 Gilli Nata Gym Ravi
ಗಲ್ಲಿ ಗಲ್ಲಿಯಲ್ಲಿ ಗಿಲ್ಲಿ ಹೆಸರು ಕೇಳಿ ಬರ್ತಿದೆ: ಜಿಮ್ ರವಿ
Latest Sandalwood Top Stories TV Shows
bigg boss sudeep
ಬಿಗ್‌ ಬಾಸ್‌ ವಿನ್ನರ್‌ ಯಾರು ಅನ್ನೋದು ಇಂದು ಸೂರ್ಯಾಸ್ತದ ಬಳಿಕ ಗೊತ್ತಾಗುತ್ತೆ: ಸುದೀಪ್‌
Cinema Latest Main Post TV Shows
bigg boss kannada 12 finalists
Bigg Boss: 12ರ ಗ್ರ‍್ಯಾಂಡ್ ಫಿನಾಲೆಗೆ ಕೌಂಟ್‌ಡೌನ್; ಯಾರಾಗ್ತಾರೆ ಬಿಗ್ ಬಾಸ್ 12ರ ವಿನ್ನರ್?
Cinema Latest Main Post TV Shows

You Might Also Like

Agriculture Award For Karnataka PM Fasal Bima Yojana
Bengaluru City

ಬೆಳೆ ವಿಮೆ ಯೋಜನೆ ಅನುಷ್ಠಾನದಲ್ಲಿ ರಾಜ್ಯ ಕೃಷಿ ಇಲಾಖೆಗೆ ದ್ವಿತೀಯ ಸ್ಥಾನ

Public TV
By Public TV
27 minutes ago
HT Manju
Bengaluru City

ಅಬಕಾರಿ ಇಲಾಖೆ ಕರ್ಮಕಾಂಡ | ಸನ್ನದು ಪಡೆಯಲು 2.30 ಕೋಟಿ ಬೇಡಿಕೆ ಆರೋಪದ ಆಡಿಯೋ ವೈರಲ್ – ಹೆಚ್‌ಟಿ ಮಂಜು ದೂರು

Public TV
By Public TV
35 minutes ago
Sara Mahesh
Bengaluru City

ಜೆಡಿಎಸ್‌ ಪಾಳಯದಲ್ಲಿ ಕ್ಷಿಪ್ರ ಕ್ರಾಂತಿ – ಜಿಟಿಡಿ ಕ್ಷೇತ್ರದಿಂದ ಸಾರಾ ಮಹೇಶ್‌ ಕಣಕ್ಕಿಳಿಸಲು ಪ್ಲ್ಯಾನ್‌!

Public TV
By Public TV
53 minutes ago
01 16
Districts

ಸಿದ್ರಾಮಯ್ಯಗೂ ಟ್ರಾಫಿಕ್‌ ಬಿಸಿ – ವಾಹನಗಳ ತೆರವಿಗೆ ಹರಸಾಹಸ; ಬೈಕ್ ಸವಾರನಿಗೆ ಒದಿಯಲು ಮುಂದಾದ ಎಸ್ಪಿ!

Public TV
By Public TV
1 hour ago
Vijay
Latest

ಕರೂರು ಕಾಲ್ತುಳಿತ – ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸಿಬಿಐನಿಂದ ವಿಜಯ್‌ಗೆ ಸಮನ್ಸ್

Public TV
By Public TV
1 hour ago
BN Ravikumar
Chikkaballapur

`ಧಮ್ಕಿʼ ರಾಜೀವ್‌ ಬಂಧಿಸದಂತೆ ಡಿಕೆಶಿ, ಮುನಿಯಪ್ಪ ಪೊಲೀಸರ ಮೇಲೆ ಒತ್ತಡ ಹಾಕಿದ್ದಾರೆ – ಶಾಸಕ ರವಿಕುಮಾರ್

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?