ನವದೆಹಲಿ: ನಾಗರಿಕ ವಿಮಾನಯಾನ ಸಂಸ್ಥೆಯ ಅಗತ್ಯ ನಿಯಮಗಳ ಉಲ್ಲಂಘನೆ ಹಿನ್ನೆಲೆ ಏರ್ಏಷ್ಯಾ (AirAsia) ವಿಮಾನಯಾನ ಸಂಸ್ಥೆಗೆ DGCA 44 ಲಕ್ಷ ರೂ. ಆರ್ಥಿಕ ದಂಡ ವಿಧಿಸಿದೆ. ಎರಡು ಪ್ರತ್ಯೇಕ ಪ್ರಕರಣಗಳಲ್ಲಿ 20 ಮತ್ತು 24 ಲಕ್ಷ ದಂಡವನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯ ವಿಧಿಸಿದೆ.
ಕಳೆದ ವರ್ಷದ ನವೆಂಬರ್ 22 -25 ವರೆಗೂ ಏರ್ಏಷ್ಯಾ ಲಿಮಿಟೆಡ್ ಮೇಲೆ ಕಣ್ಗಾವಲು ತಪಾಸಣೆ ನಡೆಸಿತ್ತು. ತಪಾಸಣೆ ವೇಳೆ ಏರ್ ಏಷ್ಯಾ ಪೈಲಟ್ಗಳು ಕಡ್ಡಾಯ ನಿಯಮಗಳನ್ನು ಪಾಲಿಸಿಲ್ಲ. ನಿಗದಿತ ವೇಳಾಪಟ್ಟಿಯಂತೆ ಪೈಲಟ್ ಪ್ರೊಫಿಷಿಯನ್ಸಿ ಚೆಕ್/ಇನ್ಸ್ಟ್ರುಮೆಂಟ್ ರೇಟಿಂಗ್ ಚೆಕ್ ಮಾಡಿಲ್ಲ. ಇದು ಅಂತಾರಾಷ್ಟ್ರೀಯ ಸಿವಿಲ್ ಏವಿಯೇಷನ್ ಆರ್ಗನೈಸೇಶನ್ ಕಡ್ಡಾಯ ನಿಯಮವಾಗಿರುವ ಹಿನ್ನೆಲೆ ನಿಯಮಗಳ ಉಲ್ಲಂಘನೆ ಎಂದು ಪರಿಗಣಿಸಿದೆ. ಇದನ್ನೂ ಓದಿ: ದೆಹಲಿ ಅಬಕಾರಿ ನೀತಿ ಹಗರಣ- ಸಂಸದನ ಪುತ್ರ ಅರೆಸ್ಟ್
Advertisement
Advertisement
ನಿಯಮಗಳ ಉಲ್ಲಂಘನೆ ಹಿನ್ನೆಲೆ ಸ್ಪಷ್ಟೀಕರಣ ನೀಡುವಂತೆ ಏರ್ಏಷ್ಯಾ ಲಿಮಿಟೆಡ್ಗೆ ಶೋಕಾಸ್ ನೋಟಿಸ್ ನೀಡಲಾಗಿತ್ತು. ನೋಟಿಸ್ಗೆ ನೀಡಿದ ಉತ್ತರ ಸಮರ್ಪಕವಲ್ಲದ ಕಾರಣಕ್ಕಾಗಿ 20 ಲಕ್ಷ ಆರ್ಥಿಕ ದಂಡವನ್ನು ವಿಧಿಸಿದೆ. ಅಲ್ಲದೇ ಶಿಸ್ತು ಉಲ್ಲಂಘನೆಗಾಗಿ ತರಬೇತಿ ವಿಭಾಗದ ಮುಖ್ಯಸ್ಥರನ್ನು ಮೂರು ತಿಂಗಳು ಅಮಾನತು ಮಾಡಲು ಸೂಚಿಸಿದೆ.
Advertisement
Advertisement
ಇದರ ಜೊತೆಗೆ DGCA ಸಿವಿಲ್ ಏವಿಯೇಷನ್ ಅವಶ್ಯಕತೆಗಳ ಪ್ರಕಾರ ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ವಿಫಲರಾದ ಏರ್ ಏಷ್ಯಾ (ಇಂಡಿಯಾ) ಲಿಮಿಟೆಡ್ನ ಎಂಟು ಗೊತ್ತುಪಡಿಸಿದ ಪರೀಕ್ಷಕರಿಗೆ ತಲಾ 3 ಆರ್ಥಿಕ ದಂಡವನ್ನು ವಿಧಿಸಿದ್ದು, ಒಟ್ಟು 44 ಲಕ್ಷವನ್ನು ದಂಡವನ್ನು ಏರ್ ಏಷ್ಯಾ ಇಂಡಿಯಾ ಮೇಲೆ ಹಾಕಲಾಗಿದೆ. ಇದನ್ನೂ ಓದಿ: ಟರ್ಕಿ ಭೂಕಂಪ – ನಾಪತ್ತೆಯಾಗಿದ್ದ ಬೆಂಗಳೂರು ಮೂಲದ ಟೆಕ್ಕಿ ಪಾಸ್ಪೋರ್ಟ್ ಪತ್ತೆ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k